ತುಮಕೂರು: ಓರ್ವ ವಿದ್ಯಾರ್ಥಿನಿಗಾಗಿ ಒಂದು ಸರ್ಕಾರಿ ಶಾಲೆ, ಓರ್ವ ಶಿಕ್ಷಕಿ, ಅಡುಗೆ ಸಿಬ್ಬಂದಿ
ಶಿರಾ ತಾಲೂಕಿನ ಮದ್ದೆವಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಒಬ್ಬಳೇ ವಿದ್ಯಾರ್ಥಿನಿ ಮಾನಸ ಓದುತ್ತಿದ್ದಾಳೆ. ಅವಳಿಗಾಗಿ ಒಬ್ಬ ಶಿಕ್ಷಕಿ ಮತ್ತು ಅಡುಗೆಯವರನ್ನು ನೇಮಿಸಲಾಗಿದೆ. ಶಾಲೆ ಮುಚ್ಚುವುದನ್ನು ತಡೆಯಲು ಮಾನಸನ ತಾಯಿ ತನ್ನ ಮಗಳನ್ನು ಸರ್ಕಾರಿ ಶಾಲೆಗೆ ಸೇರಿಸಿದ್ದಾರೆ. ಇದು ಸರ್ಕಾರಿ ಶಾಲೆಗಳನ್ನು ಉಳಿಸುವ ಒಂದು ಅದ್ಭುತ ಪ್ರಯತ್ನ.
ತುಮಕೂರು, ಮಾರ್ಚ್ 18: ಶಿರಾ (Sira) ತಾಲೂಕಿನ ಮದ್ದೆವಳ್ಳಿ ಗ್ರಾಮದಲ್ಲಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಒಬ್ಬೇ ಒಬ್ಬಳು ವಿದ್ಯಾರ್ಥಿನಿ ವ್ಯಾಸಾಂಗ ಮಾಡುತ್ತಿದ್ದಾರೆ. ಒಂದನೇ ತರಗತಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿ ಮಾನಸರಿಗೆ ಪಾಠ ಮಾಡಲು ಓರ್ವ ಶಿಕ್ಷಕಿಯನ್ನು ನೇಮಿಸಲಾಗಿದೆ. ಹಾಗೇ, ಮಧ್ಯಾಹ್ನದ ಬಿಸಿ ಊಟಕ್ಕಾಗಿ ಅಡುಗೆ ಸಿಬ್ಬಂದಿಯನ್ನೂ ಕೂಡ ಸರ್ಕಾರ ನೇಮಿಸಿದೆ. ವಿದ್ಯಾರ್ಥಿಗಳು ಇಲ್ಲದೇ ಶಾಲೆ ಮುಚ್ಚುವ ಹಂತಕ್ಕೆ ಹೋಗಿತ್ತು. ಕೊನೆಗೆ ಓರ್ವ ವಿದ್ಯಾರ್ಥಿನಿ ದಾಖಲಾದ ಹಿನ್ನೆಲೆಯಲ್ಲಿ ಶಾಲೆಯನ್ನು ತೆರೆಯಲಾಗಿದೆ. ವಿದ್ಯಾರ್ಥಿನಿ ಮಾಸನ ಅಡುಗೆ ಸಿಬ್ಬಂದಿ ಮಗಳಾಗಿದ್ದಾರೆ. ತಮ್ಮ ಮಗಳನ್ನು ಶಾಲೆಗೆ ದಾಖಲಿಸಿ, ಸರ್ಕಾರಿ ಶಾಲೆಯನ್ನು ಉಳಿಸುವ ಪ್ರಯತ್ನವನ್ನು ಮಾನಸ ತಾಯಿ ಮಾಡುತ್ತಿದ್ದಾರೆ .
Latest Videos

ಪತಿಯೊಂದಿಗೆ ಜಗಳವಾಡಿ ವಿದ್ಯುತ್ ಟವರ್ ಹತ್ತಿ ಆತ್ಮಹತ್ಯೆಗೆ ಯತ್ನಿಸಿದ ಪತ್ನಿ

ಶಿವಪುರಿಯ ಮಾತಟಿಲಾ ಡ್ಯಾಂನಲ್ಲಿ ಮುಳುಗಿದ ದೋಣಿ; 7 ಜನ ಸಾವನ್ನಪ್ಪಿರುವ ಶಂಕೆ

ಕೋರ್ಟ್ ಆದೇಶ ಹಾಗೂ ವ್ಯಕ್ತಿ ಪ್ರಾಣಕ್ಕೂ ಬೆಲೆ ಕೊಡದ KSRTC, ಬಸ್ ಜಪ್ತಿ!

ಚಂದನ್ ಶೆಟ್ಟಿ ಜೊತೆ ಮದುವೆ ಗಾಸಿಪ್, ಸ್ಪಷ್ಟನೆ ಕೊಟ್ಟ ಸಂಜನಾ
