ಬಿಜೆಪಿ ಯುವಮೋರ್ಚಾದಿಂದ ಲಾಕ್​ಡೌನ್ ಪ್ಯಾಕೇಜ್ ಪಡೆಯಲು ಕಾರ್ಮಿಕ ವರ್ಗಕ್ಕೆ ನೆರವು

Lockdown Package: ಸೇವಾ ಸಿಂಧುವಿನ ಸೇವಾ ಕೇಂದ್ರ ತೆರೆದು ಸದ್ಯ 4 ದಿನಗಳಾಗಿವೆ. ಈಗಾಗಲೇ 350 ಕಾರ್ಮಿಕರು, ಟೈಲರ್ ಗಳು, ಆಟೋ ಚಾಲಕರು, ಬಡ ಜನರು ಈ ಕೇಂದ್ರಕ್ಕೆ ಆಗಮಿಸಿ ಸಹಾಯ ಪಡೆದುಕೊಂಡಿದ್ದಾರೆ. ಲಾಕ್​ಡೌನ್ ಪ್ಯಾಕೇಜ್​ಗೆ ಅರ್ಹರಿದ್ದೂ ಸಹಾಯ ಧನ ಪಡೆಯಲು ಸಾಧ್ಯವಿಲ್ಲವೋ ಅಂತವರಿಗೆ ರಾಜ್ಯ ಬಿಜೆಪಿ ಯುವಮೋರ್ಚಾ ತೆರೆದಿರುವ ಸೇವಾ ಕೇಂದ್ರ ವರದಾನವಾಗಿದೆ.

ಬಿಜೆಪಿ ಯುವಮೋರ್ಚಾದಿಂದ ಲಾಕ್​ಡೌನ್ ಪ್ಯಾಕೇಜ್ ಪಡೆಯಲು ಕಾರ್ಮಿಕ ವರ್ಗಕ್ಕೆ ನೆರವು
ಸೇವಾ ಕೇಂದ್ರದ ಒಂದು ದೃಶ್ಯ
Follow us
TV9 Web
| Updated By: guruganesh bhat

Updated on: Jun 06, 2021 | 3:10 PM

ಕೊವಿಡ್​ನಿಂದ ತೊಂದರೆಗೊಳಗಾದ ಕಾರ್ಮಿಕ ವರ್ಗಗಳಿಗೆ ರಾಜ್ಯ ಸರ್ಕಾರ ಈಗಾಗಲೇ ಪರಿಹಾರ ಘೋಷಿಸಿದೆ. ಲಾಕ್​ಡೌನ್ ಪ್ಯಾಕೇಜನ್ನು ಸೇವಾ ಸಿಂಧು ಪೋರ್ಟಲ್ ಮೂಲಕ ಪರಿಹಾರ ಪಡೆಯಬಹುದಾಗಿದೆ. ಆದರೆ ಎಷ್ಟೋ ಕಾರ್ಮಿಕರು ಪರಿಹಾರವನ್ನು ಪಡೆಯಲು ಸಹ ಸಾಧ್ಯವಾಗದ ಸ್ಥಿತಿಯಲ್ಲಿದ್ದಾರೆ. ಅಂತಹ ಬಡಜನರಿಗೆ, ಕಾರ್ಮಿಕ ವರ್ಗಕ್ಕೆ ಸೇವಾ ಸಿಂಧು ಪೋರ್ಟಲ್ ಪೋರ್ಲ್ ಬಳಕೆ ಬಗ್ಗೆ ಅವರಿಗೆ ಅರಿವಿಲ್ಲ. ಅಂತರ್ಜಾಲದ ಬಳಕೆ ತಿಳಿದಿಲ್ಲ. ಅಂತಹ ಕಟ್ಟಡ ಕಾರ್ಮಿಕರು ಮತ್ತು ಅಸಂಘಟಿತ ಕಾರ್ಮಿಕರಿಗೆ ಎಂದೇ ರಾಜ್ಯ ಬಿಜೆಪಿ ಯುವಮೋರ್ಚಾ ಸೇವಾ ಕೇಂದ್ರ ತೆರೆದಿದೆ.

ಬೆಂಗಳೂರು ನಗರದ ರಾಜರಾಜೇಶ್ವರಿ ನಗರ ವಿಧಾನಸಭಾ ವ್ಯಾಪ್ತಿಯಲ್ಲಿ ಈ ಸೇವಾ ಕೇಂದ್ರ ತೆರೆಯಲಾಗಿದ್ದು,  ಬೆಂಗಳೂರು ವ್ಯಾಪ್ತಿಯಲ್ಲಿ ಎಲ್ಲರಿಗೂ ಸೇವೆ ನೀಡಲಾಗುತ್ತಿದೆ. ಮೊದಲ ಹಂತದಲ್ಲಿ ಸಾವಿರ ಜನರಿಗೆ ಸಹಾಯ ಮಾಡುವ ಉದ್ದೇಶವನ್ನು ಹೊಂದಲಾಗಿದೆ. ಸೇವಾ ಸಿಂಧು ಪೋರ್ಟಲ್​ನಲ್ಲಿ ಕಾರ್ಮಿಕ ವರ್ಗಕ್ಕೆ ಲಾಕ್​ಡೌನ್ ಪ್ಯಾಕೇಜ್ ಪಡೆಯಲು ಅಗತ್ಯವಿಡುವ ಎಲ್ಲ ವ್ಯವಸ್ಥೆಯನ್ನು ಮಾಡಿಕೊಡಲಾಗುತ್ತಿದೆ.

ಸೇವಾ ಸಿಂಧುವಿನ ಸೇವಾ ಕೇಂದ್ರ ತೆರೆದು ಸದ್ಯ 4 ದಿನಗಳಾಗಿವೆ. ಈಗಾಗಲೇ 350 ಕಾರ್ಮಿಕರು, ಟೈಲರ್ ಗಳು, ಆಟೋ ಚಾಲಕರು, ಬಡ ಜನರು ಈ ಕೇಂದ್ರಕ್ಕೆ ಆಗಮಿಸಿ ಸಹಾಯ ಪಡೆದುಕೊಂಡಿದ್ದಾರೆ. ಲಾಕ್​ಡೌನ್ ಪ್ಯಾಕೇಜ್​ಗೆ ಅರ್ಹರಿದ್ದೂ ಸಹಾಯ ಧನ ಪಡೆಯಲು ಸಾಧ್ಯವಿಲ್ಲವೋ ಅಂತವರಿಗೆ ರಾಜ್ಯ ಬಿಜೆಪಿ ಯುವಮೋರ್ಚಾ ತೆರೆದಿರುವ ಸೇವಾ ಕೇಂದ್ರ ವರದಾನವಾಗಿದೆ. ಸೈಬರ್ ಕೇಂದ್ರಗಳಿಗೆ ತೆರಳಿ ಹಣ ನೀಡಿ ನೋಂದಣಿ ಮಾಡಿಕೊಳ್ಳಲು ಸಾಧ್ಯವಾಗದವರು ಸಹ ಈ ಸೇವಾ ಕೇಂದ್ರದ ಮೂಲಕ ಲಾಕ್​ಡೌನ್ ಪ್ಯಾಕೇಜ್ ಹಣಕ್ಕಾಗಿ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಮಾಹಿತಿ ನೀಡುತ್ತಾರೆ ಯುವಮೋರ್ಚಾದ ರಾಜ್ಯ ಕಾರ್ಯಕಾರಿಣಿ ಸದಸ್ಯ ಜಗದೀಶ್ ಆರ್ ಚಂದ್ರ.

ಬಿಜೆಪಿ ಯುವಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ ತೇಜಸ್ವೀ ಸೂರ್ಯ, ರಾಜ್ಯ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಡಾ. ಸಂದೀಪ್ ಕುಮಾರ್, ರಾಜರಾಜೇಶ್ವರಿ ನಗರದ ಶಾಸಕ ಮುನಿರತ್ನ ಅವರುಗಳ ಮಾರ್ಗದರ್ಶನದಲ್ಲಿ ಸೇವಾ ಕೇಂದ್ರವನ್ನು ತೆರೆಯಲಾಗಿದೆ ಎಂದು ಅವರು ಹೇಳುತ್ತಾರೆ.. ಹಿಂದಿನ ವರ್ಷದ ಲಾಕ್​ಡೌನ್​ನ ಅವಧಿಯಲ್ಲೂ ಸೇವಾ ಕೇಂದ್ರ ಆರಂಭಿಸಿದ್ದು, 500 ಜನರಿಗೆ ಸಹಾಯ ನೀಡಲಾಗಿತ್ತು ಎಂದು ಯುವಮೋರ್ಚಾದ ರಾಜ್ಯ ಕಾರ್ಯಕಾರಿಣಿ ಸದಸ್ಯ ಜಗದೀಶ್ ಆರ್ ಚಂದ್ರ ನೆನೆಯುತ್ತಾರೆ.

ಇದನ್ನೂ ಓದಿ: ಸಾವಿರಾರು ಆಟೊ ಚಾಲಕರಿಗೆ ಉಚಿತ ಲಸಿಕೆ ವಿತರಣೆ: ತೇಜಸ್ವಿ ಸೂರ್ಯ

ಕೇವಲ 100 ಘಂಟೆಗಳಲ್ಲಿ ಬಿಬಿಎಂಪಿ ಬೆಡ್ ಬುಕಿಂಗ್ ವಿಧಾನದಲ್ಲಿ ಮಹತ್ವದ 4 ಸುಧಾರಣೆ: ಸಂಸದ ತೇಜಸ್ವಿ ಸೂರ್ಯ

(Assistance to the working class to get a lockdown package from BJP Yuva Morcha in Bangalore Rajarajeshwari Nagar)