ಜಾತ್ರೆಗಳಿಲ್ಲದೆ ಬಳೆ ಮಾರಾಟಗಾರಿಗೆ ಸಂಕಷ್ಟ; ಲಾಕ್​ಡೌನ್​ನಿಂದಾಗಿ ವ್ಯಾಪಾರಿಗಳು ಕಂಗಾಲು

ಜಾತ್ರೆಗಳಿಲ್ಲದೆ ಬಳೆ ಮಾರಾಟಗಾರಿಗೆ ಸಂಕಷ್ಟ; ಲಾಕ್​ಡೌನ್​ನಿಂದಾಗಿ ವ್ಯಾಪಾರಿಗಳು ಕಂಗಾಲು
ವ್ಯಾಪಾರವಾಗದೆ ಹಾಗೆ ಉಳಿದಿರುವ ಬಳೆಗಳು

ಮಂಡ್ಯ ತಾಲೂಕಿನ ಶಿವಾರ ಕಾಲೋನಿಯ ಜನರು ಲಾಕ್​ಡೌನ್​ನಿಂದಾಗಿ ತೊಂದರೆ ಎದುರಿಸುತ್ತಿದ್ದಾರೆ. ನೂರಕ್ಕೂ ಹೆಚ್ಚು ಮನೆಗಳಿರುವ ಈ ಪ್ರದೇಶದಲ್ಲಿ ಸುಮಾರು 400 ರಷ್ಟು ಜನರು ವಾಸಿಸುತ್ತಿದ್ದಾರೆ. ಇಲ್ಲಿನ ಬಹುತೇಕ ಎಲ್ಲರ ಕಸುಬು ಬಳೆ ಮತ್ತು ದಿನ ಬಳಕೆಯ ವಸ್ತುಗಳನ್ನ ಮಾರಾಟ ಮಾಡುವುದು.

TV9kannada Web Team

| Edited By: preethi shettigar

Jun 06, 2021 | 1:47 PM

ಮಂಡ್ಯ: ಜಿಲ್ಲೆಯ ಜನರಲ್ಲಿ ಕೆಲವರು ಹಬ್ಬ ಹರಿದಿನಗಳಲ್ಲಿ, ಜಾತ್ರೆಗಳಲ್ಲಿ ಬಳೆ ಮತ್ತು ಇನ್ನಿತರ ವಸ್ತುಗಳನ್ನ ಮಾರಾಟ ಮಾಡಿಕೊಂಡು ಬದುಕು ಸಾಗಿಸುತ್ತಿದ್ದರು, ಇನ್ನೂ ಕೆಲವರು ಊರೂರ ಮೇಲೆ ಈ ವಸ್ತುಗಳನ್ನ ಮಾರಾಟ ಮಾಡಿಕೊಂಡು ಹೇಗೋ ಜೀವನ ಸಾಗಿಸುತ್ತಿದ್ದರು. ಹೀಗಿರುವಾಗಲೇ ಕೊರೊನಾ ಎರಡನೇ ಅಲೆ ಬಂದಿದ್ದು, ಪರಿಸ್ಥಿತಿ ಸುಧಾರಣೆಗೆ ಈಗ ಎಲ್ಲೆಡೆ ಲಾಕ್​ಡೌನ್ ಜಾರಿಗೆ ತರಲಾಗಿದೆ. ಹೀಗಾಗಿ ಈಗ ಹಬ್ಬ, ಜಾತ್ರೆಗಳು ಮತ್ತು ಇನ್ನಿತರ ಯಾವುದೇ ಆಚರಣೆಗಳು ನಡೆಯುತ್ತಿಲ್ಲ. ಇನ್ನು ಊರೂರ ಮೇಲೆ ಮಾರಾಟ ಮಾಡಲು ಹೋದರೆ ಜನರೇ ಇವರನ್ನ ಊರಿಗೆ ಸೇರಿಸುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಮಂಡ್ಯದ ವ್ಯಾಪಾರಿಗಳು ಕಂಗಾಲಾಗಿದ್ದಾರೆ.

ಮಂಡ್ಯ ತಾಲೂಕಿನ ಶಿವಾರ ಕಾಲೋನಿಯ ಜನರು ಲಾಕ್​ಡೌನ್​ನಿಂದಾಗಿ ಈ ತೊಂದರೆ ಎದುರಿಸುತ್ತಿದ್ದಾರೆ. ನೂರಕ್ಕೂ ಹೆಚ್ಚು ಮನೆಗಳಿರುವ ಈ ಪ್ರದೇಶದಲ್ಲಿ ಸುಮಾರು 400 ರಷ್ಟು ಜನರು ವಾಸಿಸುತ್ತಿದ್ದಾರೆ. ಇಲ್ಲಿನ ಬಹುತೇಕ ಎಲ್ಲರ ಕಸುಬು ಬಳೆ ಮತ್ತು ದಿನ ಬಳಕೆಯ ವಸ್ತುಗಳನ್ನ ಮಾರಾಟ ಮಾಡುವುದು. ಇದರಿಂದ ಬರುವ ಹಣದಿಂದಲೇ ಇವರು ಬದುಕು ಸಾಗಿಸುತ್ತಿದ್ದಾರೆ. ಕೊರೊನಾ ಎಲ್ಲರ ಬದುಕಿನ ಮೇಲೆ ಪರಿಣಾಮ ಬೀರಿರುವಂತೆ ಇವರ ಬದುಕಿನ ಮೇಲೂ ಸಾಕಷ್ಟು ಪರಿಣಾಮ ಬೀರಿದೆ. ಹೀಗಾಗಿ ಕಳೆದ ಹಲವು ದಿನಗಳಿಂದ ಒಂದೊತ್ತಿನ ಊಟಕ್ಕೂ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದ್ದು, ಯಾರಾದರೂ ತಮಗೆ ನೆರವು ನೀಡಿ ಎಂದು ಶಿವಾರ ಕಾಲೋನಿ ನಿವಾಸಿ ಕುಮಾರ್ ಸಹಾಯ ಕೋರಿದ್ದಾರೆ.

ಈ ಊರಿನಲ್ಲಿ ಪುರುಷರಷ್ಟೇ ಅಲ್ಲ ಮಹಿಳೆಯರೂ ಸಹ ಊರೂರ ಮೇಲೆ ಬಳೆ ವ್ಯಾಪಾರ ಮಾಡಲು ಹೋಗುತ್ತಿದ್ದರು. ಅದರಿಂದ ಬರುವ ಹಣದಿಂದ ತಮ್ಮ ತಮ್ಮ ಕುಟುಂಬಕ್ಕೆ ನೆರವಾಗುತ್ತಿದ್ದರು. ಆದರೆ ಈಗ ಕೊರೊನಾ ವ್ಯಾಪಕವಾಗುವ ಮೊದಲು ತಂದಿರುವ ಬಳೆ ಮತ್ತು ವಸ್ತುಗಳು ಮಾರಾಟವಾಗದೆ ಹಾಗೆಯೇ ಉಳಿದಿವೆ. 100 ಮನೆಗಳನ್ನು ಹೊಂದಿರುವ ಈ ಶಿವಾರ ಕಾಲೋನಿಯ ಎಲ್ಲರ ಮನೆಗಳಲ್ಲೂ ವಸ್ತುಗಳು ಉಳಿದುಕೊಂಡಿವೆ. ಎಲ್ಲರೂ ಮೂಟೆಕಟ್ಟಿ ಹಾಗೆ ಇಟ್ಟುಕೊಂಡಿದ್ದಾರೆ. ಇಂತಹ ಸಂದರ್ಭದಲ್ಲಿ ಸರ್ಕಾರ ನೀಡುತ್ತಿರುವ ಪಡಿತರದಿಂದಲೇ ಹೇಗೋ ಊಟ ಮಾಡುತ್ತಿದ್ದೇವೆ ಎಂದು ಬಳೆ ವ್ಯಾಪಾರ ಮಾಡುತ್ತಿದ್ದ ಜಯಮ್ಮ ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:

ಗದಗದ ಹೂವು ಬೆಳೆಗಾರರಲ್ಲಿ ಹೆಚ್ಚಿದ ಆತಂಕ; ವ್ಯಾಪಾರವಿಲ್ಲದೆ ಹುಬ್ಬಳ್ಳಿ ಮಾರುಕಟ್ಟೆಯ ಕಸದ ತೊಟ್ಟಿಗೆ ಸೇವಂತಿ ಎಸೆದ ರೈತರು

ಲಾಕ್​ಡೌನ್​ನಿಂದಾಗಿ ರೇಷ್ಮೆಗೂಡಿನ ಬೆಲೆಯಲ್ಲಿ ಕುಸಿತ; ರಾಮನಗರದ ರೈತರಲ್ಲಿ ಹೆಚ್ಚಿದ ಆತಂಕ

Follow us on

Related Stories

Most Read Stories

Click on your DTH Provider to Add TV9 Kannada