ಡೊನಾಲ್ಟ್ ಟ್ರಂಪ್ ಸರ್ಕಾರದಲ್ಲಿ ಅನುಭವಿಸಿದ ನೋವು ತೋಡಿಕೊಂಡ ಅಮೆರಿಕದ ಆಂತೋನಿ ಫೌಚಿ
ಪಿಡುಗಿನೊಂದಿಗೆ ಏಗುವಾಗ ಪ್ರತಿಯೊಂದು ಪ್ರಶ್ನೆಗೆ ತಾನು ಉತ್ತರಿಸಬೇಕಾದ ಪರಿಸ್ಥಿತಿಯಲ್ಲಿ ಎದುರಾಗುತ್ತಿದ್ದ ಸಮಯದ ಅಭಾವ ಮತ್ತು ಹೆಣಗಾಟ ಬಗ್ಗೆ ಫೌಚಿ ಅವರು ಇತ್ತೀಚಿಗೆ ಬಹಿರಂಗವಾಗಿ ಮಾತಾಡಲಾರಂಭಿಸಿದ್ದಾರೆ.
ವಾಷಿಂಗ್ಟನ್: ಅತ್ಯಂತ ಗಂಡಾಂತರಕಾರಿ ಕೊರೊನಾ ವೈರಸ್ ವಿರುದ್ಧ ಇಡೀ ವಿಶ್ವದ ಪರವಾಗಿ ಒಂದು ವರ್ಷಕ್ಕಿಂತ ಹೆಚ್ಚಿನ ಸಮಯದವರೆಗೆ ಹೋರಾಡಿದ ಅಮೆರಿಕದ ರೋಗ ನಿಯಂತ್ರಣ ಆಧಿಕಾರಿ ಅಂತೋನಿ ಫೌಚಿ ಅವರು ಡೊನಾಲ್ಡ್ ಟ್ರಂಪ್ ನೇತೃತ್ವದ ಹಿಂದಿನ ಸರ್ಕಾರದಲ್ಲಿ ತಾನು ಅನುಭವಿಸಿದ ಯಾತನೆ ಮತ್ತು ವೈಟ್ಹೈಸ್ನಲ್ಲಿ ಅನುಭವಿಸಿದ ನೋವನ್ನು ಹೇಳಿಕೊಂಡಿದ್ದಾರೆ. ಫೌಚಿ ಅವರು ತಮ್ಮ ನೋವನ್ನು ಹೇಳಿಕೊಂಡಿರುವ ಮೇಲ್ಗಳು ವಾಷಿಂಗ್ಟನ್ ಪೋಸ್ಟ್ ಮತ್ತು ಬಜ್ಫೀಡ್ ವೆಬ್ಸೈಟ್ಗಳಿಗೆ ಲಭ್ಯವಾಗಿವೆ. ಫೌಚಿ ಮತ್ತು ಉಳಿದ ಟಾಸ್ಕ್ ಫೋರ್ಸ್ ನಡುವೆ ನಡೆದಿರುವ ಮೇಲ್ ವ್ಯವಹಾರಗಳಲ್ಲಿ, ಒಬ್ಬ ತಜ್ಞನಾಗಿ ಕೊವಿಡ್ ಪಿಡುಗಿನ ಮೊದಲ ಅಲೆಯಲ್ಲಿ ಫಾಸಿ ತಾನೆದುರಿಸ ಬೇಕಾಗಿ ಬಂದ ಗೊಂದಲ, ಸಂದೇಹ, ಹೆಣಗಾಟ ಮೊದಲಾದವುಗಳ ಬಗ್ಗೆ ಹೇಳಿಕೊಂಡಿದ್ದಾರೆ.
ಪಿಡುಗಿನೊಂದಿಗೆ ಏಗುವಾಗ ಪ್ರತಿಯೊಂದು ಪ್ರಶ್ನೆಗೆ ತಾನು ಉತ್ತರಿಸಬೇಕಾದ ಪರಿಸ್ಥಿತಿಯಲ್ಲಿ ಎದುರಾಗುತ್ತಿದ್ದ ಸಮಯದ ಅಭಾವ ಮತ್ತು ಹೆಣಗಾಟ ಬಗ್ಗೆ ಫೌಚಿ ಅವರು ಇತ್ತೀಚಿಗೆ ಬಹಿರಂಗವಾಗಿ ಮಾತಾಡಲಾರಂಭಿಸಿದ್ದಾರೆ.
‘ಪ್ರತಿಯೊಂದು ಬಗೆಯ ಪ್ರಶ್ನೆಯನ್ನು ನನಗೆ ಕೇಳಲಾಗುತಿತ್ತು. ಅದರಲ್ಲಿ ಹೆಚ್ಚಿನವರು ವೈಟ್ಹೌಸ್ನಿಂದ ಹೊರಬೀಳುತ್ತಿದ್ದ ಮೆಸೇಜಗಳ ಕುರಿತು ಗೊಂದಲ ಇಟ್ಟುಕೊಂಡು, ನನಗೆ ಪ್ರಶ್ನೆಗಳನ್ನು ಕೇಳಿ ಅದನ್ನು ನಿವಾರಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದರು. ಜನರು ಕೇಳುವ ಪ್ರತಿಯೊಂದು ಪ್ರಶ್ನೆಗೆ ಉತ್ತರಿಸುವೆನೆಂಬ ಖ್ಯಾತಿ ನನಗಿರುವುದರಿಂದ ಎಲ್ಲ ಪ್ರಶ್ನೆಗಳಿಗೆ ಉತ್ತರಿಸುವ ಪ್ರಯತ್ನ ಮಾಡುತ್ತಿದ್ದೆ. ಆದರೆ. ಇದರಲ್ಲಿ ಬಹಳ ಸಮಯ ವ್ಯರ್ಥವಾಗುತಿತ್ತು. ಆದರೂ ನಾನು ಉತ್ತರಿಸುವುದನ್ನು ಬಿಡುತ್ತಿರಲಿಲ್ಲ,’ ಎಂದು ಫೌಚಿ ದಿನಪತ್ರಿಕೆಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.
ತಮ್ಮ ಮೇಲ್ಗಳಲ್ಲಿ ಫಾಸಿ ಅವರು, ‘ಪ್ರಪಂಚದಲ್ಲಿ ಹುಚ್ಚು ಜನರಿದ್ದಾರೆ’ ಎಂದು ಹೇಳಿರುವುದು ಅವರಲ್ಲಿರುವ ಹತಾಷೆಯನ್ನು ಸೂಚಿಸುತ್ತದೆ. ಕೆಲವು ನಾಯಕರು ತಮ್ಮ ವೈಯಕ್ತಿಕ ಲಾಭಕ್ಕಾಗಿ ಕೊವಿಡ್ ಪಿಡುಗನ್ನು ರಾಜಕೀಯಗೊಳಿಸಿದರು ಎಂದು ಫೌಚಿ ಹೇಳಿದ್ದಾರೆ.
ಫೌಚಿ ಅವರು; ಬಿಲ್ ಗೇಟ್ಸ್ ಪ್ರತಿಷ್ಠಾನ, ಫೇಸ್ಬುಕ್ ಸಂಸ್ಥಾಪಕ ಮಾರ್ಕ್ ಝಕರ್ಬರ್ಗ್ ಮತ್ತು ವಿಖ್ಯಾತ ನಟ ಮೊರ್ಗನ್ ಫ್ರೀಮನ್ ಅಲ್ಲದೆ ಇನ್ನೂ ಅನೇಕ ಜನರ ಜೊತೆ ಮೇಲ್ ವ್ಯವಹಾರ ಇಟ್ಟುಕೊಂಡಿದ್ದು ಅವರ ಮೇಲ್ಗಳ ಮೂಲಕ ಗೊತ್ತಾಗುತ್ತದೆ.
ಫ್ರೀಮನ್ ಅವರು ಸೋಶಿಯಲ್ ಮೀಡಿಯಾದ ತನ್ನ ಖಾತೆಗಳನ್ನು ಕೊವಿಡ್-19 ಸೋಂಕಿನ ಕುರಿತು ಮಾಹಿತಿ ಹರಡಲು ಬಳಸುವುದಾಗಿ ಫೌಚಿ ಅವರಿಗೆ ಹೇಳಿದ್ದರೆ, ಝಕರ್ಬರ್ಗ್, ಫೇಸ್ಬುಕ್ನಲ್ಲಿ ಕೊರೋನಾದ ರೋಗಲಕ್ಷಣಗಳು, ಟೆಸ್ಟ್ಗಳು, ಪರಿಣಾಮಗಳು ಮತ್ತು ಲಸಿಕೆಗಳ ಕುರಿತು ಒಂದು ಹಬ್ ಸೃಷ್ಟಿ ಮಾಡುವ ಬಗ್ಗೆ ಮಾತಾಡಿದ್ದಾರೆ.
ಗೇಟ್ಸ್ ಮತ್ತು ಫೌಚಿ; ಗೇಟ್ಸ್ ಪೌಂಡೇಶನ್ ಮೂಲಕ ಕೊವಿಡ್-19 ನೆಡೆ ಒಂದು ಸಂಯುಕ್ತ ಮತ್ತು ಪರಸ್ಪರ ಸಹಕಾರದ ಧೋರಣೆ ಹೊಂದುವ ಬಗ್ಗೆ ಮಾತಾಡಿದ್ದಾರೆ.
ಫೌಚಿ ಮತ್ತು ಬೇರೆಯವರ ನಡುವೆ ನಡೆದಿರುವ ಬಹುತೇಕ ಮೇಲ್ಗಳು ಅಧಿಕೃತ ಸ್ವರೂಪವುಳ್ಳವವಾಗಿದ್ದರೂ ಕೆಲವು ಕ್ಯಾಶುಅಲ್ ಆಗಿದ್ದು ಉಭಯ ಕುಶಲೋಪರಿ ವಿಚಾರಿಸುವುದಕ್ಕೆ ಮತ್ತು
ಪರಿಚಿತ ವ್ಯಕ್ತಿಗಳ ಟೆಸ್ಟಿಂಗ್ ಮೊದಲಾದವುಗಳ ಬಗ್ಗೆ ತಿಳಿದುಕೊಳ್ಳಲು ನಡೆದಿರುವ ಮೇಲ್ ವ್ಯವಹಾರಗಳಾಗಿವೆ. ಅಂಥ ಒಂದು ಈ ಮೇಲ್ನಲ್ಲಿ ಗೇಟ್ಸ್ ಪೌಂಡೇಶನ್ ನಿರ್ದೇಶಕ ಎಮಿಲಿಯೋ ಎಮಿನಿ ಅವರು ಫೌಚಿಯ ಬ್ಯೂಸಿ ಶೆಡ್ಯೂಲ್ ಹಿನ್ನೆಲೆಯಲ್ಲಿ ಅವರ ಆರೋಗ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಉತ್ತರಿಸಿರುವ ಫೌಚಿ, ಅನಾರೋಗ್ಯಕ್ಕೀಡಾಗುವ ಭೀತಿಯನ್ನು ತಳ್ಳಿಹಾಕಿ, ತಾನಿರುವ ಸ್ಥಿತಿಯೊಂದಿಗೆ ಏಗಲು ಸದಾ ಕಾರ್ಯಶೀಲನಾಗಿರುವುದಾಗಿ ಹೇಳಿದ್ದಾರೆ.
ಮತ್ತೊಂದು ಈ ಮೇಲ್ನಲ್ಲಿ, ಟೀವಿ ಪರದೆಗಳ ಮೇಲೆ ಕಾಣಿಸುವ ನಾಯಕರು ಮತ್ತು ತಜ್ಞರ ಮೇಲೆ ಜನ ಕ್ರಶ್ ಆಗುವುದನ್ನು ವಿವರಿಸುವ ‘ಕ್ಯೂಮೊ ಕ್ರಶ್ ಅಂಡ್ ಫಾಸಿ ಫೀವರ್ ಸೆಕ್ಸುಅಲೈಸೇಶನ್ ಆಫ್ ದೀಸ್ ಮೆನ್ ಈಸ್ ಎ ರಿಯಲ್ ಥಿಂಗ್ ಆನ್ ದ ಇಂಟರ್ನೆಟ್,’ ಎಂಬ ಶೀರ್ಷಿಕೆಯ ಲೇಖನವೊಂದನ್ನು ಲಿಂಕ್ ಮಾಡಿ ಅದು ಸತ್ಯವೇ ಎಂದು ಕೇಳಿರುವುದಕ್ಕೆ ಉತ್ತರಿಸಿರುವ ಫೌಚಿ, ‘ಆ ಲೇಖನ ಹುಚ್ಚು ಹಿಡಿಸುತ್ತದೆ, ನಮ್ಮ ಸಮಾಜಕ್ಕೆ ನಿಜಕ್ಕೂ ಹುಚ್ಚು ಹಿಡಿದಿದೆ,’ ಎಂದು ಹೇಳಿದ್ದಾರೆ.
(Anthony Fauci Covid First Wave Bill Gates Foundation Mark Zuckerberg Morgan Freeman)
ಇದನ್ನೂ ಓದಿ: ಅಪಾಯದಲ್ಲಿರುವ ಭಾರತಕ್ಕೆ ಸಹಾಯ ಮಾಡಲು ವಿಶ್ವ ವಿಫಲವಾಗಿದೆ: ಯುಎಸ್ನ ವೈದ್ಯಕೀಯ ಸಲಹೆಗಾರ ಡಾ. ಫೌಸಿ ಅಸಮಾಧಾನ