ಮೆಹುಲ್​ ಚೋಕ್ಸಿಯನ್ನು ಕರೆತರಲು ಭಾರತಕ್ಕೆ ಕಾನೂನು ತೊಡಕು?-ಅತ್ತ ಡೊಮಿನಿಕಾ ಪ್ರತಿಪಕ್ಷ ನಾಯಕನಿಗೆ ಹಣದಾಸೆ ತೋರಿದ ಚೋಕ್ಸಿ ಸೋದರ !

ಮೆಹುಲ್​ ಚೋಕ್ಸಿಯನ್ನು ಕರೆತರಲು ಭಾರತಕ್ಕೆ ಕಾನೂನು ತೊಡಕು?-ಅತ್ತ ಡೊಮಿನಿಕಾ ಪ್ರತಿಪಕ್ಷ ನಾಯಕನಿಗೆ ಹಣದಾಸೆ ತೋರಿದ ಚೋಕ್ಸಿ ಸೋದರ !
ಮೆಹುಲ್ ಚೋಸ್ಕಿ

ಚೋಕ್ಸಿ ಡೊಮಿನಿಕಾದಲ್ಲಿ ಬಂಧಿತರಾಗಿ, ಕಾನೂನು ಪ್ರಕ್ರಿಯೆಗಳು ಶುರುವಾದ ಬೆನ್ನಲ್ಲೇ ಅವರ ಅಣ್ಣ ಚೇತನ್​ ಚಿನು ಭಾಯ್​ ಚೋಕ್ಸಿ ಫೀಲ್ಡ್​​ಗೆ ಇಳಿದಿದ್ದಾರೆ. ಮೇ 29ರಂದು ಖಾಸಗಿ ಜೆಟ್​​ನಲ್ಲಿ ಡೊಮಿನಿಕಾವವನ್ನು ತಲುಪಿದ್ದಾರೆ.

Lakshmi Hegde

|

Jun 02, 2021 | 4:35 PM

ಡೊಮಿನಿಕಾದಲ್ಲಿ ಬಂಧಿತನಾಗಿರುವ ಮೆಹುಲ್​ ಚೋಕ್ಸಿ ಗಡೀಪಾರಿಗೆ ಸಂಬಂಧಪಟ್ಟ ಪ್ರಕರಣದ ಅರ್ಜಿ ವಿಚಾರಣೆ ಇಂದು ಪೂರ್ವ ಕೆರಿಬಿಯನ್​ ಸುಪ್ರಿಂಕೋರ್ಟ್​ನಲ್ಲಿ ಇಂದು ನಡೆಯುವುದಿತ್ತು. ಭಾರತದ ಪಾಲಿಗೆ ದೇಶಭ್ರಷ್ಟ ವಜ್ರದ ವ್ಯಾಪಾರಿಯಾಗಿರುವ ಚೋಕ್ಸಿ, ಇಲ್ಲಿಂದ ಆಂಟಿಗುವಾಕ್ಕೆ ಹೋಗಿ, ತಮ್ಮ ವಿರುದ್ಧ ಕಾನೂನು ಪ್ರಕ್ರಿಯೆಗಳು ಶುರುವಾಗುತ್ತಿದ್ದಂತೆ ಅಲ್ಲಿಂದ ಗುಟ್ಟಾಗಿ ಡೊಮಿನಿಕಾಗೆ ನುಸುಳಿದ್ದರು. ಪಂಜಾಬ್​ ನ್ಯಾಷನಲ್​ ಬ್ಯಾಂಕ್​ ಹಗರಣದ ತನಿಖೆಯನ್ನು ಸಿಬಿಐ ಶುರುಮಾಡುವುದಕ್ಕೂ ಒಂದು ವಾರ ಮೊದಲು ಆಂಟಿಗುವಾಕ್ಕೆ ತೆರಳಿದ್ದ ಚೋಕ್ಸಿ, 2017ರ ನವೆಂಬರ್​ನಲ್ಲಿ ಅಲ್ಲಿನ ಹೂಡಿಕೆ ಮೂಲಕ ಪೌರತ್ವ ಪಡೆಯುವ (CIP) ಕಾರ್ಯಕ್ರಮದ ಮೂಲಕ ಆಂಟಿಗುವಾ ಪೌರತ್ವ ಪಡೆದಿದ್ದರು.

ಡೊಮಿನಿಕಾದಲ್ಲಿ ಚೋಕ್ಸಿ ಬಂಧಿತರಾಗುತ್ತಿದ್ದಂತೆ ಭಾರತ ಅಲ್ಲಿಗೆ ಎಂಟು ಜನ ಅಧಿಕಾರಿಗಳ ತಂಡವನ್ನು ಕಳಿಸಿದೆ. ಚೋಕ್ಸಿಯನ್ನು ಕಾನೂನು ಪ್ರಕ್ರಿಯೆ ಮೂಲಕ ಕರೆತರಲು ಈ ತಂಡ ತೆರಳಿದ್ದು, ಶಾರದಾ ರಾವತ್​ ಎಂಬ ಮಹಿಳಾ ಸಿಬಿಐ ಅಧಿಕಾರಿ ತಂಡದ ನೇತೃತ್ವ ವಹಿಸಿದ್ದಾರೆ. ಆದರೆ ಚೋಕ್ಸಿಯ ಪರ ವಕೀಲರ ಮನವಿಯ ಮೇರೆಗೆ ಚೋಕ್ಸಿಯನ್ನು ಭಾರತಕ್ಕೆ ಕಳಿಸಲು ಸದ್ಯದ ಮಟ್ಟಿಗೆ ಪೂರ್ವ ಕೆರಿಬಿಯನ್​ ಸುಪ್ರೀಂಕೋರ್ಟ್​ ತಡೆ ನೀಡಿದೆ.

ಇನ್ನು ಚೋಕ್ಸಿಯನ್ನು ಭಾರತಕ್ಕೆ ಕಳಿಸದಂತೆ ತಡೆಯಲು ಅವರ ಪರ ಲಂಡನ್​ನ ನಾಲ್ವರು ವಕೀಲರು ಕೆಲಸ ಮಾಡುತ್ತಿದ್ದಾರೆ. ಚೋಕ್ಸಿಗೆ ಕಳೆದ 6ತಿಂಗಳಿಂದ ಪರಿಚಯವಿದ್ದ ಯುವತಿಯೊಬ್ಬಳು ಅವರನ್ನು ಹನಿಟ್ರ್ಯಾಪ್​ ಮಾಡಿದ್ದಾಳೆ. ಆಂಟಿಗುವಾದಲ್ಲಿ ಆ ಯುವತಿ ಮೆಹುಲ್​ ಚೋಕ್ಸಿಯನ್ನು ಭೇಟಿಗಾಗಿ ಕರೆದಿದ್ದಳು. ಅಲ್ಲಿಂದ ಅವರನ್ನು ಪುರುಷರ ಗುಂಪೊಂದು ಅಪಹರಿಸಿ ಕರೆದುಕೊಂಡು ಹೋಗಿದೆ ಎಂದು ವಕೀಲರ ತಂಡ ಕೋರ್ಟ್​ಗೆ ಹೇಳಿದೆ. ಅಷ್ಟೇ ಅಲ್ಲ, ಅವರು ಭಾರತದ ಪ್ರಜೆ ಅಲ್ಲ, ಆಂಟಿಗುವಾ ಪ್ರಜೆ ಎಂಬುದರ ದಾಖಲೆಯನ್ನೂ ನ್ಯಾಯಾಲಯಕ್ಕೆ ಸಲ್ಲಿಸಿದೆ. ಹೀಗಾಗಿ ಭಾರತಕ್ಕೆ ಚೋಕ್ಸಿಯನ್ನು ಅಷ್ಟು ಸುಲಭಕ್ಕೆ ಕರೆತರುವುದು ಸಾಧ್ಯವಿಲ್ಲ. ಸುಪ್ರೀಂಕೋರ್ಟ್​​ನಲ್ಲಿ ವಿಚಾರಣೆಯಾಗಲೇಬೇಕಾಗಿದೆ.

ಭಾರತದ ಪೌರತ್ವ ರದ್ದಾಗಿಲ್ಲ ಮೆಹುಲ್​ ಚೋಕ್ಸಿ ಇಲ್ಲಿಯೂ ಒಂದು ಎಡವಟ್ಟು ಮಾಡಿದ್ದಾರೆ. ಅವರು ಆಂಟಿಗುವಾ ಪೌರತ್ವ ಪಡೆದುಕೊಂಡಿದ್ದರೂ, ಭಾರತದ ಪೌರತ್ವವನ್ನು ರದ್ದು ಮಾಡಿಕೊಂಡಿಲ್ಲ. ಇದು ಚೋಕ್ಸಿಯನ್ನು ಭಾರತಕ್ಕೆ ಕರೆತರುವ ಪ್ರಯತ್ನಕ್ಕೆ ಮುನ್ನಡೆ ಕೊಡುವ ಅಂಶವಾಗಿದೆ ಎಂದು ಉನ್ನತ ಮೂಲಗಳಿಂದ ಮಾಹಿತಿ ಸಿಕ್ಕಿದ್ದಾಗಿ ಹಿಂದೂಸ್ತಾನ್ ಟೈಮ್ಸ್​ ವರದಿ ಮಾಡಿದೆ. ಆದರೆ ಎರಡು ಪೌರತ್ವವನ್ನು ಭಾರತ ಅನುಮತಿಸುವುದಿಲ್ಲ. 1955ರ ಪೌರತ್ವ ಕಾಯ್ದೆ ಸೆಕ್ಷನ್​ 9ರ ಪ್ರಕಾರ ಚೋಕ್ಸಿ ಆಂಟಿಗುವಾ ಪೌರತ್ವ ಪಡೆಯುತ್ತಿದ್ದಂತೆ ಭಾರತದ ಪೌರತ್ವವನ್ನು ಕಳೆದುಕೊಳ್ಳುತ್ತಾರೆ. ಹಾಗಾಗಿ ಈ ವಿಚಾರದಲ್ಲಿ ಭಾರತಕ್ಕೆ ವಾದಮಂಡನೆ ತುಸು ಕಷ್ಟವೇ ಆಗಬಹುದು.

ಇನ್ನೊಂದು ವಿಚಾರ ಚೋಕ್ಸಿಯನ್ನು ಭಾರತಕ್ಕೆ ಕರೆತರಲು ಸಹಾಯ ಮಾಡಬಹುದು. ಮೆಹುಲ್​ ಚೋಕ್ಸಿ ಮಾಡಿದ್ದು ಆರ್ಥಿಕ ಅಪರಾಧ. ಆತನ ವಿರುದ್ಧ ರೆಡ್​ ಇಂಟರ್​​ಪೋಲ್​ ನೋಟಿಸ್​ ಜಾರಿಯಾಗಿತ್ತು. ಈ ಇಂಟರ್​ಪೋಲ್​ ನೋಟಿಸ್ ಜಾರಿಯಾದಾಗಿಯೂ ಚೋಕ್ಸಿ ದೇಶಬಿಟ್ಟು ಹೋಗಿದ್ದಾರೆ. ಇದು ಕಾನೂನು ಪ್ರಕಾರ ತಪ್ಪು ಎಂಬುದನ್ನು ಭಾರತ ಡೊಮಿನಿಕಾ ಕೋರ್ಟ್​ಗೆ ಮನವರಿಕೆ ಮಾಡಿಸಿಕೊಡಬೇಕಾಗುತ್ತದೆ. ಇಂಟರ್​ಪೋಲ್​ ನೋಟಿಸ್​ ಅನ್ವಯ ಡೊಮಿನಿಕಾ ನ್ಯಾಯಾಲಯ ಯಾವುದೇ ಸಮಯದಲ್ಲಾದರೂ ಚೋಕ್ಸಿಯನ್ನು ಭಾರತಕ್ಕೆ ಕಳಿಸಬಹುದು. ಆದರೆ ಚೋಕ್ಸಿ ಹನಿಟ್ರ್ಯಾಪ್​ ಆಗಿದ್ದಕ್ಕೆ ಬಲವಾದ ಸಾಕ್ಷಿ ಸಿಕ್ಕರೆ ಕೋರ್ಟ್​ ಖಂಡಿತ ಚೋಕ್ಸಿಯನ್ನು ಆಂಟಿಗುವಾಕ್ಕೆ ಕಳಿಸುತ್ತದೆ ಎಂದು ಸಿಬಿಐ ನಿರ್ದೇಶಕ ಎಪಿ ಸಿಂಗ್​ ಹೇಳಿದ್ದಾರೆ.

ಡೊಮಿನಿಕಾ ಪ್ರತಿಪಕ್ಷ ನಾಯಕನ ಭೇಟಿ ಮಾಡಿದ ಚೋಕ್ಸಿ ಅಣ್ಣ ಚೋಕ್ಸಿ ಡೊಮಿನಿಕಾದಲ್ಲಿ ಬಂಧಿತರಾಗಿ, ಕಾನೂನು ಪ್ರಕ್ರಿಯೆಗಳು ಶುರುವಾದ ಬೆನ್ನಲ್ಲೇ ಅವರ ಅಣ್ಣ ಚೇತನ್​ ಚಿನು ಭಾಯ್​ ಚೋಕ್ಸಿ ಫೀಲ್ಡ್​​ಗೆ ಇಳಿದಿದ್ದಾರೆ. ಮೇ 29ರಂದು ಖಾಸಗಿ ಜೆಟ್​​ನಲ್ಲಿ ಡೊಮಿನಿಕಾವನ್ನು ತಲುಪಿರುವ ಅವರು, ಅಲ್ಲಿನ ಪ್ರತಿಪಕ್ಷ ನಾಯಕ ಲೆನಾಕ್ಸ್​ ಲಿಂಟಿನ್​​ರನ್ನು ಭೇಟಿಯಾಗಿ ಒಪ್ಪಂದವೊಂದಕ್ಕೆ ಬಂದಿದ್ದಾರೆ. ಚೋಕ್ಸಿ ಬಂಧನ, ಅವರನ್ನು ಥಳಿಸಿದ ಬಗ್ಗೆ ನೀವು ಸಂಸತ್ತಿನಲ್ಲಿ ಧ್ವನಿಯೆತ್ತಿ, ನಮಗೆ ಸಹಾಯ ಮಾಡಿ. ಅದಕ್ಕೆ ಪ್ರತಿಯಾಗಿ ನಾನು ನಿಮಗೆ ಚುನಾವಣೆಗೆ ಧನ ಸಹಾಯ ಮಾಡುತ್ತೇನೆ ಎಂದು ವ್ಯವಹಾರ ಕುದುರಿಸಿದ್ದಾಗಿ ಕೆರಿಬಿಯನ್​ ಮಾಧ್ಯಮವೊಂದು ವರದಿ ಮಾಡಿದೆ.

ಇದನ್ನೂ ಓದಿ: ಕನ್ನಡದಲ್ಲಿ ಬರ್ತಿದೆ ನೇತಾಜಿ ಸುಭಾಷ್​ ಚಂದ್ರ ಬೋಸ್​ ಬಗ್ಗೆ ಧಾರಾವಾಹಿ; ಜೂನ್​ 7ರಿಂದ ಶುರು

Some leagal issues in bringing Fugitive jeweller Mehul Choksi back to India

Follow us on

Most Read Stories

Click on your DTH Provider to Add TV9 Kannada