ಮೆಹುಲ್ ಚೋಕ್ಸಿಗೆ ಸಿಕ್ಕಿಲ್ಲ ಜಾಮೀನು; ಅವರನ್ನು ಆಂಟಿಗುವಾಕ್ಕೆ ಕಳಿಸಿ ಎಂದು ವಕೀಲರಿಂದ ವಾದ ಮಂಡನೆ
ಈ ಮಧ್ಯೆ ಮೆಹುಲ್ ಚೋಕ್ಸಿ ಆಂಟಿಗುವಾಕ್ಕೆ ಕರೆದುಕೊಂಡು ಹೋದ ಯುವತಿಯ ಬಗ್ಗೆ ಇದೀಗ ಅವರ ಪತ್ನಿ ಪ್ರೀತಿ ಚೋಕ್ಸಿ ಬಾಯ್ಬಿಟ್ಟಿದ್ದಾರೆ. ಆ ಮಹಿಳೆ ನನ್ನ ಪತಿ ಮತ್ತು ಅವರ ಸಹಚರರಿಗೆ ಗೊತ್ತಿರುವವಳೇ ಆಗಿದ್ದಾಳೆ ಎಂದು ಹೇಳಿದ್ದಾರೆ.
ದೆಹಲಿ: ದೇಶಭ್ರಷ್ಟ ಉದ್ಯಮಿ ಮೆಹುಲ್ ಚೋಕ್ಸಿಗೆ ಜಾಮೀನು ನೀಡಲು ಡೊಮಿನಿಕಾ ನ್ಯಾಯಾಲಯ ನಿರಾಕರಿಸಿದೆ. ಆಂಟಿಗುವಾದಿಂದ ಡೊಮಿನಿಕಾಕ್ಕೆ ಅಕ್ರಮವಾಗಿ ನುಸುಳಿರುವ ಬಗ್ಗೆ ಡೊಮಿನಿಕಾ ಕೋರ್ಟ್ನಲ್ಲಿ ಬುಧವಾರ ವಿಚಾರಣೆ ನಡೆದಿತ್ತು. ಸದ್ಯ ಅವರಿಗೆ ಜಾಮೀನು ನಿರಾಕರಿಸಿದ್ದು, ಇಂದು (ಗುರುವಾರ) ಮತ್ತೊಮ್ಮೆ ವಿಚಾರಣೆ ನಡೆಯಲಿದೆ. ಗಡೀಪಾರಿಗೆ ಸಂಬಂಧಪಟ್ಟ ವಿಚಾರಣೆಯನ್ನೂ ಕೋರ್ಟ್ ಇಂದು ಕೈಗೆತ್ತಿಕೊಳ್ಳಲಿದೆ. ಚೋಕ್ಸಿ ನಿನ್ನೆ ಕಾರಿನಲ್ಲಿ ಬಂದು, ವೀಲ್ಚೇರ್ ನಲ್ಲೇ ಕೋರ್ಟ್ನೊಳಗೆ ಹೋಗಿದ್ದಾರೆ. ಇಂದೂ ಕೂಡ ತಮ್ಮ ತಪ್ಪನ್ನು ಚೋಕ್ಸಿ ಒಪ್ಪಿಕೊಳ್ಳದೆ ಹೋದರೆ ಪ್ರತ್ಯೇಕ ವಿಚಾರಣೆ ಶುರುವಾಗುವ ಸಾಧ್ಯತೆ ಇದೆ.
ಮೆಹುಲ್ ಚೋಕ್ಸಿ ಹನಿಟ್ರ್ಯಾಪ್ಗೆ ಒಳಗಾಗಿದ್ದಾರೆ. ಅವರನ್ನು ಆಂಟಿಗುವಾದಿಂದ ಅಪಹರಿಸಿ ಡೊಮಿನಿಕಾಗೆ ಕರೆದುಕೊಂಡು ಬರಲಾಗಿದೆ ಎಂದು ಅವರ ಪರ ವಕೀಲರು ಕೋರ್ಟ್ಗೆ ತಿಳಿಸಿದ್ದಾರೆ. ಈ ಹೇಬಿಯಸ್ ಕಾರ್ಪಸ್ ಅರ್ಜಿ ವಿಚಾರಣೆ ಮೊದಲು ಮ್ಯಾಜಿಸ್ಟ್ರೇಟ್ ಕೋರ್ಟ್ನಲ್ಲಿ ನಡೆಯಬೇಕು ಎಂದು ವರ್ಚ್ಯುವಲ್ ಆಗಿ ವಿಚಾರಣೆ ನಡೆಸಿದ್ದ ಡೊಮಿನಿಕಾ ಹೈಕೋರ್ಟ್ ನ್ಯಾಯಾಧೀಶ ಬರ್ನಿ ಸ್ಟೀಪನ್ಸನ್ ಸೂಚನೆ ನೀಡಿದ್ದರು. ಮೆಹುಲ್ ಚೋಕ್ಸಿ ಆಂಟಿಗುವಾಕ್ಕೆ ಕಳಿಸಬೇಕು ಎಂದು ಮೆಹುಲ್ ಚೋಕ್ಸಿ ಪರ ವಕೀಲರು ವಾದಮಂಡನೆ ಮಾಡಿದ್ದಾರೆ. ಡೊಮಿನಿಕಾದ ಪೊಲೀಸ್ ಕಸ್ಟಡಿಯಲ್ಲಿ ಮೆಹುಲ್ ಚೋಕ್ಸಿ ಸುರಕ್ಷಿತವಾಗಿರುವುದಿಲ್ಲ. ಈಗಾಗಲೇ ಅವರಿಗೆ ಥಳಿಸಲಾಗಿದೆ. ಹೀಗಾಗಿ ಆಸ್ಪತ್ರೆಗೆ ಅಡ್ಮಿಟ್ ಆಗಿದ್ದರು ಎಂದೂ ವಕೀಲರು ವಾದಮಂಡನೆ ಮಾಡಿದ್ದಾರೆ.
ಪತಿಯ ಗರ್ಲ್ಫ್ರೆಂಡ್ ಬಗ್ಗೆ ಬಾಯ್ಬಿಟ್ಟ ಪ್ರೀತಿ ಚೋಕ್ಸಿ ಈ ಮಧ್ಯೆ ಮೆಹುಲ್ ಚೋಕ್ಸಿ ಆಂಟಿಗುವಾಕ್ಕೆ ಕರೆದುಕೊಂಡು ಹೋದ ಯುವತಿಯ ಬಗ್ಗೆ ಇದೀಗ ಅವರ ಪತ್ನಿ ಪ್ರೀತಿ ಚೋಕ್ಸಿ ಬಾಯ್ಬಿಟ್ಟಿದ್ದಾರೆ. ಆ ಮಹಿಳೆ ನನ್ನ ಪತಿ ಮತ್ತು ಅವರ ಸಹಚರರಿಗೆ ಗೊತ್ತಿರುವವಳೇ ಆಗಿದ್ದಾಳೆ. ಆದರೆ ಇದೀಗ ಮಾಧ್ಯಮಗಳಲ್ಲಿ ಬಾರ್ಬರಾ ಎಂದು ತೋರಿಸುತ್ತಿರುವ ಯುವತಿ ಅವಳಲ್ಲ ಎಂದು ಪ್ರೀತಿ ಹೇಳಿದ್ದಾರೆ.
ಇದನ್ನೂ ಓದಿ: Gold Silver Rate Today: ಆಭರಣ ಪ್ರಿಯರಿಗೆ ಮತ್ತೆ ನಿರಾಸೆ? ಹಾಗಾದರೆ ಚಿನ್ನ, ಬೆಳ್ಳಿ ದರ ಏರಿಕೆಯೇ?