ಕೊರೊನಾ ವೈರಸ್ ಹುಟ್ಟಿನ ಬಗ್ಗೆ ಮತ್ತೊಮ್ಮೆ ಪರೀಕ್ಷೆ ನಡೆಸಲು ಸಕಲ ಸಿದ್ಧತೆ ಮಾಡಿಕೊಂದ ಡಬ್ಲ್ಯೂಹೆಚ್​ಒ, ಹಾಲೆಂಡ್​ನಲ್ಲಿ ನಡೆಯಲಿದೆ ಟೆಸ್ಟಿಂಗ್

ಕೊರೊನಾ ವೈರಸ್ ಹುಟ್ಟಿನ ಬಗ್ಗೆ ಮತ್ತೊಮ್ಮೆ ಪರೀಕ್ಷೆ ನಡೆಸಲು ಸಕಲ ಸಿದ್ಧತೆ ಮಾಡಿಕೊಂದ ಡಬ್ಲ್ಯೂಹೆಚ್​ಒ, ಹಾಲೆಂಡ್​ನಲ್ಲಿ ನಡೆಯಲಿದೆ ಟೆಸ್ಟಿಂಗ್
ಪ್ರಾತಿನಿಧಿಕ ಚಿತ್ರ

ಕೊವಿಡ್​-19 ವೈರಸ್ ಮೊದಲ ಬಾರಿಗೆ ಚೀನಾದ ಕೇಂದ್ರ ಭಾಗದಲ್ಲಿರುವ ವುಹಾನ್​ ನಗರದಲ್ಲಿ 2019 ರ ಡಿಸೆಂಬರ್​ನಲ್ಲಿ ಪತ್ತೆಯಾಗಿತ್ತು. ಇಟಲಿಯಲ್ಲಿ ಮಿಲಾನ್​ಗೆ ಹತ್ತಿರವಿರುವ ಒಂದು ಸಣ್ಣ ಊರಿನಲ್ಲಿ ಮೊದಲ ರೋಗಿಯನ್ನು ಕಳೆದ ವರ್ಷ ಪೆಬ್ರವರಿ 21ರಂದು ಗುರುತಿಸಲಾಗಿತ್ತು.

Arun Belly

|

Jun 02, 2021 | 11:39 PM

ಅಕ್ಟೋಬರ್ 2019ರಲ್ಲೇ ಕೊರೊನಾ ವೈರಸ್ ಚೀನಾದ ಹೊರಗಡೆ ಹಬ್ಬಿತ್ತು ಎಂದು ಹೇಳಿರುವ ಇಟಲಿಯಲ್ಲಿ ನಡೆದ ಅಧ್ಯಯನವೊಂದರ ಅಂಶಗಳನ್ನು ವಿಶ್ವ ಆರೋಗ್ಯ ಸಂಸ್ಥೆಯ ಮನವಿಯ ಮೇರೆಗೆ ಪುನರ್-ಪರೀಕ್ಷೆ ಮಾಡಲಾಗುವುದೆಂದು ಅಲ್ಲಿ ನಡೆದ ಅಧ್ಯಯನದ ಭಾಗವಾಗಿದ್ದ ಇಬ್ಬರು ಇಟಾಲಿಯನ್ ವಿಜ್ಞಾನಿಗಳು ಹೇಳಿದ್ದಾರೆ. ವಿಶ್ವದಾದ್ಯಂತ ಮೂವತ್ತು ಲಕ್ಷಕ್ಕೂ ಹೆಚ್ಚು ಜನರನ್ನು ಕೊಂದಿರುವ ವೈರಸ್​ನ ಮೂಲವನ್ನು ಪತ್ತೆಮಾಡಲು ಅಂತರರಾಷ್ಟ್ರೀಯ ಒತ್ತಡ ಹೆಚ್ಚಿದ್ದು ಅಮೇರಿಕ ಅಧ್ಯಕ್ಷ ಜೋ ಬೈಡೆನ್ ಸಹ ಸದರಿ ಪ್ರಶ್ನೆಗೆ ಉತ್ತರಗಳನ್ನು ಕಂಡುಕೊಳ್ಳುವಂತೆ ತಮ್ಮ ಸಹಾಯಕರಿಗೆ ಹೇಳಿದ್ದಾರೆ.

ಕೊವಿಡ್​-19 ವೈರಸ್ ಮೊದಲ ಬಾರಿಗೆ ಚೀನಾದ ಕೇಂದ್ರ ಭಾಗದಲ್ಲಿರುವ ವುಹಾನ್​ ನಗರದಲ್ಲಿ 2019 ರ ಡಿಸೆಂಬರ್​ನಲ್ಲಿ ಪತ್ತೆಯಾಗಿತ್ತು. ಇಟಲಿಯಲ್ಲಿ ಮಿಲಾನ್​ಗೆ ಹತ್ತಿರವಿರುವ ಒಂದು ಸಣ್ಣ ಊರಿನಲ್ಲಿ ಮೊದಲ ರೋಗಿಯನ್ನು ಕಳೆದ ವರ್ಷ ಪೆಬ್ರವರಿ 21ರಂದು ಗುರುತಿಸಲಾಗಿತ್ತು. ಆದರೆ, ಕಳೆದ ವರ್ಷ ಪ್ರಕಾಶನಗೊಂಡ ಅಧ್ಯಯನದ ಪ್ರಕಾರ ಇಟಲಿಯಲ್ಲಿ ಕೊರೊನಾ ವೈರಸ್ ಅಥವಾ ಅದರ ರೂಪಾಂತರಿಗಳಿಗೆ ಪ್ರತಿಕಾಯಗಳು 2019ರಲ್ಲಿ ಪತ್ತೆಯಾಗಿದ್ದವು.

ಸದರಿ ಅಧ್ಯಯನದ ಆಧಾರದಲ್ಲೇ ಚೀನಾದ ಮಾಧ್ಯಮಗಳು, ಕೊರೊನಾ ವೈರಸ್ ಪ್ರಾಯಶಃ ಚೀನಾದಲ್ಲಿ ಸೃಷ್ಟಿಯಾಗಿರಲಿಕ್ಕಿಲ್ಲ ಎಂದು ಹೇಳತೊಡಗಿದವು. ಇಟಲಿಯಲ್ಲಿ ನಡೆದ ಸಂಶೋಧನೆ ವೈರಸ್ ಎಲ್ಲಿ ಸೃಷ್ಟಿಯಾಯಿತು ಅನ್ನುವದಕ್ಕಿಂತ ಯಾವಾಗ ಸೃಷ್ಟಿಯಾಯಿತು ಎನ್ನುವ ಅಂಶದ ಮೇಲೆ ಜಾಸ್ತಿ ಒತ್ತು ನೀಡಿದೆ.

‘ನಾವು ಸಂಶೋಧನೆಯಲ್ಲಿ ಬಳಸಿದ ಜೈವಿಕ ವಸ್ತುವನ್ನು ಹಂಚಿಕೊಂಡರೆ ಒಂದು ಸ್ವತಂತ್ರ ಲ್ಯಾಬ್​ನಲ್ಲಿ ಅದರ ಪರೀಕ್ಷಣೆಯನ್ನು ಮತ್ತೊಮ್ಮೆ ಮಾಡಲು ಸಹಾಯವಾಗುತ್ತದೆ ಎಂದು ಡಬ್ಲ್ಯೂಹೆಚ್​ಒ ಹೇಳಿದಾಗ ನಾವು ಅದರ ಪ್ರಸ್ತಾಪವನ್ನು ಅಂಗೀಕರಿಸಿದೆವು,’ ಎಂದು ಮಿಲಾನ್ ಕ್ಯಾನ್ಸರ್ ಸಂಸ್ಥೆಯ ವೈಜ್ಞಾನಿಕ ನಿರ್ದೇಶಕರಾಗಿರುವ ಜಿಯೊವನ್ನಿ ಅಪಲೋನ್ ಹೇಳಿದ್ದಾರೆ.

ಸಂಶೋಧನೆಯ ಮೂಲ ಪೇಪರ ಪ್ರಕಟಿಸಿದ ವಿಜ್ಞಾನಿಗಳೊಂದಿಗೆ ಡಬ್ಲ್ಯೂಹೆಚ್​ಒ ಸಂಪರ್ಕದಲ್ಲಿದೆ. ಮತ್ತಷ್ಟು ಟೆಸ್ಟಿಂಗ್​ಗಳನ್ನು ನಡೆಸಲು ಸಹಭಾಗಿತ್ವದಲ್ಲಿ ಲ್ಯಾಬ್​ಗಳನ್ನು ಸ್ಥಾಪಿಸಲಾಗಿದೆ, ಎಂದು ಒಬ್ಬ ಡಬ್ಲ್ಯೂಹೆಚ್​ಒ ಬಾತ್ಮೀದಾರ ಹೇಳಿದ್ದಾರೆ. ಸಂಶೋಧಕರು ಪಾಲೋ-ಅಪ್ ರಿಪೋರ್ಟನ್ನು ಇಷ್ಟರಲ್ಲೇ ಪ್ರಕಟಿಸಲಿರುವ ಬಗ್ಗೆ ಡಬ್ಲ್ಯೂಹೆಚ್​ಒಗೆ ಮಾಹಿತಿಯಿದೆ ಅಂತಲೂ ಅವರು ಹೇಳಿದ್ದಾರೆ

ಐಎನ್​ಟಿಯ ವೈಜ್ಞಾನಿಕ ಪತ್ರಿಕೆ ಟುಮೋರಿ ಜರ್ನಲ್​ನಲ್ಲಿ ಪ್ರಕಟವಾಗಿರುವ ಇಟಾಲಿಯನ್ ಸಂಶೋಧಕರ ಅಂಶಗಳಲ್ಲಿ, ಅಕ್ಟೋಬರ್ 2019ರಲ್ಲಿ ಇಟಲಿಯ ಆರೋಗ್ಯವಂತ ಸ್ವಯಂ ಸೇವಕರಿಂದ ಪಡೆದ ರಕ್ತವು SARS-CoV-2 ಗೆ ಪ್ರತಿಕಾಯಗಳನ್ನು ತಟಸ್ಥಗೊಳಿಸುವುದು ಸಹ ಸೇರಿದೆ.

ಸ್ವಯಂಸೇವಕರಲ್ಲಿ ಹೆಚ್ಚಿನವರು ಕೊರೊನಾ ವೈರಸ್ ಇಟಲಿಯಲ್ಲಿ ಮೊಟ್ಟಮೊದಲ ಬಾರಿಗೆ ಕಂಡುಬಂದ ಮತ್ತು ವೈರಸ್​ನಿಂದ ಇನ್ನಿಲ್ಲದಂತೆ ತತ್ತರಿಸಿದ ಲೊಂಬಾರ್ಡಿ ಪ್ರದೇಶದವರಾಗಿದ್ದರು.

‘ಇದುವರೆಗ ಪ್ರಕಟವಾಗಿರುವ ಯಾವುದೇ ಸಂಶೋಧನೆಯು, ವೈರಸ್​ನ ಬೌಗೋಳಿಕ ಮೂಲದ ಬಗ್ಗೆ ಪ್ರಶ್ನೆ ಎತ್ತಿಯೇ ಇಲ್ಲ,’ ಎಂದು ಅಪಲೋನ್ ಹೇಳಿದ್ದಾರೆ.

‘ಈಗ ಕ್ರಮೇಣವಾಗಿ ಬಲಗೊಳ್ಳುತ್ತಿರುವ ಸಂದೇಹವೇನಂದರೆ, ಮೊದಲಿಗೆ ಅಷ್ಟೇನೂ ಶಕ್ತವಾಗಿರದ ವೈರಸ್ ಸೋಂಕಿನ ಪ್ರಕರಣಗಳು ಬೆಳಕಿಗೆ ಬರುವ ಮೊದಲೇ ಚೀನಾದಲ್ಲಿ ಸರ್ಕ್ಯೂಲೇಟ್​ ಆಗುತಿತ್ತು ಎನ್ನುವುದು,’ ಎಂದು ಅವರು ಹೇಳಿದ್ದಾರೆ.

ಡಬ್ಲ್ಯೂಹೆಚ್​ಒ ಮರು-ಟೆಸ್ಟ್​ಗೆ ಆಯ್ಕೆ ಮಾಡಿಕೊಂಡಿರುವ ಹಾಲೆಂಡಿನ ರೊಟ್ಟರ್​ಡ್ಯಾಮ್ ಲ್ಯಾಬ್​ಗೆ ಇಟಾಲಿಯನ್ ಸಂಶೋಧಕರು 2019 ಅಕ್ಟೋಬರ್-ಡಿಸೆಂಬರ್ ಅವಧಿಯಲ್ಲಿ ಪತ್ತೆಯಾದ 30 ಪಾಸಿಟಿವ್ ಮತ್ತು 2018ರ ನೆಗೆಟಿವ್ ಜೈವಿಕ ಸ್ಯಾಂಪಲ್​ಗಳನ್ನು ಕಳಿಸಿದ್ದಾರೆ.

‘ನಾವು ಅವರಿಗೆ ಕುರುಡು ಸ್ಯಾಂಪಲ್​ಗಳನ್ನು ಕಳಿಸಿದ್ದೇವೆ, ಅಂದರೆ, ಅವರಿಗೆ ಕಳಿಸಿರುವ ಸ್ಯಾಂಪಲ್​ಗಳಲ್ಲಿ ಪಾಸಿಟಿವ್ ಯಾವವು ನೆಗೆಟಿವ್ ಯಾವು ಅಂತ ನಮ್ಮ ಸಹೋದ್ಯೋಗಿಗಳಿಗೂ ಗೊತ್ತಿಲ್ಲ,’ ಎಂದು ಅಪೊಲೋನ್ ಹೇಳಿದ್ದಾರೆ.

ಪತ್ತೆ ಮಾಡುವ ಎರಡು ವಿಧಾನಗಳಲ್ಲಿ ವ್ಯತ್ಯಾಸವಿದ್ದರೂ ಇಟಾಲಿಯನ್ ವಿಜ್ಞಾನಿಗಳು, ಫೆಬ್ರವರಿಯಲ್ಲಿ ಲಭ್ಯವಾದ ಫಲಿತಾಂಶಗಳಿಂದ ತಾವು ಸಂತೃಪ್ತರಾಗಿರುವುದಾಗಿ ಹೇಳಿದ್ದಾರೆ. ಡಚ್​ ವಿಜ್ಞಾನಿಗಳು ಸಂಶೋಧನೆ ನಡೆಸಿ ತಾವು ಪತ್ತೆ ಮಾಡಿರುವುದನ್ನು ಪ್ರಕಟಿಸುವವರಗೆ ತಾವೇನೂ ಕಾಮೆಂಟ್​ ಮಾಡುವುದಿಲ್ಲ ಎಂದು ಅವರು ಹೇಳಿದ್ದಾರೆ.

‘ವುಹಾನ್​ನಲ್ಲಿ ಪತ್ತೆಯಾಗುವ ಮೊದಲೇ ಅಂದರೆ ಅಕ್ಟೋಬರ್ ತಿಂಗಳಲ್ಲಿ ವೈರಸ್ ಇಟಲಿಯಲ್ಲಿ ಸರ್ಕ್ಯೂಲೇಟ್​ ಆಗಿತ್ತೆಂಬ ಸಂಗತಿಯನ್ನು ನಾವು ಖಚಿತಪಡಿಸಿದ್ದೇವೆ ಎಂದು ನಮ್ಮ ಅಧ್ಯಯನದಲ್ಲಿ ನಾವು ಯಾವತ್ತೂ ಹೇಳಿಲ್ಲ. ಎಂದು ಅಪೊಲೋನ್ ಅವರ ಸಂಗಡಿಗ ಮೊಂಟೊಮೊಲಿ ಹೇಳಿದ್ದಾರೆ.

ಇದನ್ನೂ ಓದಿ: WHO Covid-19 Report | ತಾನೇ ಸಿದ್ಧಪಡಿಸಿದ ಕೊವಿಡ್​ ಪ್ರಾಥಮಿಕ ವರದಿ ತಿರಸ್ಕರಿಸಿದ ವಿಶ್ವಸಂಸ್ಥೆ; ಅಮೇರಿಕಾ ಒತ್ತಡವೋ, ಚೀನಾದ್ದೋ?

Follow us on

Related Stories

Most Read Stories

Click on your DTH Provider to Add TV9 Kannada