Donald Trump: ಡೊನಾಲ್ಡ್ ಟ್ರಂಪ್ ಫೇಸ್ಬುಕ್ ಖಾತೆ 2 ವರ್ಷಗಳ ಕಾಲ ಸಸ್ಪೆಂಡ್
ಟ್ರಂಪ್ ಖಾತೆಗಳನ್ನು ಬ್ಯಾನ್ ಮಾಡಿರುವ ಬಗ್ಗೆ ತಿಳಿಸಿರುವ ಫೇಸ್ಬುಕ್, ಡೊನಾಲ್ಡ್ ಟ್ರಂಪ್ ನಡೆಯು ಫೇಸ್ಬುಕ್ ಸಂಸ್ಥೆಯ ಹೊಸ ನಿಯಮಾವಳಿಗಳನ್ನು ಮುರಿದಿದೆ. ಪ್ರೊಟೊಕಾಲ್ಗಳ ಅನ್ವಯ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದೆ.
ಅಮೆರಿಕಾದ ಕ್ಯಾಪಿಟಲ್ ಕಟ್ಟಡದ ಮೇಲೆ ಜನವರಿ 6ರಂದು ನಡೆದ ದಾಳಿಗೆ, ಡೊನಾಲ್ಡ್ ಟ್ರಂಪ್ ಮಾಡಿದ್ದ ಫೇಸ್ಬುಕ್ ಪೋಸ್ಟ್ಗಳು ಪ್ರಚೋದನಕಾರಿಯಾಗಿದ್ದವು ಎಂಬ ಕಾರಣದಿಂದ ಸಾಮಾಜಿಕ ಜಾಲತಾಣ ದೈತ್ಯ ಫೇಸ್ಬುಕ್ ಸಂಸ್ಥೆ ಅಮೆರಿಕಾ ಮಾಜಿ ಅಧ್ಯಕ್ಷರಿಗೆ ಸಂಬಂಧಿಸಿದ ಫೇಸ್ಬುಕ್ ಖಾತೆಗಳನ್ನು 2023ರ ಜನವರಿವರೆಗೆ ತಡೆ ನೀಡಿದೆ. ಸಂಸ್ಥೆಯ ಸ್ವತಂತ್ರ ಮೇಲ್ವಿಚಾರಣ ಸಂಸ್ಥೆ ಮೇ ತಿಂಗಳಲ್ಲಿ ಈ ನಿರ್ಧಾರವನ್ನು ಎತ್ತಿ ಹಿಡಿದಿತ್ತು.
ಅನಿರ್ಧಿಷ್ಟಾವಧಿಯವರೆಗೆ ಖಾತೆಯನ್ನು ಬ್ಯಾನ್ ಮಾಡುವುದು ಸರಿಯಲ್ಲ ಎಂದು ಸೂಚಿಸಿದ ಸಂಸ್ಥೆ ಸೂಕ್ತ ನಿರ್ಧಾರ ಕೈಗೊಳ್ಳಲು ಆರು ತಿಂಗಳ ಕಾಲವನ್ನು ನೀಡಿದೆ. ಟ್ರಂಪ್ ಖಾತೆಗಳಿಗೆ ಜನವರಿಯಿಂದಲೇ ತಡೆ ಹಿಡಿಯಲಾಗಿದ್ದು, ಪರಿಸ್ಥಿತಿ ಅವಕಾಶ ನೀಡಿದರೆ ಮತ್ತೆ ಪುನಃಸ್ಥಾಪಿಸಲಾಗುವುದು ಎಂದು ಫೇಸ್ಬುಕ್ ತನ್ನ ಬ್ಲಾಗ್ ಪೋಸ್ಟ್ನಲ್ಲಿ ವಿವರಿಸಿದೆ.
ಟ್ರಂಪ್ ಖಾತೆಗಳನ್ನು ಬ್ಯಾನ್ ಮಾಡಿರುವ ಬಗ್ಗೆ ತಿಳಿಸಿರುವ ಫೇಸ್ಬುಕ್, ಡೊನಾಲ್ಡ್ ಟ್ರಂಪ್ ನಡೆಯು ಫೇಸ್ಬುಕ್ ಸಂಸ್ಥೆಯ ಹೊಸ ನಿಯಮಾವಳಿಗಳನ್ನು ಮುರಿದಿದೆ. ಪ್ರೊಟೊಕಾಲ್ಗಳ ಅನ್ವಯ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದೆ.
ಫೆಸ್ಬುಕ್ನ ಈ ನಡೆಯನ್ನು ಹಲವರು ಸ್ವಾಗತಿಸಿದ್ದಾರೆ. ಆದರೆ, ರಿಪಬ್ಲಿಕನ್ ಶಾಸಕರು, ಅಭಿವ್ಯಕ್ತಿ ಸ್ವಾತಂತ್ರ್ಯದ ಪರ ನ್ಯಾಯವಾದಿಗಳು ಟ್ರಂಪ್ ಖಾತೆ ಮೇಲಿನ ನಿರ್ಬಂಧವನ್ನು ವಿರೋಧಿಸಿದ್ದಾರೆ. ಮುಕ್ತ ಅಭಿಪ್ರಾಯವನ್ನು ಅಮೆರಿಕ ಅಧ್ಯಕ್ಷರಿಂದ ಕಿತ್ತುಕೊಳ್ಳಲಾಗಿದೆ. ಮೂಲಭೂತವಾದಿ ಉನ್ಮಾದಿ ಎಡಪಂಥೀಯರು ಸತ್ಯಕ್ಕೆ ಹೆದರುತ್ತಿದ್ದಾರೆ ಎಂದು ಹೇಳಿದ್ದಾರೆ. ಅಮೆರಿಕಾದ ಅಧ್ಯಕ್ಷರೊಬ್ಬರ ಖಾತೆಯನ್ನು ಫೇಸ್ಬುಕ್ ಸಸ್ಪೆಂಡ್ ಮಾಡಿರುವುದು ಇದೇ ಮೊದಲ ಬಾರಿ ಆಗಿದೆ.
ಅಮೆರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೇಲೆ ಫೇಸ್ಬುಕ್ ಹಾಗೂ ಇನ್ಸ್ಟಾಗ್ರಾಮ್ ಹಾಕಿರುವ ನಿರ್ಬಂಧವನ್ನು ಫೇಸ್ಬುಕ್ನ ಮೇಲ್ವಿಚಾರಣೆ ಮಂಡಳಿ ಎತ್ತಿಹಿಡಿದಿತ್ತು. ಸಾಮಾನ್ಯವಾಗಿ ಫೇಸ್ಬುಕ್ ಹಾಕುವ ದಂಡವನ್ನು ಮೀರಿ ಅನಿರ್ದಿಷ್ಟಾವಧಿಯ ನಿಷೇಧ ಹೇರಿರುವುದನ್ನು ಟೀಕೆ ಮಾಡಲಾಗಿತ್ತು. ನಿರ್ಧಾರವನ್ನು ಮತ್ತೊಮ್ಮೆ ಪರಿಶೀಲಿಸುವಂತೆ ಫೇಸ್ಬುಕ್ಗೆ ಹೇಳಿತ್ತು. ಸಾಮಾನ್ಯ ಬಳಕೆದಾರರು ಸೇರಿದಂತೆ ಎಲ್ಲರಿಗೂ ಅನ್ವಯಿಸುವಂತೆ ಸಮರ್ಥನೆ ನೀಡುವಂಥ ಸಮಾನಾಂತರ ಪ್ರತಿಕ್ರಿಯೆಯನ್ನು ನೀಡಬೇಕು ಎಂದು ತಿಳಿಸಲಾಗಿತ್ತು. ಕ್ಯಾಪಿಟಲ್ ಹಿಲ್ ಹಿಂಸಾಚಾರದ ನಂತರ, ಜನವರಿಯಲ್ಲಿ ಎತಡೂ ವೆಬ್ಸೈಟ್ನಿಂದ ಟ್ರಂಪ್ರನ್ನು ನಿಷೇಧಿಸಲಾಗಿತ್ತು.
ಇದನ್ನೂ ಓದಿ: Wuhan Lab ‘ಚೀನಾ ವೈರಸ್ ವುಹಾನ್ ಲ್ಯಾಬ್ನಿಂದ ಬಂದದ್ದು’ ನಾನು ಅಂದು ಹೇಳಿದ್ದು ಸರಿ ಇದೆ ಅಲ್ಲವೇ?: ಡೊನಾಲ್ಡ್ ಟ್ರಂಪ್
Published On - 11:12 pm, Fri, 4 June 21