ತಾಯಿ ಪ್ರಾಣ ಉಳಿಸಿಕೊಳ್ಳಲು ಕಲಬುರಗಿಯಲ್ಲಿ ಬಾಲಕನ ಪರದಾಟ; ಚಿಕಿತ್ಸೆ ಕೊಡಿಸಲು ಹಣ ಸಹಾಯಕ್ಕೆ ಮನವಿ

ಬೀದರ್​ನ ಗುಂಪಾ ನಗರದ ನಿವಾಸಿಯಾದ ಧನಲಕ್ಷ್ಮೀಗೆ 5 ತಿಂಗಳ ಹಿಂದೆ ಬೆಂಕಿ ಹಚ್ಚಿ ಆಕೆಯ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದ. ಗಾಯಗೊಂಡಿದ್ದ ಧನಲಕ್ಷ್ಮೀ ಬೀದರ್​ನ ಬಿಮ್ಸ್​ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ದೇಹ ಸುಟ್ಟಿದ್ದರಿಂದ ಮೇ 29ರಂದು ಬಸವೇಶ್ವರ ಆಸ್ಪತ್ರೆಗೆ ಮಹಿಳೆ ದಾಖಲಾಗಿದ್ದರು.

ತಾಯಿ ಪ್ರಾಣ ಉಳಿಸಿಕೊಳ್ಳಲು ಕಲಬುರಗಿಯಲ್ಲಿ ಬಾಲಕನ ಪರದಾಟ; ಚಿಕಿತ್ಸೆ ಕೊಡಿಸಲು ಹಣ ಸಹಾಯಕ್ಕೆ ಮನವಿ
ಮನವಿ ಮಾಡುತ್ತಿರುವ ಯವಕ, ಗಾಯಗೊಂಡಿರುವ ಧನಲಕ್ಷ್ಮೀ
Follow us
TV9 Web
| Updated By: sandhya thejappa

Updated on:Jun 06, 2021 | 3:38 PM

ಕಲಬುರಗಿ: ಬಾಲಕನೊಬ್ಬ ತನ್ನ ತಾಯಿಯ ಪ್ರಾಣವನ್ನು ಉಳಿಸಿಕೊಳ್ಳಲು ಪರದಾಟ ಪಟ್ಟಿರುವ ಘಟನೆ ಬಸವೇಶ್ವರ ಆಸ್ಪತ್ರೆಯ ಬಳಿ ನಡೆದಿದೆ. ಸುಟ್ಟ ಗಾಯಗಳಿಂದ ತಾಯಿ ಧನಲಕ್ಷ್ಮೀ ನರಳಾಡುತ್ತಿದ್ದಾರೆ. ಒಂದು ಕಡೆ ಮಕ್ಕಳಿಗಾಗಿ ತನ್ನ ಪ್ರಾಣ ಉಳಿಸಿ ಎಂದು ತಾಯಿ ಮನವಿ ಮಾಡಿಕೊಳ್ಳುತ್ತಿದ್ದಾಳೆ. ಇನ್ನೊಂದು ಕಡೆ ನನ್ನ ತಾಯಿಯ ಚಿಕಿತ್ಸೆಗೆ ಹಣ ನೀಡಿ ಎಂದು ಬಾಲಕ ಮನವಿ ಮಾಡಿಕೊಳ್ಳುತ್ತಿದ್ದಾನೆ.

ಬೀದರ್​ನ ಗುಂಪಾ ನಗರದ ನಿವಾಸಿಯಾದ ಧನಲಕ್ಷ್ಮೀಗೆ 5 ತಿಂಗಳ ಹಿಂದೆ ಬೆಂಕಿ ಹಚ್ಚಿ ಆಕೆಯ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದ. ಗಾಯಗೊಂಡಿದ್ದ ಧನಲಕ್ಷ್ಮೀ ಬೀದರ್​ನ ಬಿಮ್ಸ್​ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ದೇಹ ಸುಟ್ಟಿದ್ದರಿಂದ ಮೇ 29ರಂದು ಬಸವೇಶ್ವರ ಆಸ್ಪತ್ರೆಗೆ ಮಹಿಳೆ ದಾಖಲಾಗಿದ್ದರು. ಆರೋಗ್ಯ ಕರ್ನಾಟಕ ಸ್ಕೀಮ್​ನಲ್ಲಿ ಮಹಿಳೆಗೆ ಆಪರೇಶನ್ ಮಾಡಬೇಕಾಗಿತ್ತು. ಆದರೆ ಮಹಿಳೆಗೆ ರಕ್ತ ಕಡಿಮೆಯಿರುವ ಹಿನ್ನೆಲೆ ವೈದ್ಯರು ಶಸ್ತ್ರಚಿಕಿತ್ಸೆ ಮಾಡುತ್ತಿಲ್ಲ.

ಸದ್ಯ ಆಸ್ಪತ್ರೆಯಲ್ಲಿ 35 ಸಾವಿರ ಬಿಲ್ ಆಗಿದೆ. ಆಪರೇಷನ್ ಆದರೆ ಮಾತ್ರ ಸ್ಕೀಮ್​ನಲ್ಲಿ ಹಣ ನೀಡೋದಾಗಿ ಆರೋಗ್ಯ ಕರ್ನಾಟಕ ಸಿಬ್ಬಂದಿ ಹೇಳುತ್ತಿದ್ದಾರೆ. ಈ ನಡುವೆ ಆಸ್ಪತ್ರೆಗೆ ಹಣ ಕಟ್ಟಲು ಸಾಧ್ಯವಾಗದೆ ಬಾಲಕ ಪರದಾಡುತ್ತಿದ್ದಾನೆ. ತನ್ನ ತಾಯಿ ಇಲ್ಲದೇ ಹೋದರೆ ನಾನು ನನ್ನ ಎಂಟು ವರ್ಷದ ಸಹೋದರ ಅನಾಥವಾಗುತ್ತೀವಿ. ದಯವಿಟ್ಟು ಸಹಾಯ ಮಾಡಿ ಅಂತ ಬಾಲಕ ಮನವಿ ಮಾಡಿದ್ದಾನೆ.

ಸಹಾಯ ಮಾಡಲು ಇಚ್ಚಿಸುವವರು ಕರೆ ಮಾಡಿ:  9379379859 (ಚೆನ್ನಬಸು, ಪುತ್ರ)

ಕೊರೊನಾ ಸೋಂಕಿಗೆ ನಿವೃತ್ತ ಸೈನಿಕ ಸಾವು ಮಹಾಮಾರಿ ಕೊರೊನಾ ಸೋಂಕಿನಿಂದ 62 ವರ್ಷದ ಮಾಜಿ ಸೈನಿಕ ಧನಶೇಕರ್ ಸಾವನ್ನಪ್ಪಿದ್ದಾರೆ. ತಮಿಳುನಾಡಿನ ಕೃಷ್ಣಗಿರಿ ನಿವಾಸಿ ಧನಶೇಕರ್​ಗೆ ಮೇ 27 ರಂದು ಕೊರೊನಾ ಪಾಸಿಟಿವ್ ಬಂದಿತ್ತು. ಕಮಾಂಡೋ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ. ಅಂತ್ಯಕ್ರಿಯೆ ವೇಳೆ ಕುಟುಂಬಸ್ಥರು ಯಾರನ್ನು ಒಳ ಹೋಗಲು ಅವಕಾಶ ಇಲ್ಲದ ಕಾರಣ ಆ್ಯಂಬುಲೆನ್ಸ್ ಚಾಲಕರ ಜೊತೆ ಸಿವಿಲ್ ಡಿಫೆನ್ಸ್ ಸಿಬ್ಬಂದಿ ಸೇರಿ ಅಂತಿಮ ಕ್ರಿಯೆಯನ್ನು ನೆರವೇರಿಸಿದರು.

ಇದನ್ನೂ ಓದಿ

Coronavirus Cases in India: ದೇಶದಲ್ಲಿ ಹೊಸ ಕೊವಿಡ್ ಪ್ರಕರಣಗಳ ಸಂಖ್ಯೆ 1.14 ಲಕ್ಷಕ್ಕೆ ಇಳಿಕೆ, 2677 ಮಂದಿ ಸಾವು

ಎಚ್​ಐವಿ ಸೋಂಕಿತೆಯ ದೇಹದಲ್ಲಿ 32 ಬಗೆಯ ಕೊರೊನಾ ರೂಪಾಂತರಿ ವೈರಸ್​​ಗಳು; ಆತಂಕ ವ್ಯಕ್ತಪಡಿಸಿದ ಸಂಶೋಧಕರು

(Kalaburagi boy is appealing for help to treat his mother)

Published On - 3:24 pm, Sun, 6 June 21

ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
ಸಿದ್ದರಾಮಯ್ಯ ಬಹಳ ಸಲ ನನ್ನ ಮನೆಗೆ ಬಂದಿದ್ದಾರೆ: ಸತೀಶ್ ಜಾರಕಿಹೊಳಿ
ಸಿದ್ದರಾಮಯ್ಯ ಬಹಳ ಸಲ ನನ್ನ ಮನೆಗೆ ಬಂದಿದ್ದಾರೆ: ಸತೀಶ್ ಜಾರಕಿಹೊಳಿ