AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊವಿಡ್ ಲಸಿಕೆ ವಿತರಣೆ ವೇಗ ಹೆಚ್ಚಿಸಲು ಅಮೆರಿಕ ಸರ್ಕಾರದಿಂದ ಉತ್ತೇಜನಕಾರಿ ಕ್ರಮ

ಒಟ್ಟಿನಲ್ಲಿ ಕೊವಿಡ್ ಲಸಿಕೆ ವಿತರಣೆಯನ್ನು ಹೆಚ್ಚಿಸಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ಅಮೆರಿಕ ಸರ್ಕಾರ ಕೈಗೊಳ್ಳುತ್ತಿದೆ. ಜನರನ್ನು ಕೊವಿಡ್ ಲಸಿಕೆ ಪಡೆಯುವಂತೆ ಪ್ರೇರೇಪಿಸಲು ಇಂತಹ ಹಲವು ಉತ್ತೇಜನಕಾರಿ ಕ್ರಮಗಳನ್ನು ಕೈಗೊಳ್ಳಲು ಅಮೆರಿಕ ಸರ್ಕಾರ ಯೋಜನೆ ಹಾಕಿಕೊಂಡಿದೆ.

ಕೊವಿಡ್ ಲಸಿಕೆ ವಿತರಣೆ ವೇಗ ಹೆಚ್ಚಿಸಲು ಅಮೆರಿಕ ಸರ್ಕಾರದಿಂದ ಉತ್ತೇಜನಕಾರಿ ಕ್ರಮ
ಅಮೆರಿಕ ಅಧ್ಯಕ್ಷ ಜೊ ಬೈಡೆನ್
TV9 Web
| Edited By: |

Updated on: Jun 04, 2021 | 8:33 PM

Share

ವಾಷಿಂಗ್ಟನ್ ಡಿ.ಸಿ:  ಅಮೆರಿಕದಲ್ಲಿ ಕೊವಿಡ್ ಸೋಂಕು ಒಂದು ಪ್ರಮಾಣಕ್ಕೆ ಹಿಡಿತಕ್ಕೆ ಬರುತ್ತಿದೆಯಾದರೂ ಕೊವಿಡ್ ಲಸಿಕೆ ವಿತರಣೆ ಪ್ರಕ್ರಿಯೆಗೆ ಅತ್ಯಂತ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಇಡೀ ದೇಶದಲ್ಲಿ ದಿನವೊಂದಕ್ಕೆ ಸರಾಸರಿ 16 ಸಾವಿರ ಹೊಸ ಕೊವಿಡ್ ಪ್ರಕರಣಗಳು ಪತ್ತೆಯಾಗುತ್ತಿದ್ದು, 400 ಜನರು ಸಾವನ್ನಪ್ಪುತ್ತಿದ್ದಾರೆ. ಆದರೆ ಕೊವಿಡ್ ಈ ಪ್ರಮಾಣಕ್ಕೆ ಹತೋಟಿಗೆ ಬರಲು ಕೊವಿಡ್ ಲಸಿಕೆಯೇ ಕಾರಣವಾಗಿದ್ದು, ಜನರು ಹೆಚ್ಚಿನ ಪ್ರಮಾಣದಲ್ಲಿ ಲಸಿಕೆ ಪಡೆಯುವಂತೆ ಪ್ರೇರೇಪಿಸಲು ಅಮೆರಿಕ ಸರ್ಕಾರ ಹೊಸ ಹೊಸ ಕ್ರಮಗಳನ್ನು ಕೈಗೊಳ್ಳಲು ಮುಂದಾಗುತ್ತಿದೆ.

ಜುಲೈ 4ರ ಒಳಗೆ ಅಮೆರಿಕದ ಬಹುತೇಕ ನಾಗರಿಕರಿಗೆ ಕೊವಿಡ್ ಲಸಿಕೆ ವಿತರಣೆ ಆಗಬೇಕು ಎಂಬುದು ಅಧ್ಯಕ್ಷ ಜೋ ಬಿಡೆನ್​ ಅವರ ಗುರಿಯಾಗಿದೆ. ಈವರೆಗೂ ಲಸಿಕೆ ಪಡೆಯದ ನಾಗರಿಕರಿಗೂ ಆದಷ್ಟು ಬೇಗನೆ ಲಸಿಕೆ ಹಾಕಬೇಕು ಎಂಬುದು ಅಮೆರಿಕ ಸರ್ಕಾರದ ಗುರಿಯಾಗಿದ್ದು, ಜುಲೈ 4ರ ಒಳಗೆ ಶೇ 70ರಷ್ಟು ವಯಸ್ಕ ನಾಗರಿಕರಿಗೆ ಲಸಿಕೆ ವಿತರಿಸಲು ನಿಶ್ಚಯಿಸಲಾಗಿದೆ. ಬೇಗನೆ ಎಲ್ಲರಿಗೂ ಲಸಿಕೆ ವಿತರಣೆ ಆದಲ್ಲಿ ಮರಳಿ ಸ್ವಾತಂತ್ರ್ಯ ಮತ್ತು ಖುಷಿ ಸಮಾಜದಲ್ಲಿ ಮರಳುತ್ತದೆ. ಆಗ ಎಲ್ಲರೂ ಒಟ್ಟಿಗೆ ಸಂಭ್ರಮಿಸಬಹುದು ಎಂದು ಅಮೆರಿಕ ಆಡಳಿತ ವಿವರಿಸಿದೆ. ಜುಲೈ 4ರ ಒಳಗೆ ಶೇಕಡಾ 70 ರಷ್ಟು ವಯಸ್ಕ ನಾಗರಿಕರಿಗೆ ಕೊವಿಡ್ ಲಸಿಕೆ ವಿತರಣೆ ಆದಲ್ಲಿ  21 ವರ್ಷ ಮೇಲ್ಪಟ್ಟವರಿಗೆ ಬೀರ್ ಇರುವ ಸಂತೋಷಕೂಟದ ಮೂಲಕ ಸಂಭ್ರಮಾಚರಿಸಲು ಅವಕಾಶ ನೀಡಲಾಗುವುದು ಎಂದು ಅಧ್ಯಕ್ಷ ಜೋ ಬಿಡೆನ್ ಆಡಳಿತದ ಅಧಿಕಾರಿಗಳು ತಿಳಿಸಿದ್ದಾರೆ.

ಒಟ್ಟಿನಲ್ಲಿ ಕೊವಿಡ್ ಲಸಿಕೆ ವಿತರಣೆಯನ್ನು ಹೆಚ್ಚಿಸಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ಅಮೆರಿಕ ಸರ್ಕಾರ ಕೈಗೊಳ್ಳುತ್ತಿದೆ. ಜನರನ್ನು ಕೊವಿಡ್ ಲಸಿಕೆ ಪಡೆಯುವಂತೆ ಪ್ರೇರೇಪಿಸಲು ಇಂತಹ ಹಲವು ಉತ್ತೇಜನಕಾರಿ ಕ್ರಮಗಳನ್ನು ಕೈಗೊಳ್ಳಲು ಅಮೆರಿಕ ಸರ್ಕಾರ ಯೋಜನೆ ಹಾಕಿಕೊಂಡಿದೆ.

ಇದನ್ನೂ ಓದಿ: ಕೊವಿಡ್ ನಿರ್ವಹಣೆಗೆ ಪ್ರತಿ ಗ್ರಾಮ ಪಂಚಾಯತ್​ಗೂ 50 ಸಾವಿರ ಅನುದಾನ ಬಿಡುಗಡೆ: ಸಿಎಂ ಯಡಿಯೂರಪ್ಪ

ಲಸಿಕೆ ನೀಡಿಕೆಯಲ್ಲಿ ಅಮೆರಿಕಾವನ್ನು ಹಿಂದಿಕ್ಕಿದ ಭಾರತ; ಶೀಘ್ರವೇ ಮಕ್ಕಳಿಗೂ ಲಸಿಕೆ: ವಿ ಕೆ ಪೌಲ್

(American adults are get beer if they will vaccinated by July 4)

Follow Us
Web contact
Web contact

TV9 Kannada

Read More
3 ದಿನಗಳಿಂದ ವಿದ್ಯುತ್​​ ಕಡಿತ: ಹೆಸ್ಕಾಂ ವಿರುದ್ಧ ಸಾರ್ವಜನಿಕರ ಪ್ರತಿಭಟನೆ
3 ದಿನಗಳಿಂದ ವಿದ್ಯುತ್​​ ಕಡಿತ: ಹೆಸ್ಕಾಂ ವಿರುದ್ಧ ಸಾರ್ವಜನಿಕರ ಪ್ರತಿಭಟನೆ
ಹಿರಿಯೂರು ಉಪಚುನಾವಣೆ ಮೇಲೆ ಜೆಡಿಎಸ್​​ ಕಣ್ಣು: ದಳಪತಿಗಳ ಲೆಕ್ಕಾಚಾರವೇನು?
ಹಿರಿಯೂರು ಉಪಚುನಾವಣೆ ಮೇಲೆ ಜೆಡಿಎಸ್​​ ಕಣ್ಣು: ದಳಪತಿಗಳ ಲೆಕ್ಕಾಚಾರವೇನು?
ಗುರು ಸಂಚಾರದಿಂದ ಮಿಥುನ ರಾಶಿಯವರಿಗೆ ಆರ್ಥಿಕ ವೃದ್ಧಿ ಮತ್ತು ಶುಭ ಯೋಗ ಶುರು
ಗುರು ಸಂಚಾರದಿಂದ ಮಿಥುನ ರಾಶಿಯವರಿಗೆ ಆರ್ಥಿಕ ವೃದ್ಧಿ ಮತ್ತು ಶುಭ ಯೋಗ ಶುರು
ಪ್ರವಾಸಿಗರ ಕ್ಯಾಮೆರಾಗೆ ಬಿಂದಾಸ್ ಪೋಸ್ ನೀಡಿದ ಜೋಡಿ ಹುಲಿಗಳು!
ಪ್ರವಾಸಿಗರ ಕ್ಯಾಮೆರಾಗೆ ಬಿಂದಾಸ್ ಪೋಸ್ ನೀಡಿದ ಜೋಡಿ ಹುಲಿಗಳು!
ವಸ್ತುಗಳನ್ನು ಮನೆಗೆ ಕೊಡಲು ಬಂದ ಡೆಲಿವರಿ ಬಾಯ್ ಮಾಡಿದ್ದೇನು ನೋಡಿ
ವಸ್ತುಗಳನ್ನು ಮನೆಗೆ ಕೊಡಲು ಬಂದ ಡೆಲಿವರಿ ಬಾಯ್ ಮಾಡಿದ್ದೇನು ನೋಡಿ
ವನ್ಯಜೀವಿ ಛಾಯಾಗ್ರಾಹಕಿಯಾದ ಸೋನಲ್ ಮೊಂತೆರೋ
ವನ್ಯಜೀವಿ ಛಾಯಾಗ್ರಾಹಕಿಯಾದ ಸೋನಲ್ ಮೊಂತೆರೋ
ಸಂಜೆಯಾದರೆ ರಸ್ತೆಗಿಳಿಯುವ ಈ ಒಂಟಿ ಸಲಗಕ್ಕೆ ವಾಹನಗಳೇ ಟಾರ್ಗೆಟ್!
ಸಂಜೆಯಾದರೆ ರಸ್ತೆಗಿಳಿಯುವ ಈ ಒಂಟಿ ಸಲಗಕ್ಕೆ ವಾಹನಗಳೇ ಟಾರ್ಗೆಟ್!
ಅಜ್ಜ-ಅಜ್ಜಿ ಜತೆ ಬೈಕ್​​ನಲ್ಲಿ ಕುಳಿತಿದ್ದ 4 ವರ್ಷದ ಬಾಲಕಿಯ ಅಪಹರಣ
ಅಜ್ಜ-ಅಜ್ಜಿ ಜತೆ ಬೈಕ್​​ನಲ್ಲಿ ಕುಳಿತಿದ್ದ 4 ವರ್ಷದ ಬಾಲಕಿಯ ಅಪಹರಣ
ಮಾಂಗಲ್ಯ ಸರದಲ್ಲಿ ಮುತ್ತು-ಹವಳ ಧರಿಸುವುದರ ಅಸಲಿ ರಹಸ್ಯವೇನು?
ಮಾಂಗಲ್ಯ ಸರದಲ್ಲಿ ಮುತ್ತು-ಹವಳ ಧರಿಸುವುದರ ಅಸಲಿ ರಹಸ್ಯವೇನು?
ಮಾಜಿ ಪ್ರಧಾನಿ ದೇವೇಗೌಡರ ನಿವಾಸಕ್ಕೆ ಗೋವಾ ಮುಖ್ಯಮಂತ್ರಿ ಭೇಟಿ
ಮಾಜಿ ಪ್ರಧಾನಿ ದೇವೇಗೌಡರ ನಿವಾಸಕ್ಕೆ ಗೋವಾ ಮುಖ್ಯಮಂತ್ರಿ ಭೇಟಿ