ಭಾರತೀಯ ಸಂಸ್ಕೃತಿಯ ರಾಯಭಾರಿಯಾದ ಜರ್ಮನ್ ಗಾಯಕಿ; ಅಂಧ ಯುವತಿಯ ಸ್ಫೂರ್ತಿಯ ಕತೆ ಹೇಳಿದ ಮೋದಿ
ಜರ್ಮನ್ ಗಾಯಕಿ ಕ್ಯಾಸ್‌ಮೇ ಒಟ್ಟು 12 ಭಾಷೆಗಳಲ್ಲಿ ಹಾಡುತ್ತಾರೆ. ಭಾರತೀಯ ಸಂಗೀತ ಮತ್ತು ಆಧ್ಯಾತ್ಮಿಕತೆಯಿಂದ ಸ್ಫೂರ್ತಿ ಪಡೆದಿರುವ ಆಕೆಯ ಬಗ್ಗೆ ಮನ್ ಕಿ ಬಾತ್ ಎಪಿಸೋಡಿನಲ್ಲಿ ಪ್ರಧಾನಿ ಮೋದಿ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಆಕೆ ಎಲ್ಲರಿಗೂ ಸ್ಫೂರ್ತಿ. ಸಂಗೀತಕ್ಕೆ ಮಿತಿಯಿಲ್ಲ ಎಂಬುದನ್ನು ಆಕೆ ಸಾಬೀತುಪಡಿಸಿದ್ದಾರೆ ಎಂದು ಮೋದಿ ಬಣ್ಣಿಸಿದ್ದಾರೆ. ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಜರ್ಮನಿಯ ಈ ಹುಡುಗಿಯ ಬಗ್ಗೆ ಪ್ರಸ್ತಾಪಿಸಿದ ನಂತರ, ಆಕೆಯ ಜೀವನ ಶಾಶ್ವತವಾಗಿ ಹೇಗೆ ಬದಲಾಯಿತು ಎಂಬುದರ ವಿಡಿಯೋ ಇಲ್ಲಿದೆ. ಪ್ರಧಾನಿ ಮೋದಿ ಅವರು ತಮ್ಮ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಕ್ಯಾಸ್‌ಮೇ ಬಗ್ಗೆ ಪ್ರಸ್ತಾಪಿಸಿದ್ದು, ಭಾರತೀಯ ಸಂಗೀತದ ಬಗ್ಗೆ ಅವರ ಉತ್ಸಾಹವನ್ನು ಜಾಗತಿಕ ವಿದ್ಯಮಾನವನ್ನಾಗಿ ಪರಿವರ್ತಿಸಿತು.
ನವದೆಹಲಿ, (ಮಾರ್ಚ್ 18): ಪ್ರಧಾನಿ ನರೇಂದ್ರ ಮೋದಿ ತಮ್ಮ ‘ಮನ್ ಕಿ ಬಾತ್’ ಭಾಷಣದಲ್ಲಿ ಜರ್ಮನ್ ದೇಶದ 21 ವರ್ಷದ ಅಂಧ ಯುವತಿಯೊಬ್ಬಳ ಬಗ್ಗೆ ಮಾತನಾಡಿದ್ದಾರೆ. ಜರ್ಮನ್ ರ್ಯಾಪರ್ ಮತ್ತು ಗಾಯಕಿ ಕ್ಯಾಸ್‌ಮೇ ಭಾರತಕ್ಕೆ ಬಂದು ಇಲ್ಲಿನ ಸಂಸ್ಕೃತಿಗೆ ಆಕರ್ಷಿತರಾಗಿ ಯಾವ ರೀತಿಯಲ್ಲಿ ದೇವರ ನಾಮಗಳನ್ನು, ಭಜನೆಗಳನ್ನು ಹಾಡುವ ಮೂಲಕ ತಮ್ಮ ಸುತ್ತಮುತ್ತಲಿನ ಪರಿಸರವನ್ನು ಆಧ್ಯಾತ್ಮಿಕಗೊಳಿಸುತ್ತಿದ್ದಾರೆ ಎಂಬುದನ್ನು ಪ್ರಧಾನಿ ಮೋದಿ ಬಣ್ಣಿಸಿದ್ದಾರೆ. ಜರ್ಮನ್ ಗಾಯಕಿ ಕ್ಯಾಸ್‌ಮೇ ಒಟ್ಟು 12 ಭಾಷೆಗಳಲ್ಲಿ ಹಾಡುತ್ತಾರೆ. ಭಾರತೀಯ ಸಂಗೀತ ಮತ್ತು ಆಧ್ಯಾತ್ಮಿಕತೆಯಿಂದ ಸ್ಫೂರ್ತಿ ಪಡೆದಿರುವ ಆಕೆಯ ಬಗ್ಗೆ ಮನ್ ಕಿ ಬಾತ್ ಎಪಿಸೋಡಿನಲ್ಲಿ ಪ್ರಧಾನಿ ಮೋದಿ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
ಭಾರತೀಯ ಸಂಸ್ಕೃತಿಯನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿರುವ ಅಂಧ ಯುವತಿ ಕ್ಯಾಸ್‌ಮೇ ಭಾರತದ ಜರ್ಮನ್ ಮಗಳು ಎಂದು ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಮನ್ ಕಿ ಬಾತ್ ಎಪಿಸೋಡ್ ಬಳಿಕ ಕ್ಯಾಸ್‌ಮೇ ಬಹಳ ಪ್ರಸಿದ್ಧರಾಗಿದ್ದಾರೆ. ಮೋದಿಯಿಂದ ಮೆಚ್ಚುಗೆ ಗಳಿಸಿದ ಈ ಯುವತಿಯನ್ನು ಅಂತಾರಾಷ್ಟ್ರೀಯ ಚಾನೆಲ್ ಕೂಡ ಸಂದರ್ಶನ ಮಾಡಿವೆ. ಇದಾದ ಬಳಿಕ ಜರ್ಮನಿಯಲ್ಲಿ ಕೂಡ ಹಲವಾರು ಮಾಧ್ಯಮಗಳಿಗೆ ಆಕೆ ಸಂದರ್ಶನ ನೀಡಿದ್ದಾರೆ. ಪ್ರಧಾನಿ ಮೋದಿ ಕಚೇರಿಯಿಂದ ವೈಯಕ್ತಿಕ ಸಭೆಗೆ ಆಹ್ವಾನವನ್ನು ಕೂಡ ಪಡೆದ ಕ್ಯಾಸ್‌ಮೇ ಮೋದಿ ಅತ್ಯಂತ ಸರಳ ಮತ್ತು ಹಾಸ್ಯಪ್ರಜ್ಞೆ ಇರುವ ವ್ಯಕ್ತಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಭಾರತ ಮತ್ತು ಭಾರತದ ಸಂಗೀತದ ಮೇಲಿನ ತಮ್ಮ ಪ್ರೀತಿಯನ್ನು ಮನ್ ಕಿ ಬಾತ್ ಎಪಿಸೋಡಿನಲ್ಲಿ ಪ್ರಧಾನಿ ಮೋದಿ ಗುರುತಿಸಿ ಮಾತನಾಡಿದ್ದಕ್ಕಾಗಿ ಕ್ಯಾಸ್‌ಮೇ ಮೋದಿಯವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಇದು ತನ್ನ ಜೀವನದ ನಿಜವಾದ ದೊಡ್ಡ ಸಾಧನೆ ಎಂದು ಆಕೆ ಧನ್ಯವಾದ ಅರ್ಪಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪುನೀತ್ ರಾಜ್ಕುಮಾರ್ ಬಗ್ಗೆ ಅರ್ಧಗಂಟೆ ಮಾತನಾಡಿದ ರಶ್ಮಿಕಾ ಮಂದಣ್ಣ

ಪತಿಯೊಂದಿಗೆ ಜಗಳವಾಡಿ ವಿದ್ಯುತ್ ಟವರ್ ಹತ್ತಿ ಆತ್ಮಹತ್ಯೆಗೆ ಯತ್ನಿಸಿದ ಪತ್ನಿ

ಕೋರ್ಟ್ ಆದೇಶ ಹಾಗೂ ವ್ಯಕ್ತಿ ಪ್ರಾಣಕ್ಕೂ ಬೆಲೆ ಕೊಡದ KSRTC, ಬಸ್ ಜಪ್ತಿ!

ಚಂದನ್ ಶೆಟ್ಟಿ ಜೊತೆ ಮದುವೆ ಗಾಸಿಪ್, ಸ್ಪಷ್ಟನೆ ಕೊಟ್ಟ ಸಂಜನಾ
