ರಸ್ತೆ ಅಗಲೀಕರಣದ ನೆಪದಲ್ಲಿ ನೂರಾರು ಮರಗಳ ಹನನ; ಬೀದರ್ ಜಿಲ್ಲೆಯ ರೈತರಿಂದ ಆಕ್ರೋಶ
ಮರಗಳನ್ನು ಕಡಿದು ಹಾಕಿದ್ದರ ಬಗ್ಗೆ ಅರಣ್ಯ ಇಲಾಖೆಯ ಡಿಎಫ್ಓ ಶಿವಶಂಕರ್ ಅವರನ್ನ ಪೋನ್ ಮೂಲಕ ವಿಚಾರಿಸಿದರೆ ರೈತರು ತಾವು ಬೆಳೆಸಿದ ಗಿಡಗಳನ್ನು ಅವರು ಕಡಿಯಬಹುದು, ಏನಾದರೂ ಮಾಡಬಹುದು ಅದನ್ನು ಕೇಳುವ ಅಧಿಕಾರ ಅರಣ್ಯ ಇಲಾಖೆಗೆ ಇಲ್ಲಾ ಎಂದು ಹೇಳಿದ್ದಾರೆ.
ಬೀದರ್: ಗಿಡಗಳನ್ನು ನೆಟ್ಟು ಹಸಿರೀಕರಣ ಮಾಡಬೇಕೆಂದು ಸರಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದು ಗಿಡಗಳನ್ನು ಬೆಳೆಸುತ್ತಿದೆ. ಆದರೆ ಅದೇ ಗಿಡಗಳನ್ನು ಕಡಿದು ಕೆಲವರು ಹಸಿರಿಕರಣಕ್ಕೆ ಮಾರಕವಾಗಿ ಪರಿಣಮಿಸಿದ್ದಾರೆ. ಇಂತಹದ್ದೇ ಘಟನೆ ಸದ್ಯ ಬೀದರ್ ಜಿಲ್ಲೆಯಲ್ಲಿ ನಡೆದಿದ್ದು, ರಸ್ತೆ ಅಗಲೀಕರಣದ ನೆಪದಲ್ಲಿ ರೈತರ ಜಮೀನಿನಲ್ಲಿದ್ದ ಮರಗಳನ್ನು ಕಡಿದಿದ್ದಾರೆ. ನಾಲ್ಕೈದು ವರ್ಷದಿಂದ ದಾರಿಯುದ್ದಕ್ಕೂ ಗಿಡಗಳು ಬೆಳೆದು ನಿಂತಿದ್ದವೂ. ರಸ್ತೆ ಅಗಲಿಕರಣ ನೆಪದಲ್ಲಿ ನೂರಕ್ಕೂ ಹೆಚ್ಚು ಗಿಡಗಳನ್ನು ಕಡಿದು ಹಾಕಲಾಗಿದೆ. ಇದು ಸಹಜವಾಯೇ ಪರಿಸರ ಪ್ರೇಮಿಗಳ ಅಸಮಾದಾನ ಹೆಚ್ಚಿಸುವಂತೆ ಮಾಡಿದೆ. ಆದರೆ ಇಷ್ಟಾದರೂ ಈ ಬಗ್ಗೆ ಅಧಿಕಾರಿಗಳು ಗಮನಕೊಡದೆ ಇರುವುದು ಸದ್ಯ ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಡಾವರಗಾಂವ ಗ್ರಾಮ ಪಂಚಾಯತಿ ವ್ಯಾಪ್ತಿಯ ಬರದಾಪು ಗ್ರಾಮದ ರೈತರಾದ ಗುಂಡಪ್ಪ, ಶಂಕರ್ ಹಾಗೂ ರಾಮಚಂದ್ರ ಎನ್ನುವ ರೈತರ ಹೊಲದಲ್ಲಿ ಅವರ ಅನುಮತಿಯನ್ನು ಪಡೆಯದೆಯೇ, ಹೆದರಿಸಿ ಹೊಲದಲ್ಲಿ ರಸ್ತೆ ಮಾಡಲಾಗಿದೆ. ಇದೆ ಗ್ರಾಮದ ಶಿವರಾಜ್ ಕಾಂಬ್ಳೆ ಎನ್ನುವ ರೈತ ತನ್ನ ಹೊಲಕ್ಕೆ ಓಡಾಡಲು ಸುಮಾರು 22 ಅಡಿ ಅಗಲದ ರಸ್ತೆಯನ್ನು ಮಾಡುತ್ತಿದ್ದು, ಹತ್ತರಿಂದ ಇಪ್ಪತ್ತು ಗುಂಟೆ ಜಮೀನು ಹೋಂದಿರುವ ಈ ಚಿಕ್ಕ ರೈತರು ಹತ್ತಾರು ಎಕರೆ ಜಮೀನು ಹೊಂದಿರುವ ಶಿವರಾಜ್ ಕಾಂಬ್ಳೆ ರಸ್ತೆಗೆ ಜಮೀನು ಬಿಟ್ಟುಕೊಡಬೇಕಾಗಿದೆ.
ಈ ಬಗ್ಗೆ ರೈತ ಶಿವರಾಜ್ ಕಾಂಬ್ಳ್ಳೆಯನ್ನು ಕೇಳಿದರೆ ಬೆದರಿಕೆ ಹಾಕುತ್ತಿದ್ದಾರೆ. ಜತೆಗೆ ಶಿವರಾಜ್ ಕಾಂಬ್ಳೆ ಇಬ್ಬರು ಮಕ್ಕಳು ಪೊಲೀಸರಿಗೆ, ಅಧಿಕಾರಿಗೆ ಮೇಲಿಂದ ಮೇಲೆ ಒತ್ತಡ ಹಾಕುತ್ತಿದ್ದಾರೆ. ಹೀಗಾಗಿ ಪೊಲೀಸರು ಇವರ ಜತೆಗೂಡಿ ನಮ್ಮಂತ ಬಡ ರೈತರಿಗೆ ಬೆದರಿಕೆ ಹಾಕುತ್ತಿದ್ದಾರೆ. ಅಲ್ಲದೆ ಪೋಲೀಸರು ಕೂಡಾ ರಸ್ತೆ ಮಾಡುವ ಸಮಯದಲ್ಲಿ ಸ್ಥಳದಲ್ಲಿಯೇ ಠೀಕಾಣಿ ಹೂಡಿ ಅಕ್ರಮವಾಗಿ ಹೊಲಗಳಲ್ಲಿನ ಮರ ಕಡಿದಿದ್ದಾರೆ ಎಂದು ಜಮೀನು ಕಳೆದುಕೊಂಡ ರೈತ ಗುಂಡಪ್ಪ ಬೇಸರ ವ್ಯಕ್ತಪಡಿಸಿದ್ದಾರೆ.
ಜೆಸಿಬಿಯನ್ನು ಬಳಸಿಕೊಂಡು ಮಹಾತ್ಮಾಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಇಲ್ಲಿ ರಸ್ತೆ ಮಾಡಿಸಲಾಗುತ್ತಿದೆ ಎಂದು ಹೇಳಿದ್ದಾರೆ. ಈ ವಿಷಯ ತಿಳಿದು ಮಾಧ್ಯಮದವರು ಇಲ್ಲಿಗೆ ಧಾವಿಸಿದಾಗ ಮನ್ರೇಗಾ ಯೋಜನೆಯಡಿ ಇಲ್ಲಿ ಕೆಲಸ ನಡೆಯುತ್ತಿಲ್ಲ ಎಂದು ತಿಳಿಸಿದ್ದಾರೆ. ಆದರೆ ಮನ್ರೇಗಾ ಯೋಜನೆಯಡಿ ಇಲ್ಲಿ ಕೆಲಸ ನಡೆಯುತ್ತಿಲ್ಲವಾದರೆ ಅಲ್ಲಿಗೆ ತಾಲೂಕು ಪಂಚಾಯತಿಯ ಇಓ ಯಾಕೆ ಭೇಟಿ ಕೊಟ್ಟರು, ಪಿಡಿಓ ಯಾಕೆ ಸ್ಥಳಕ್ಕೆ ಭೇಟಿ ಕೊಟ್ಟರು, ಎನ್ನುವ ಅನುಮಾನಗಳು ಈಗ ಇಲ್ಲಿ ಹರಿದಾಡುತ್ತಿದೆ.
ಇದರ ಜತೆಗೆ ಈಗಾಗಲೇ ಇಲ್ಲಿ ಮೂನ್ನೂರು ಮೀಟರ್ವರೆಗೂ ರಸ್ತೆಯನ್ನು ಅಗಲಿಕರಣ ಮಾಡಲಾಗಿದೆ. ಮೊದಲಿದ್ದ ರಸ್ತೆಯ ಅಕ್ಕಪಕ್ಕದಲ್ಲಿ ನೂರಕ್ಕೂ ಹೆಚ್ಚಿನ ಬೇವಿನ ಮರಗಳು ಇದ್ದವು. ಅವುಗಳನ್ನ ಅರಣ್ಯ ಇಲಾಖೆಯ ಅನುಮತಿಯನ್ನ ಪಡೆದೆಯೇ ಕಡಿದು ಹಾಕಲಾಗಿದೆ. ಈ ಬಗ್ಗೆ ಶಿವರಾಜ್ ಕಾಂಬ್ಳೆಯವರನ್ನು ಕೇಳಿದರೆ ಹೊಲಕ್ಕೆ ಹೋಗಲಿಕ್ಕೆ ರಸ್ತೆ ಬೇಕಲ್ವಾ ಎಂದು ಉತ್ತರಿಸಿದ್ದಾರೆ.
ಇತ್ತ ಮರಗಳನ್ನು ಕಡಿದು ಹಾಕಿದ್ದರ ಬಗ್ಗೆ ಅರಣ್ಯ ಇಲಾಖೆಯ ಡಿಎಫ್ಓ ಶಿವಶಂಕರ್ ಅವರನ್ನ ಪೋನ್ ಮೂಲಕ ವಿಚಾರಿಸಿದರೆ ರೈತರು ತಾವು ಬೆಳೆಸಿದ ಗಿಡಗಳನ್ನು ಅವರು ಕಡಿಯಬಹುದು, ಏನಾದರೂ ಮಾಡಬಹುದು ಅದನ್ನು ಕೇಳುವ ಅಧಿಕಾರ ಅರಣ್ಯ ಇಲಾಖೆಗೆ ಇಲ್ಲಾ ಎಂದು ಹೇಳಿದ್ದಾರೆ.
ಇದನ್ನೂ ಓದಿ:
ದಾವಣಗೆರೆಯ ರೈತರಿಗೆ ಸೇರಿದ 100ಕ್ಕೂ ಹೆಚ್ಚು ಅಡಿಕೆ ಮರಗಳನ್ನು ಕಡಿದು ಪರಾರಿಯಾದ ದುಷ್ಕರ್ಮಿಗಳು