ಎಚ್​ಐವಿ ಸೋಂಕಿತೆಯ ದೇಹದಲ್ಲಿ 32 ಬಗೆಯ ಕೊರೊನಾ ರೂಪಾಂತರಿ ವೈರಸ್​​ಗಳು; ಆತಂಕ ವ್ಯಕ್ತಪಡಿಸಿದ ಸಂಶೋಧಕರು

ಈ ಮಹಿಳೆಯಿಂದ ಇನ್ಯಾರಿಗಾದಾರೂ ಸೋಂಕು ವರ್ಗಾವಣೆಯಾಗಿದೆಯಾ ಎಂಬುದಿನ್ನೂ ಗೊತ್ತಾಗಿಲ್ಲ ಎಂದು ಸಂಶೋಧನಾಕಾರರು ತಿಳಿಸಿದ್ದಾರೆ. ಹಾಗೇ ದಕ್ಷಿಣ ಆಫ್ರಿಕಾದ ಕ್ವಾಜುಲು ನಟಲ್​ ಎಂಬಲ್ಲಿ ಕೊರೊನಾದ ರೂಪಾಂತರಗಳು ಹೆಚ್ಚಾಗಿ ಕಾಣಿಸಿವೆ ಎಂದೂ ಹೇಳಿದ್ದಾರೆ.

ಎಚ್​ಐವಿ ಸೋಂಕಿತೆಯ ದೇಹದಲ್ಲಿ 32 ಬಗೆಯ ಕೊರೊನಾ ರೂಪಾಂತರಿ ವೈರಸ್​​ಗಳು; ಆತಂಕ ವ್ಯಕ್ತಪಡಿಸಿದ ಸಂಶೋಧಕರು
ಸಾಂದರ್ಭಿಕ ಚಿತ್ರ
Follow us
TV9 Web
| Updated By: Lakshmi Hegde

Updated on:Jun 06, 2021 | 2:27 PM

ಎಚ್​ಐವಿ ಸೋಂಕಿತ 36 ವರ್ಷದ ಮಹಿಳೆಯೊಬ್ಬರು ಕೊರೊನಾ ವೈರಸ್​ಗೆ ತುತ್ತಾಗಿದ್ದರು. ಸುಮಾರು 216 ದಿನಗಳ ಕಾಲ ಅವರ ದೇಹದೊಳಗೆ ಇದ್ದ ಕೊರೊನಾ ವೈರಸ್​, ಅಲ್ಲಿಯೇ 30ಕ್ಕೂ ಹೆಚ್ಚು ರೂಪಾಂತರಗಳನ್ನು ಪಡೆದಿದೆ ಎಂದು ಸಂಶೋಧಕರು ಪತ್ತೆಹಚ್ಚಿದ್ದಾರೆ. ಇದು ತುಂಬ ಅಪಾಯಕಾರಿ ರೂಪಾಂತರ ಎಂದೂ ಹೇಳಿದ್ದಾರೆ. ಅಂದಹಾಗೆ ಇಂಥದ್ದೊಂದು ಅಚ್ಚರಿಯ, ಆತಂಕಕಾರಿ ಘಟನೆ ನಡೆದದ್ದು ದಕ್ಷಿಣ ಆಫ್ರಿಕಾದಲ್ಲಿ.

ಮೆಡ್ರಾಕ್ಸಿವ್ ಎಂಬ ವೈದ್ಯಕೀಯ ಜರ್ನಲ್‌ನಲ್ಲಿ ಗುರುವಾರ ಈ ವರದಿ ಪ್ರಕಟವಾಗಿದೆ. ಈ ಮಹಿಳೆ 2006ರಲ್ಲಿ ಎಚ್​ಐವಿಗೆ ಒಳಗಾಗಿದ್ದಾರೆ. ಅಂದಿನಿಂದಲೂ ಆಕೆಯ ರೋಗ ನಿರೋಧಕ ಶಕ್ತಿ ಕುಂದುತ್ತಲೇ ಬರುತ್ತಿದೆ. 2020ರ ಸೆಪ್ಟೆಂಬರ್​ ನಲ್ಲಿ ಆಕೆ ಕೊರೊನಾ ಸೋಂಕಿಗೆ ಒಳಗಾದರು. ಇವರಲ್ಲಿ ಕೊವಿಡ್​ 19 ಸ್ಪೈಕ್​ ಪ್ರೋಟೀನ್​​ನ 13 ರೂಪಾಂತರಗಳನ್ನು ಮತ್ತು ವೈರಸ್​ನ ಕಾರ್ಯವಿಧಾನವನ್ನು ಬದಲಿಸಲ ಬಲ್ಲ ಇತರ 19 ಆನುವಂಶಿಕ ತಳಿಗಳನ್ನು ಪತ್ತೆಹಚ್ಚಲಾಗಿದೆ. ಹಾಗೇ ಇವರ ದೇಹದಲ್ಲಿ E484K, N510Y ರೂಪಾಂತರ ವೈರಸ್​ ಕೂಡ ಪತ್ತೆಯಾಗಿದೆ.

ಈ ಮಹಿಳೆಯಿಂದ ಇನ್ಯಾರಿಗಾದಾರೂ ಸೋಂಕು ವರ್ಗಾವಣೆಯಾಗಿದೆಯಾ ಎಂಬುದಿನ್ನೂ ಗೊತ್ತಾಗಿಲ್ಲ ಎಂದು ಸಂಶೋಧನಾಕಾರರು ತಿಳಿಸಿದ್ದಾರೆ. ಹಾಗೇ ದಕ್ಷಿಣ ಆಫ್ರಿಕಾದ ಕ್ವಾಜುಲು ನಟಲ್​ ಎಂಬಲ್ಲಿ ಕೊರೊನಾದ ರೂಪಾಂತರಗಳು ಹೆಚ್ಚಾಗಿ ಕಾಣಿಸಿವೆ. ಆ ಪ್ರದೇಶದಲ್ಲಿ ನಾಲ್ವರಲ್ಲಿ ಒಬ್ಬರಂತೆ ಎಚ್​ಐವಿ ಸೋಂಕಿತರು ಇದ್ದಾರೆ. ಹೀಗೆ ಎಚ್​ಐವಿ ಸೋಂಕಿತರ ದೇಹದಲ್ಲಿ ಕೊರೊನಾ ರೂಪಾಂತರ ವೈರಸ್​ಗಳ ಸೃಷ್ಟಿ ಅತಿಯಾಗುತ್ತದೆ ಎಂಬುದಕ್ಕೆ ತುಂಬ ಸಾಕ್ಷಿಗಳಿಲ್ಲ. ಹಾಗೊಮ್ಮೆ ಅಧ್ಯಯನ ಮಾಡುತ್ತಿದ್ದಂತೆ ಇಂಥ ಪ್ರಕರಣಗಳು ಹೆಚ್ಚೆಚ್ಚು ಕಂಡು ಬಂದರೆ, ಇಡೀ ಜಗತ್ತಿನಲ್ಲಿ ಎಚ್​ಐವಿ ಪೀಡಿತರು ಕೊರೊನಾ ರೂಪಾಂತರಿ ವೈರಸ್​​ಗಳ ಕಾರ್ಖಾನೆಗಳಂತೆ ಆಗಬಹುದು ಎಂದು ಸಂಶೋಧಕರು ಆತಂಕ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಹಾಸನ: ಸರ್ಕಾರಿ ಕೆಲಸದ ಆಮಿಷವೊಡ್ಡಿ ಅಪ್ರಾಪ್ತೆ ಜೊತೆ ಎರಡನೇ ಮದುವೆಯಾಗಿದ್ದ ವ್ಯಕ್ತಿ ಅರೆಸ್ಟ್

32 corona virus mutations inside the body of Woman with HIV In South Africa

Published On - 2:26 pm, Sun, 6 June 21