AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Wuhan Lab ‘ಚೀನಾ ವೈರಸ್ ವುಹಾನ್ ಲ್ಯಾಬ್​ನಿಂದ ಬಂದದ್ದು’ ನಾನು ಅಂದು ಹೇಳಿದ್ದು ಸರಿ ಇದೆ ಅಲ್ಲವೇ?: ಡೊನಾಲ್ಡ್ ಟ್ರಂಪ್

Donald Trump: ‘ಡಾ.(ಆಂಟನಿ) ಫೌಸಿ ಮತ್ತು ಚೀನಾ ನಡುವಣ ಇ-ಮೇಲ್ ಸಂದೇಶಗಳನ್ನು ಯಾರೂ ಅಲ್ಲಗಳೆಯುವಂತಿಲ್ಲ. ಸಾವು ಮತ್ತು ವಿನಾಶಕ್ಕೆ ಕಾರಣವಾದದ್ದಕ್ಕೆ ಚೀನಾವು ಅಮೆರಿಕಕ್ಕೆ ಮತ್ತು ವಿಶ್ವ ರಾಷ್ಟ್ರಗಳಿಗೆ 10 ಲಕ್ಷ ಕೋಟಿ ಡಾಲರ್‌ ನೀಡಬೇಕು ಎಂದು ಟ್ರಂಪ್ ಆಗ್ರಹಿಸಿದ್ದಾರೆ.

Wuhan Lab ‘ಚೀನಾ ವೈರಸ್ ವುಹಾನ್ ಲ್ಯಾಬ್​ನಿಂದ ಬಂದದ್ದು’ ನಾನು ಅಂದು ಹೇಳಿದ್ದು ಸರಿ ಇದೆ ಅಲ್ಲವೇ?: ಡೊನಾಲ್ಡ್ ಟ್ರಂಪ್
ಡೊನಾಲ್ಡ್ ಟ್ರಂಪ್
TV9 Web
| Updated By: ರಶ್ಮಿ ಕಲ್ಲಕಟ್ಟ|

Updated on:Jun 04, 2021 | 5:22 PM

Share

ವಾಷಿಂಗ್ಟನ್: ಚೀನಾ ವೈರಸ್ ವುಹಾನ್ ಲ್ಯಾಬ್​ನಿಂದ ಬಂದದ್ದು ಎಂದು ನಾನು ಅಂದು ಹೇಳಿದ್ದು ಸರಿ ಇದೆ ಅಲ್ಲವೇ ಎಂದಿದ್ದಾರೆ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್. ಈಗ ಎಲ್ಲರೂ ನನ್ನ ಶತ್ರುಗಳು ಎಂದು ಪರಿಗಣಿಸಲ್ಪಟ್ಟವರು ಕೂಡಾ ಚೀನಾ ವೈರಸ್ ವುಹಾನ್ ಪ್ರಯೋಗಾಲಯದಿಂದ ಹರಡಿದೆ. ಅಂದು ಟ್ರಂಪ್ ಹೇಳಿದ್ದು ನಿಜ ಎಂದು ಒಪ್ಪಿಕೊಂಡಿದ್ದಾರೆ ಎಂದು ಗುರುವಾರ ಟ್ರಂಪ್ ಹೇಳಿದ್ದಾರೆ. ವುಹಾನ್ ಪ್ರಯೋಗಾಲಯದಿಂದ ಸೋರಿಕೆಯಿಂದಾಗಿ ಉಂಟಾಗ ಸಾವು ಮತು ವಿನಾಶಕ್ಕೆ ಚೀನಾದ ಮೇಲೆದಂಡ ವಿಧಿಸಬೇಕು ಎಂದಿದ್ದಾರೆ ಟ್ರಂಪ್.  ‘ಡಾ.(ಆಂಟನಿ) ಫೌಸಿ ಮತ್ತು ಚೀನಾ ನಡುವಣ ಇ-ಮೇಲ್ ಸಂದೇಶಗಳನ್ನು ಯಾರೂ ಅಲ್ಲಗಳೆಯುವಂತಿಲ್ಲ. ಸಾವು ಮತ್ತು ವಿನಾಶಕ್ಕೆ ಕಾರಣವಾದದ್ದಕ್ಕೆ ಚೀನಾವು ಅಮೆರಿಕಕ್ಕೆ ಮತ್ತು ವಿಶ್ವ ರಾಷ್ಟ್ರಗಳಿಗೆ 10 ಲಕ್ಷ ಕೋಟಿ ಡಾಲರ್‌ ನೀಡಬೇಕು ಎಂದು ಟ್ರಂಪ್ ಆಗ್ರಹಿಸಿದ್ದಾರೆ.

ಅಮೆರಿಕದ ಕೊರೊನಾ ವೈರಸ್ ಸಲಹೆಗಾರ ಡಾ. ಆಂಟನಿ ಫೌಸಿ ಅವರ ಖಾಸಗಿ ಇಮೇಲ್‌ಗಳು ಮಾಧ್ಯಮಗಳಿಗೆ ಬಹಿರಂಗವಾಗಿದ್ದು, ಕೊರೊನಾ ವೈರಸ್ ವುಹಾನ್ ಪ್ರಯೋಗಾಲಯದಿಂದ ಹರಡಿದೆ ಎಂಬ ಚರ್ಚೆ ಮತ್ತೆ ಮುನ್ನೆಲೆಗೆ ಬರಲು ಕಾರಣವಾಗಿದೆ.

ವಾಷಿಂಗ್ಟನ್ ಪೋಸ್ಟ್, ಬಜ್​ಫೀಡ್ ನ್ಯೂಸ್ ಮತ್ತು ಸಿಎನ್ಎನ್ ಜನವರಿ ನಿಂದ ಜೂನ್ 2020 ರವರೆಗಿನ ಅವಧಿಯ 3000 ಪುಟಗಳ ಇಮೇಲ್ ಮಾಹಿತಿಯನ್ನು ಮಾಹಿತಿ ಸ್ವಾತಂತ್ರ್ಯ ಕಾಯ್ದೆ (ಎಫ್‌ಒಐಎ) ಅಡಿಯಲ್ಲಿ 3 ಪಡೆದಿದ್ದವು. ಕೊರೊನಾವೈರಸ್ ಚೀನಾದ ವುಹಾನ್ ಪ್ರಯೋಗಾಲಯದಿಂದಲೇ ಹರಡಿರುವ ಸಾಧ್ಯತೆ ಇದೆ ಎಂದು ಬ್ರಿಟನ್‌ನ ಬೇಹುಗಾರರೂ ಇತ್ತೀಚೆಗೆ ಹೇಳಿದ್ದರು.

ಅಮೆರಿಕದಲ್ಲಿ ಕೊವಿಡ್ ಏಕಾಏಕಿ ಪ್ರಾರಂಭದ ದಿನಗಳ ಬಗ್ಗೆ ಇಮೇಲ್​ನಲ್ಲಿ ಬಹಿರಂಗಗೊಂಡಿವೆ. ಡಾ. ಫೌಸಿ ಮತ್ತು ಅವರ ಸಹೋದ್ಯೋಗಿಗಳು ಆರಂಭಿಕ ದಿನಗಳಲ್ಲಿ ಕೊವಿಡ್ 19 ಚೀನಾದ ವುಹಾನ್‌ನ ಪ್ರಯೋಗಾಲಯದಿಂದ ಸೋರಿಕೆಯಾಗಿರಬಹುದು ಎಂದು ಗಮನಿಸಿದ್ದರು.

ವುಹಾನ್ ಪ್ರಯೋಗಾಲಯವು ವೈರಸ್ ಅನ್ನು ಬಿಡುಗಡೆ ಮಾಡಿರುವುದು ಇನ್ನೂ ಅಸಂಭವವಾಗಿದೆ. ಆ ಮರುನಿರ್ದೇಶಿತ (ಇಮೇಲ್) ನಲ್ಲಿ ಏನಿದೆ ಎಂದು ನನಗೆ ನೆನಪಿಲ್ಲ, ಆದರೆ ಚೀನೀಯರು ಉದ್ದೇಶಪೂರ್ವಕವಾಗಿ ಏನನ್ನಾದರೂ ವಿನ್ಯಾಸಗೊಳಿಸಿದ್ದಾರೆ, ಇದರಿಂದಾಗಿ ಅವರು ತಮ್ಮನ್ನು ಮತ್ತು ಇತರ ಜನರನ್ನು ಕೊಲ್ಲುತ್ತಾರೆ. ಅದು ಸ್ವಲ್ಪ ದೂರದಲ್ಲಿದೆ ಎಂದು ನಾನು ಭಾವಿಸುತ್ತೇನೆ ಎಂದು “ಲ್ಯಾಬ್ ಲೀಕ್” ಇಮೇಲ್ ಬಗ್ಗೆ ಡಾ. ಫೌಸಿ ಸಿಎನ್ಎನ್ ಗೆ ಹೇಳಿದ್ದಾರೆ.

ವಿವಾದಾತ್ಮಕ ವಾದವನ್ನು ಕಳೆದ ವರ್ಷ ತಜ್ಞರು ತಳ್ಳಿಹಾಕಿದ್ದು ಇದು “ಅತ್ಯಂತ ಅಸಂಭವ” ಎಂದು ಹೇಳಿದರು. ಅದನ್ನು ಬೆಂಬಲಿಸುವ ಯಾವುದೇ ಪುರಾವೆಗಳು ಹೊರಬಂದಿಲ್ಲ.  ಆದರೆ ಇತ್ತೀಚಿನ ದಿನಗಳಲ್ಲಿ, ವೈರಸ್‌ನ ಉಗಮದ ಬಗ್ಗೆ ಅಂತರರಾಷ್ಟ್ರೀಯ ತನಿಖೆಯ ಟೀಕೆ ಮತ್ತು ಅಧಿಕೃತವಾಗಿ ಗುರುತಿಸುವ ವಾರಗಳ ಮೊದಲು ಈ ಪ್ರದೇಶದಲ್ಲಿ ಕೊವಿಡ್-ಸಂಬಂಧಿತ ಕಾಯಿಲೆಯ ಹೊಸ ವರದಿಗಳ ಟೀಕೆಗಳ ಮಧ್ಯೆ, ಈ ವಾದವು ಮತ್ತೊಮ್ಮೆ ಚರ್ಚೆಗೆ ನಾಂದಿ ಹಾಡಿದೆ.

ಇದನ್ನೂ ಓದಿ:  ಕೊರೊನಾ ವೈರಸ್​ನ ಮೂಲ ಚೀನಾದ ವುಹಾನ್ ಲ್ಯಾಬ್‌: ವೈರಸ್ ಮೂಲದ ಬಗ್ಗೆ ತನಿಖೆಗೆ ಹೆಚ್ಚಿದ ಒತ್ತಡ

ವುಹಾನ್ ಲ್ಯಾಬ್‌ನಿಂದ ಕೊರೊನಾ ವೈರಸ್ ಸೋರಿಕೆಯಾಗಿದೆ.. ಈಗ ಬ್ರಿಟಿನ್ ಇಂಟಲಿಜೆನ್ಸ್‌ ಸಹ ಅದನ್ನೇ ಹೇಳುತ್ತಿದೆ

(Was right about the China Virus coming from Wuhan lab Says former US President Donald Trump)

Published On - 5:16 pm, Fri, 4 June 21