Donald Trump: ಫೇಸ್​ಬುಕ್ ಖಾತೆಗೆ ನಿರ್ಬಂಧ: 75 ಮಿಲಿಯನ್ ಮತದಾರರಿಗೆ ಅವಮಾನ ಎಂದ ಡೊನಾಲ್ಡ್ ಟ್ರಂಪ್

Donald Trump: ಫೇಸ್​ಬುಕ್ ಖಾತೆಗೆ ನಿರ್ಬಂಧ: 75 ಮಿಲಿಯನ್ ಮತದಾರರಿಗೆ ಅವಮಾನ ಎಂದ ಡೊನಾಲ್ಡ್ ಟ್ರಂಪ್
ಡೊನಾಲ್ಡ್ ಟ್ರಂಪ್

ನಮ್ಮ ಈ ನಿರ್ಧಾರದಿಂದ ಹಲವಾರು ಟೀಕೆಗಳು ಎದುರಾಗುತ್ತದೆ ಎಂದು ತಿಳಿದಿದೆ. ಆದರೆ, ಸರಿಯಾದ ನಿರ್ಧಾರ ಕೈಗೊಳ್ಳುವುದು ನಮ್ಮ ಕೆಲಸ ಎಂದು ಫೇಸ್​ಬುಕ್ ಸಂಸ್ಥೆ ಹೇಳಿದೆ.

TV9kannada Web Team

| Edited By: ganapathi bhat

Jun 05, 2021 | 6:49 PM

ವಾಷಿಂಗ್ಟನ್: ಅಮೆರಿಕಾ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಫೇಸ್​ಬುಕ್ ಖಾತೆ ಮೇಲೆ ಸಂಸ್ಥೆ ಹೇರಿರುವ 2 ವರ್ಷಗಳ ನಿರ್ಬಂಧದ ಬಗ್ಗೆ ಟ್ರಂಪ್ ಪ್ರತಿಕ್ರಿಯಿಸಿದ್ದಾರೆ. ಫೇಸ್​ಬುಕ್​ನ ಈ ನಡೆ ತಮ್ಮ ಮತದಾರರಿಗೆ ಮಾಡಿದ ಅವಮಾನ ಎಂದು ಟ್ರಂಪ್ ಹೇಳಿದ್ದಾರೆ. ಫೇಸ್​ಬುಕ್ ಸಂಸ್ಥೆ 75 ಮಿಲಿಯನ್ ವೋಟರ್​ಗಳಿಗೆ ಅವಮಾನ ಮಾಡಿದೆ. ಜೊತೆಗೆ, 2020ರಲ್ಲಿ ನಮಗೆ ಮತ ನೀಡಿದ ಮತದಾರರಿಗೂ ಅವಮಾನವಾಗಿದೆ ಎಂದು ಟ್ರಂಪ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ನಮ್ಮ ಈ ನಿರ್ಧಾರದಿಂದ ಹಲವಾರು ಟೀಕೆಗಳು ಎದುರಾಗುತ್ತದೆ ಎಂದು ತಿಳಿದಿದೆ. ಆದರೆ, ಸರಿಯಾದ ನಿರ್ಧಾರ ಕೈಗೊಳ್ಳುವುದು ನಮ್ಮ ಕೆಲಸ ಎಂದು ಫೇಸ್​ಬುಕ್ ಸಂಸ್ಥೆ ಹೇಳಿದೆ.

ಅಮೆರಿಕಾದ ಕ್ಯಾಪಿಟಲ್ ಕಟ್ಟಡದ ಮೇಲೆ ಜನವರಿ 6ರಂದು ನಡೆದ ದಾಳಿಗೆ, ಡೊನಾಲ್ಡ್ ಟ್ರಂಪ್ ಮಾಡಿದ್ದ ಫೇಸ್​ಬುಕ್ ಪೋಸ್ಟ್​ಗಳು ಪ್ರಚೋದನಕಾರಿಯಾಗಿದ್ದವು ಎಂಬ ಕಾರಣದಿಂದ ಸಾಮಾಜಿಕ ಜಾಲತಾಣ ದೈತ್ಯ ಫೇಸ್​ಬುಕ್ ಸಂಸ್ಥೆ ಅಮೆರಿಕಾ ಮಾಜಿ ಅಧ್ಯಕ್ಷರಿಗೆ ಸಂಬಂಧಿಸಿದ ಫೇಸ್​ಬುಕ್ ಖಾತೆಗಳನ್ನು 2023ರ ಜನವರಿವರೆಗೆ ತಡೆ ನೀಡಿದೆ. ಸಂಸ್ಥೆಯ ಸ್ವತಂತ್ರ ಮೇಲ್ವಿಚಾರಣ ಸಂಸ್ಥೆ ಮೇ ತಿಂಗಳಲ್ಲಿ ಈ ನಿರ್ಧಾರವನ್ನು ಎತ್ತಿ ಹಿಡಿದಿತ್ತು.

ಅನಿರ್ಧಿಷ್ಟಾವಧಿಯವರೆಗೆ ಖಾತೆಯನ್ನು ಬ್ಯಾನ್ ಮಾಡುವುದು ಸರಿಯಲ್ಲ ಎಂದು ಸೂಚಿಸಿದ ಸಂಸ್ಥೆ ಸೂಕ್ತ ನಿರ್ಧಾರ ಕೈಗೊಳ್ಳಲು ಆರು ತಿಂಗಳ ಕಾಲವನ್ನು ನೀಡಿದೆ. ಟ್ರಂಪ್ ಖಾತೆಗಳಿಗೆ ಜನವರಿಯಿಂದಲೇ ತಡೆ ಹಿಡಿಯಲಾಗಿದ್ದು, ಪರಿಸ್ಥಿತಿ ಅವಕಾಶ ನೀಡಿದರೆ ಮತ್ತೆ ಪುನಃಸ್ಥಾಪಿಸಲಾಗುವುದು ಎಂದು ಫೇಸ್​ಬುಕ್ ತನ್ನ ಬ್ಲಾಗ್ ಪೋಸ್ಟ್​ನಲ್ಲಿ ವಿವರಿಸಿದೆ.

ಟ್ರಂಪ್ ಖಾತೆಗಳನ್ನು ಬ್ಯಾನ್ ಮಾಡಿರುವ ಬಗ್ಗೆ ತಿಳಿಸಿರುವ ಫೇಸ್​ಬುಕ್, ಡೊನಾಲ್ಡ್ ಟ್ರಂಪ್ ನಡೆಯು ಫೇಸ್​ಬುಕ್ ಸಂಸ್ಥೆಯ ಹೊಸ ನಿಯಮಾವಳಿಗಳನ್ನು ಮುರಿದಿದೆ. ಪ್ರೊಟೊಕಾಲ್​ಗಳ ಅನ್ವಯ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದೆ.

ಫೆಸ್​ಬುಕ್​ನ ಈ ನಡೆಯನ್ನು ಹಲವರು ಸ್ವಾಗತಿಸಿದ್ದಾರೆ. ಆದರೆ, ರಿಪಬ್ಲಿಕನ್ ಶಾಸಕರು, ಅಭಿವ್ಯಕ್ತಿ ಸ್ವಾತಂತ್ರ್ಯದ ಪರ ನ್ಯಾಯವಾದಿಗಳು ಟ್ರಂಪ್ ಖಾತೆ ಮೇಲಿನ ನಿರ್ಬಂಧವನ್ನು ವಿರೋಧಿಸಿದ್ದಾರೆ. ಮುಕ್ತ ಅಭಿಪ್ರಾಯವನ್ನು ಅಮೆರಿಕ ಅಧ್ಯಕ್ಷರಿಂದ ಕಿತ್ತುಕೊಳ್ಳಲಾಗಿದೆ. ಮೂಲಭೂತವಾದಿ ಉನ್ಮಾದಿ ಎಡಪಂಥೀಯರು ಸತ್ಯಕ್ಕೆ ಹೆದರುತ್ತಿದ್ದಾರೆ ಎಂದು ಹೇಳಿದ್ದಾರೆ. ಅಮೆರಿಕಾದ ಅಧ್ಯಕ್ಷರೊಬ್ಬರ ಖಾತೆಯನ್ನು ಫೇಸ್​ಬುಕ್ ಸಸ್ಪೆಂಡ್ ಮಾಡಿರುವುದು ಇದೇ ಮೊದಲ ಬಾರಿ ಆಗಿದೆ.

ಇದನ್ನೂ ಓದಿ: Wuhan Lab ‘ಚೀನಾ ವೈರಸ್ ವುಹಾನ್ ಲ್ಯಾಬ್​ನಿಂದ ಬಂದದ್ದು’ ನಾನು ಅಂದು ಹೇಳಿದ್ದು ಸರಿ ಇದೆ ಅಲ್ಲವೇ?: ಡೊನಾಲ್ಡ್ ಟ್ರಂಪ್

ಡೊನಾಲ್ಟ್ ಟ್ರಂಪ್ ಸರ್ಕಾರದಲ್ಲಿ ಅನುಭವಿಸಿದ ನೋವು ತೋಡಿಕೊಂಡ ಅಮೆರಿಕದ ಆಂತೋನಿ ಫೌಚಿ

Follow us on

Related Stories

Most Read Stories

Click on your DTH Provider to Add TV9 Kannada