Karnataka Budget Session: ಶಾಸಕರ ಗೌರವ ಮುಖ್ಯವೆಂದ ಸಭಾಧ್ಯಕ್ಷ ಯುಟಿ ಖಾದರ್ ರೂಲಿಂಗನ್ನು ಮೇಜುಕುಟ್ಟಿ ಸ್ವಾಗತಿಸಿದ ವಿಪಕ್ಷ ನಾಯಕರು
ಕಾನೂನು ಸಚಿವ ಹೆಚ್ ಕೆ ಪಾಟೀಲ್ ನ್ಯಾಚುರಲ್ ಜಸ್ಟೀಸ್ ಬಗ್ಗೆ ಮಾತಾಡಿದಾಗ ಸ್ಪೀಕರ್ ಖಾದರ್ ಅದನ್ನು ಓವರ್ರೂಲ್ ಮಾಡುತ್ತಾ ಶಾಸಕರ ಗೌರವ ಮುಖ್ಯ ಎಂದು ಹೇಳಿದರು. ವಿರೋಧ ಪಕ್ಷಗಳ ಪರವಾಗಿ ಮಾತಾಡಿದ ಆರ್ ಅಶೋಕ ಅವರು ಸ್ಪೀಕರ್ ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸಿ, ಪಾಟೀಲ್ ಕಡೆ ತಿರುಗಿ ನೀವು ಸದನದ ಹಿರಿಯರು, ನಮಗೆಲ್ಲ ಗೌರವ ಮುಖ್ಯ, ಅಧಿಕಾರಿಗಳಿಗೆ ತಮ್ಮ ವಾದ ಮಂಡಿಸಲು ಅವಕಾಶ ಸಿಕ್ಕೇಸಿಗುತ್ತದೆ ಎಂದರು.
ಬೆಂಗಳೂರು, ಮಾರ್ಚ್ 18: ವಿಧಾನ ಮಂಡಲದ ಇವತ್ತಿನ ಕಾರ್ಯಕಲಾಪಗಳಲ್ಲಿ ಸಭಾಧ್ಯಕ್ಷ ಯುಟಿ ಖಾದರ್ (Speaker UT Khader) ನೀಡಿದ ರೂಲಿಂಗ್ ಅನ್ನು ವಿರೋಧ ಪಕ್ಷದ ಸದಸ್ಯರು ಮೇಜುತಟ್ಟಿ ಸ್ವಾಗತಿಸಿದರು. ವಿಷಯ ಜನಪ್ರತಿನಿಧಿಗಳೊಂದಿಗೆ (Representatives of People) ಅಧಿಕಾರಿಗಳ ವರ್ತನೆಗೆ ಸಂಬಂಧಿಸಿದ್ದಾಗಿತ್ತು. ಅಧಿಕಾರಿಗಳು ಐಎಎಸ್, ಕೆಎಎಸ್-ಯಾವುದೇ ಸ್ತರದವರಾಗಿರಲಿ, ಶಾಸಕರು ಕರೆದಾಗ ಹೋಗಬೇಕು ಮತ್ತು ಅವರು ಕೇಳುವ ಪ್ರಶ್ನೆಗಳಿಗೆ ಸಮಂಜಸ ಉತ್ತರವನ್ನು ಸೌಜನ್ಯಯುತವಾಗಿ ನೀಡಬೇಕು, ಅಗೌರವದಿಂದ ನಡೆದುಕೊಳ್ಳಬಾರದು, ಯಾಕೆಂದರೆ ನಾವೆಲ್ಲ ಬದುಕೋದೇ ಗೌರವಕ್ಕಾಗಿ, ಅದೇ ಸಿಗದಿದ್ದರೆ ಹೇಗೆ? ಸರ್ಕಾರ ಯಾವತ್ತಿಗೂ ಶಾಸಕರ ಪರ ನಿಂತುಕೊಳ್ಳಬೇಕು ಎಂದು ಸ್ಪೀಕರ್ ಹೇಳಿದರು.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos

ಪುನೀತ್ ರಾಜ್ಕುಮಾರ್ ಬಗ್ಗೆ ಅರ್ಧಗಂಟೆ ಮಾತನಾಡಿದ ರಶ್ಮಿಕಾ ಮಂದಣ್ಣ

ಪತಿಯೊಂದಿಗೆ ಜಗಳವಾಡಿ ವಿದ್ಯುತ್ ಟವರ್ ಹತ್ತಿ ಆತ್ಮಹತ್ಯೆಗೆ ಯತ್ನಿಸಿದ ಪತ್ನಿ

ಶಿವಪುರಿಯ ಮಾತಟಿಲಾ ಡ್ಯಾಂನಲ್ಲಿ ಮುಳುಗಿದ ದೋಣಿ; 7 ಜನ ಸಾವನ್ನಪ್ಪಿರುವ ಶಂಕೆ

ಕೋರ್ಟ್ ಆದೇಶ ಹಾಗೂ ವ್ಯಕ್ತಿ ಪ್ರಾಣಕ್ಕೂ ಬೆಲೆ ಕೊಡದ KSRTC, ಬಸ್ ಜಪ್ತಿ!
