AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಾಮರಾಜನಗರ ಜಿಲ್ಲಾಸ್ಪತ್ರೆಗೆ ಆಕ್ಸಿಜನ್ ಏಕೆ ಸರಬರಾಜಾಗಿಲ್ಲವೆಂಬುದು ತಿಳಿದಿದೆ, ಆದರೆ ಸತ್ಯವನ್ನು ಸಾರ್ವಜನಿಕವಾಗಿ ಹೇಳಲಾಗದು: ಸಂಸದ ಪ್ರತಾಪ್ ಸಿಂಹ

ರಾಜ್ಯದಲ್ಲಿ ನಮ್ಮ ಪಕ್ಷವೇ ಆಡಳಿತ ನಡೆಸುತ್ತಿದೆ. ಎಲ್ಲಾ ಅಧಿಕಾರಿಗಳು ನಮ್ಮ ಅಧೀನದಲ್ಲೇ ಕೆಲಸ ಮಾಡುತ್ತಿದ್ದಾರೆ. ಎಲ್ಲಾ ಸತ್ಯಗಳನ್ನು ಹೇಳಲು ಆಗಲ್ಲ. ಸದ್ಯ ಅದ್ಯಾವುದೋ ತೇಪೆ ಹಚ್ಚುವ ವರದಿಯನ್ನು ಕೊಟ್ಟಿದ್ದಾರೆ. ಆ ಬಗ್ಗೆ ತನಿಖೆ ನಡೆಯುತ್ತಿದೆ, ಅದರ ಸತ್ಯಾಂಶ ಗೊತ್ತಾಗಲಿದೆ: ಸಂಸದ ಪ್ರತಾಪ್ ಸಿಂಹ

ಚಾಮರಾಜನಗರ ಜಿಲ್ಲಾಸ್ಪತ್ರೆಗೆ ಆಕ್ಸಿಜನ್ ಏಕೆ ಸರಬರಾಜಾಗಿಲ್ಲವೆಂಬುದು ತಿಳಿದಿದೆ, ಆದರೆ ಸತ್ಯವನ್ನು ಸಾರ್ವಜನಿಕವಾಗಿ ಹೇಳಲಾಗದು: ಸಂಸದ ಪ್ರತಾಪ್ ಸಿಂಹ
ಸಾಂಕೇತಿಕ ಚಿತ್ರ
TV9 Web
| Edited By: |

Updated on: Jun 06, 2021 | 3:54 PM

Share

ಮೈಸೂರು: ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ 24 ರೋಗಿಗಳ ಸಾವು ಪ್ರಕರಣದಲ್ಲಿ ಚಾಮರಾಜನಗರಕ್ಕೆ ಏಕೆ ಆಕ್ಸಿಜನ್ ಹೋಗಿಲ್ಲವೆಂದು ಗೊತ್ತಿದೆ. ಆದರೆ ಆ ಸತ್ಯವನ್ನು ಸಾರ್ವಜನಿಕವಾಗಿ ಹೇಳಲಾಗುವುದಿಲ್ಲ ಎಂದು ಸಂಸದ ಪ್ರತಾಪ್ ಸಿಂಹ ಫೇಸ್​ಬುಕ್ ಪೋಸ್ಟ್ ಒಂದರಲ್ಲಿ ಹೇಳಿಕೊಂಡರು.

ರಾಜ್ಯದಲ್ಲಿ ನಮ್ಮ ಪಕ್ಷವೇ ಆಡಳಿತ ನಡೆಸುತ್ತಿದೆ. ಎಲ್ಲಾ ಅಧಿಕಾರಿಗಳು ನಮ್ಮ ಅಧೀನದಲ್ಲೇ ಕೆಲಸ ಮಾಡುತ್ತಿದ್ದಾರೆ. ಎಲ್ಲಾ ಸತ್ಯಗಳನ್ನು ಹೇಳಲು ಆಗಲ್ಲ. ಸದ್ಯ ಅದ್ಯಾವುದೋ ತೇಪೆ ಹಚ್ಚುವ ವರದಿಯನ್ನು ಕೊಟ್ಟಿದ್ದಾರೆ. ಆ ಬಗ್ಗೆ ತನಿಖೆ ನಡೆಯುತ್ತಿದೆ, ಅದರ ಸತ್ಯಾಂಶ ಗೊತ್ತಾಗಲಿದೆ. ಸಚಿವ ಸುರೇಶ್ ಕುಮಾರ್‌ ನಮ್ಮ ಡಿಸಿ ಬಗ್ಗೆ ಆರೋಪಿಸಿದ್ದರು. ಮೈಸೂರನ್ನು ಕಟ ಕಟೆಯಲ್ಲಿ ನಿಲ್ಲಸಬಾರದು ಎಂಬ ಕಾರಣಕ್ಕೆ ಮತ್ತು ಮೈಸೂರು, ಮಂಡ್ಯ, ಚಾಮರಾಜನಗರಕ್ಕೆ ಜಗಳವಾಗುತ್ತೆಂದು ಆ ಸಂದರ್ಭದಲ್ಲಿ ನಾನು ಸಮರ್ಥಿಸಿಕೊಂಡಿದ್ದೆ ಎಂದು ಅವರು ಹೇಳಿಕೊಂಡಿದ್ದಾರೆ.

ವರ್ಗಾವಣೆ ಬೆನ್ನಲ್ಲೆ ರಿಲೀಸ್ ಆಯ್ತು ರೋಹಿಣಿ ಸಿಂಧೂರಿ ಅವರ ಶಾಕಿಂಗ್ ಆಡಿಯೋ

ಮೇ 2 ರಂದು ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದ 37 ಜನ ಸಾವನಪ್ಪಿದ ಪ್ರಕರಣಕ್ಕೆ ಸಂಬಂಧಿಸಿ ಮೈಸೂರು ಡಿಸಿ ರೋಹಿಣಿ ಸಿಂಧೂರಿ ಮತ್ತು ಗ್ಯಾಸ್ ಏಜೆನ್ಸಿ ಮಾಲೀಕನ ನಡುವೆ ನಡೆದ ಸಂಭಾಷಣೆಯ ಆಡಿಯೋವನ್ನು ಬಿಜೆಪಿ ಮುಖಂಡ ಅಮ್ಮನಪುರ ಬಿಡುಗಡೆ ಮಾಡಿದ್ದಾರೆ.

ಮೈಸೂರಿನ ಸದರನ್ ಗ್ಯಾಸ್ ಏಜೆನ್ಸಿ ಜೊತೆ ರೋಹಿಣಿ ಸಿಂಧೂರಿ ಮಾತುಕತೆ ನಡೆಸಿದ್ದಾರೆ. ರಿಲೀಸ್ ಮಾಡಲಾಗಿರುವ ಆಡಿಯೋದಲ್ಲಿ ಚಾಮರಾಜನಗರ ಜಿಲ್ಲಾಸ್ಪತ್ರೆಗೆ ಏಕೆ ಅಷ್ಟು ಆಕ್ಸಿಜನ್ ಕೊಡುತ್ತಿದ್ದೀರಾ? ಸರಿಯಾಗಿ ಮಾಹಿತಿ ಪಡೆದು ಆಕ್ಸಿಜನ್ ಪೂರೈಕೆ ಮಾಡಿ. ನೀನು ಆಕ್ಸಿಜನ್ ಪೂರೈಕೆ ಮಾಡುತ್ತಿರುವ 43 ಆಸ್ಪತ್ರೆಗಳ ರೆಕಾರ್ಡ್ ತೆಗೆದು ಕೊಂಡು ಕಚೇರಿಗೆ ಬಾ ಎಂದು ಮೈಸೂರು ಡಿಸಿ ರೋಹಿಣಿ ಸಿಂಧೂರಿ ಆದೇಶಿಸಿದ್ದಾರೆ. ಇದಕ್ಕೆ ಆಯ್ತು ಮೇಡಂ ಬರುತ್ತೇನೆ ಎಂದು ಸಿಬ್ಬಂದಿ ಹೇಳಿದ್ದಾರೆ.

ಹಾಗೂ ಮೈಸೂರು ಎಡಿಸಿ ನಾಗಾರಾಜು ಮತ್ತು ಪದಕಿ ಗ್ಯಾಸ್ ಏಜೆನ್ಸಿ ಸಿಬ್ಬಂದಿ ನಡುವೆ ನಡೆದ ಆಡಿಯೋ ಕೂಡ ರಿಲೀಸ್ ಆಗಿದೆ. ಈ ವಿಡಿಯೋದಲ್ಲಿ ಎಡಿಸಿ ನಾಗಾರಾಜು ಪದಕಿ ಗ್ಯಾಸ್ ಏಜೆನ್ಸಿ ಸಿಬ್ಬಂದಿ ಜೊತೆ ಮಾತನಾಡಿದ್ದಾರೆ. ಚಾಮರಾಜನಗರದಲ್ಲಿ ಮೆಡಿಕಲ್ ಎಮರ್ಜೆನ್ಸಿ ಆಗಿದೆ. ದಯವಿಟ್ಟು ಆಕ್ಸಿಜನ್ ಸಿಲಿಂಡರ್ ಕಳುಹಿಸಿ ಕೊಡು. ಈಗ ತಾನೇ ಸದರನ್ ಗ್ಯಾಸ್ ಏಜೆನ್ಸಿ ಮುಂಭಾಗದಿಂದ ಲಿಕ್ವಿಡ್ ಅಕ್ಸಿಜನ್ ಟ್ಯಾಂಕರ್ ಹೋಗಿದೆ. ನಾವು ಕೂಡ ಸದರನ್ ಗ್ಯಾಸ್ ಏಜೆನ್ಸಿಯಲ್ಲಿ ಇದ್ದು, ಸಿಲಿಂಡರ್ ಫಿಲ್ ಮಾಡಿಸುತ್ತಿದ್ದೇವೆ. ನೀವು ಕೂಡ 50 ಸಿಲಿಂಡರ್ ತುಂಬಿಸಿ ಕೊಡಿ ಎಂದು ಮೈಸೂರು ಎಡಿಸಿ ನಾಗಾರಾಜು ಸಿಬ್ಬಂದಿಯಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಆಡಿಯೋ ಸಂಭಾಷಣೆ ಸತೀಶ್: ಗ್ಯಾಸ್ ಟ್ಯಾಂಕರ್ ಬಂತಾ, ಯಾವಾಗ, ಎಷ್ಟೊತ್ತಿನಲ್ಲಿ. ಇನ್ನೂ ಆಕ್ಸಿಜನ್ ಬಂದಿಲ್ಲ. ನಾಗರಾಜು: ಸದ್ಯಕ್ಕೆ ಲಭ್ಯವಿರುವ ಸಿಲಿಂಡರ್ ಕಳುಹಿಸಿಕೊಡಿ, ಇದು ವಾದ ಮಾಡುವ ಸಮಯವಲ್ಲ. ಸದ್ಯಕ್ಕೆ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಸಮಸ್ಯೆ ಎದುರಾಗಿದೆ. ಸತೀಶ್: ನೀವು ಲೋಕಲ್ ಡಿಸಿ ಜೊತೆ ಕಾಲ್ ಮಾಡಿಸಿ, ನಾನು ಆಗ ಕೊಡುತ್ತೇನೆ, ಆ ಯಮ್ಮಾ ಸರಿ ಇಲ್ಲ, ಕೊಡ ಬೇಡ ಎಂದಿದ್ದಾರೆ. ನಾಗರಾಜು: ಡಿಸಿ ಅವರ ಪಿಎ ಜೊತೆ ಕರೆ ಮಾಡಿಸಲೇ.. ಸತೀಶ್: ಬೇಡ ಡಿಸಿ ಅವರ ಜೊತೆಗೆ ಕರೆ ಮಾಡಿಸಿ, ನಾನು ಅವಾಗ ಕೊಡುತ್ತೇನೆ. ನಮ್ಮ ಬಳಿ ಇರೋದು ಕೇವಲ ಐವತ್ತು ಟನ್ ಆಕ್ಸಿಜನ್ ಮಾತ್ರ. ಡಿಸಿ ಹೇಳುವ ತನಕ ಕೊಡುವುದಕ್ಕೆ ಆಗುವುದಿಲ್ಲ.

ಇದನ್ನೂ ಓದಿ: Mysuru: ರೋಹಿಣಿ ಸಿಂಧೂರಿ ಮತ್ತು ಶಿಲ್ಪಾ ನಾಗ್ ಇಬ್ಬರೂ ಮೈಸೂರಿನಿಂದ ವರ್ಗಾವಣೆ, ಹೊಸ ಜಿಲ್ಲಾಧಿಕಾರಿ, ಪಾಲಿಕೆ ಆಯುಕ್ತರ ನೇಮಕ

ವರ್ಗಾವಣೆ ಬೆನ್ನಲ್ಲೇ ಸಿಎಂ ಯಡಿಯೂರಪ್ಪ ನಿವಾಸಕ್ಕೆ ರೋಹಿಣಿ ಸಿಂಧೂರಿ ಭೇಟಿ (Mysore MP Pratap Simha talk about Chamarajanagar district hospital medical oxygen death incident)