ಚಾಮರಾಜನಗರ ಆಕ್ಸಿಜನ್ ಪ್ರಕರಣ; ವರ್ಗಾವಣೆ ಬೆನ್ನಲ್ಲೆ ರಿಲೀಸ್ ಆಯ್ತು ರೋಹಿಣಿ ಸಿಂಧೂರಿ ಅವರ ಶಾಕಿಂಗ್ ಆಡಿಯೋ

ಚಾಮರಾಜನಗರ ಆಕ್ಸಿಜನ್ ಪ್ರಕರಣ; ವರ್ಗಾವಣೆ ಬೆನ್ನಲ್ಲೆ ರಿಲೀಸ್ ಆಯ್ತು ರೋಹಿಣಿ ಸಿಂಧೂರಿ ಅವರ ಶಾಕಿಂಗ್ ಆಡಿಯೋ
ರೋಹಿಣಿ ಸಿಂಧೂರಿ

ಮೈಸೂರಿನ ಸದರನ್ ಗ್ಯಾಸ್ ಏಜೆನ್ಸಿ ಜೊತೆ ರೋಹಿಣಿ ಸಿಂಧೂರಿ ಮಾತುಕತೆ ನಡೆಸಿದ್ದಾರೆ. ರಿಲೀಸ್ ಮಾಡಲಾಗಿರುವ ಆಡಿಯೋದಲ್ಲಿ ಚಾಮರಾಜನಗರ ಜಿಲ್ಲಾಸ್ಪತ್ರೆಗೆ ಏಕೆ ಅಷ್ಟು ಆಕ್ಸಿಜನ್ ಕೊಡುತ್ತಿದ್ದೀರಾ? ಸರಿಯಾಗಿ ಮಾಹಿತಿ ಪಡೆದು ಆಕ್ಸಿಜನ್ ಪೂರೈಕೆ ಮಾಡಿ. ನೀನು ಆಕ್ಸಿಜನ್ ಪೂರೈಕೆ ಮಾಡುತ್ತಿರುವ 43 ಆಸ್ಪತ್ರೆಗಳ ರೆಕಾರ್ಡ್ ತೆಗೆದು ಕೊಂಡು ಕಚೇರಿಗೆ ಬಾ ಎಂದು ಮೈಸೂರು ಡಿಸಿ ರೋಹಿಣಿ ಸಿಂಧೂರಿ ಆದೇಶಿಸಿದ್ದಾರೆ. ಇದಕ್ಕೆ ಆಯ್ತು ಮೇಡಂ ಬರುತ್ತೇನೆ ಎಂದು ಸಿಬ್ಬಂದಿ ಹೇಳಿದ್ದಾರೆ.

TV9kannada Web Team

| Edited By: Ayesha Banu

Jun 06, 2021 | 2:36 PM

ಚಾಮರಾಜನಗರ: ಮೇ 2 ರಂದು ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದ 37 ಜನ ಸಾವನಪ್ಪಿದ ಪ್ರಕರಣಕ್ಕೆ ಸಂಬಂಧಿಸಿ ಮೈಸೂರು ಡಿಸಿ ರೋಹಿಣಿ ಸಿಂಧೂರಿ ಮತ್ತು ಗ್ಯಾಸ್ ಏಜೆನ್ಸಿ ಮಾಲೀಕನ ನಡುವೆ ನಡೆದ ಸಂಭಾಷಣೆಯ ಆಡಿಯೋವನ್ನು ಬಿಜೆಪಿ ಮುಖಂಡ ಅಮ್ಮನಪುರ ಮಲ್ಲೇಶ್ ಆಡಿಯೋ ರಿಲೀಸ್ ಮಾಡಿದ್ದಾರೆ.

ಮೈಸೂರಿನ ಸದರನ್ ಗ್ಯಾಸ್ ಏಜೆನ್ಸಿ ಜೊತೆ ರೋಹಿಣಿ ಸಿಂಧೂರಿ ಮಾತುಕತೆ ನಡೆಸಿದ್ದಾರೆ. ರಿಲೀಸ್ ಮಾಡಲಾಗಿರುವ ಆಡಿಯೋದಲ್ಲಿ ಚಾಮರಾಜನಗರ ಜಿಲ್ಲಾಸ್ಪತ್ರೆಗೆ ಏಕೆ ಅಷ್ಟು ಆಕ್ಸಿಜನ್ ಕೊಡುತ್ತಿದ್ದೀರಾ? ಸರಿಯಾಗಿ ಮಾಹಿತಿ ಪಡೆದು ಆಕ್ಸಿಜನ್ ಪೂರೈಕೆ ಮಾಡಿ. ನೀನು ಆಕ್ಸಿಜನ್ ಪೂರೈಕೆ ಮಾಡುತ್ತಿರುವ 43 ಆಸ್ಪತ್ರೆಗಳ ರೆಕಾರ್ಡ್ ತೆಗೆದು ಕೊಂಡು ಕಚೇರಿಗೆ ಬಾ ಎಂದು ಮೈಸೂರು ಡಿಸಿ ರೋಹಿಣಿ ಸಿಂಧೂರಿ ಆದೇಶಿಸಿದ್ದಾರೆ. ಇದಕ್ಕೆ ಆಯ್ತು ಮೇಡಂ ಬರುತ್ತೇನೆ ಎಂದು ಸಿಬ್ಬಂದಿ ಹೇಳಿದ್ದಾರೆ.

ಹಾಗೂ ಮೈಸೂರು ಎಡಿಸಿ ನಾಗಾರಾಜು ಮತ್ತು ಪದಕಿ ಗ್ಯಾಸ್ ಏಜೆನ್ಸಿ ಸಿಬ್ಬಂದಿ ನಡುವೆ ನಡೆದ ಆಡಿಯೋ ಕೂಡ ರಿಲೀಸ್ ಆಗಿದೆ. ಈ ವಿಡಿಯೋದಲ್ಲಿ ಎಡಿಸಿ ನಾಗಾರಾಜು ಪದಕಿ ಗ್ಯಾಸ್ ಏಜೆನ್ಸಿ ಸಿಬ್ಬಂದಿ ಜೊತೆ ಮಾತನಾಡಿದ್ದಾರೆ. ಚಾಮರಾಜನಗರದಲ್ಲಿ ಮೆಡಿಕಲ್ ಎಮರ್ಜೆನ್ಸಿ ಆಗಿದೆ. ದಯವಿಟ್ಟು ಆಕ್ಸಿಜನ್ ಸಿಲಿಂಡರ್ ಕಳುಹಿಸಿ ಕೊಡು. ಈಗ ತಾನೇ ಸದರನ್ ಗ್ಯಾಸ್ ಏಜೆನ್ಸಿ ಮುಂಭಾಗದಿಂದ ಲಿಕ್ವಿಡ್ ಅಕ್ಸಿಜನ್ ಟ್ಯಾಂಕರ್ ಹೋಗಿದೆ. ನಾವು ಕೂಡ ಸದರನ್ ಗ್ಯಾಸ್ ಏಜೆನ್ಸಿಯಲ್ಲಿ ಇದ್ದು, ಸಿಲಿಂಡರ್ ಫಿಲ್ ಮಾಡಿಸುತ್ತಿದ್ದೇವೆ. ನೀವು ಕೂಡ 50 ಸಿಲಿಂಡರ್ ತುಂಬಿಸಿ ಕೊಡಿ ಎಂದು ಮೈಸೂರು ಎಡಿಸಿ ನಾಗಾರಾಜು ಸಿಬ್ಬಂದಿಯಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಆಡಿಯೋ ಸಂಭಾಷಣೆ ಸತೀಶ್: ಗ್ಯಾಸ್ ಟ್ಯಾಂಕರ್ ಬಂತಾ, ಯಾವಾಗ, ಎಷ್ಟೋತ್ತಿನಲ್ಲಿ. ಇನ್ನೂ ಆಕ್ಸಿಜನ್ ಬಂದಿಲ್ಲ. ನಾಗರಾಜು: ಸದ್ಯಕ್ಕೆ ಲಭ್ಯವಿರುವ ಸಿಲಿಂಡರ್ ಕಳುಹಿಸಿ ಕೊಡಿ, ಇದು ವಾದ ಮಾಡುವ ಸಮಯವಲ್ಲ. ಸದ್ಯಕ್ಕೆ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಸಮಸ್ಯೆ ಎದುರಾಗಿದೆ. ಸತೀಶ್: ನೀವು ಲೋಕಲ್ ಡಿಸಿ ಜೊತೆ ಕಾಲ್ ಮಾಡಿಸಿ, ನಾನು ಆಗ ಕೊಡುತ್ತೇನೆ, ಆ ಯಮ್ಮಾ ಸರಿ ಇಲ್ಲ, ಕೊಡ ಬೇಡ ಎಂದಿದ್ದಾರೆ. ನಾಗರಾಜು: ಡಿಸಿ ಅವರ ಪಿಎ ಜೊತೆ ಕರೆ ಮಾಡಿಸಲೇ.. ಸತೀಶ್: ಬೇಡ ಡಿಸಿ ಅವರ ಜೊತೆಗೆ ಕರೆ ಮಾಡಿಸಿ, ನಾನು ಅವಾಗ ಕೊಡುತ್ತೇನೆ. ನಮ್ಮ ಬಳಿ ಇರೋದು ಕೇವಲ ಐವತ್ತು ಟನ್ ಆಕ್ಸಿಜನ್ ಮಾತ್ರ. ಡಿಸಿ ಹೇಳುವ ತನಕ ಕೊಡುವುದಕ್ಕೆ ಆಗುವುದಿಲ್ಲ.

ಇದನ್ನೂ ಓದಿ: ವರ್ಗಾವಣೆ ಬೆನ್ನಲ್ಲೇ ಸಿಎಂ ಯಡಿಯೂರಪ್ಪ ನಿವಾಸಕ್ಕೆ ರೋಹಿಣಿ ಸಿಂಧೂರಿ ಭೇಟಿ

Follow us on

Most Read Stories

Click on your DTH Provider to Add TV9 Kannada