ಪರಮಾಣು ಶಸ್ತ್ರಾಸ್ತ್ರ ಬಳಸದಂತೆ ಪುಟಿನ್ ಮನವೊಲಿಸಿದ ಪ್ರಧಾನಿ ಮೋದಿ; ಪೋಲೆಂಡ್ ಸಚಿವ
ರಷ್ಯಾ-ಉಕ್ರೇನ್ ಸಂಘರ್ಷದಲ್ಲಿ ಯುದ್ಧತಂತ್ರದ ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸದಂತೆ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಮನವೊಲಿಸುವಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ರಾಜತಾಂತ್ರಿಕ ಹಸ್ತಕ್ಷೇಪವನ್ನು ಪೋಲೆಂಡ್‌ನ ಉಪ ವಿದೇಶಾಂಗ ಸಚಿವ ಮತ್ತು ವಿದೇಶಾಂಗ ಕಾರ್ಯದರ್ಶಿ ವ್ಲಾಡಿಸ್ಲಾವ್ ಟಿಯೋಫಿಲ್ ಬಾರ್ಟೋಸ್ಜೆವ್ಸ್ಕಿ ಒಪ್ಪಿಕೊಂಡಿದ್ದಾರೆ. ಪೋಲೆಂಡ್‌ನ ಉಪ ವಿದೇಶಾಂಗ ಸಚಿವ ಮತ್ತು ವಿದೇಶಾಂಗ ಕಾರ್ಯದರ್ಶಿ ವ್ಲಾಡಿಸ್ಲಾವ್ ಟಿಯೋಫಿಲ್ ಬಾರ್ಟೋಸ್ಜೆವ್ಸ್ಕಿ ಅವರು ಪ್ರಧಾನಿ ನರೇಂದ್ರ ಮೋದಿ ಅವರು ಉಕ್ರೇನ್ ವಿರುದ್ಧ ಪರಮಾಣು ಯುದ್ಧತಂತ್ರದ ಶಸ್ತ್ರಾಸ್ತ್ರಗಳನ್ನು ಬಳಸದಂತೆ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಮನವೊಲಿಸಿದ್ದಾರೆ ಎಂದು ಬಹಿರಂಗಪಡಿಸಿದ್ದಾರೆ. ಯುರೋಪ್ ಈ ಪ್ರದೇಶದಲ್ಲಿ ಶಾಶ್ವತ ಮತ್ತು ಸುಸ್ಥಿರ ಶಾಂತಿಯನ್ನು ಬಯಸುತ್ತದೆ ಎಂದು ಅವರು ಹೇಳಿದ್ದಾರೆ.

ನವದೆಹಲಿ, (ಮಾರ್ಚ್ 18): ಉಕ್ರೇನ್ ವಿರುದ್ಧ ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸದಂತೆ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಮನವೊಲಿಸುವಲ್ಲಿ ಪ್ರಧಾನಿ ನರೇಂದ್ರ ಮೋದಿ ಮುಖ್ಯ ಪಾತ್ರ ವಹಿಸಿದ್ದಾರೆ ಎಂದು ಪೋಲೆಂಡ್‌ನ ಉಪ ವಿದೇಶಾಂಗ ಸಚಿವ ಮತ್ತು ವಿದೇಶಾಂಗ ಕಾರ್ಯದರ್ಶಿ ವ್ಲಾಡಿಸ್ಲಾವ್ ಟಿಯೋಫಿಲ್ ಬಾರ್ಟೋಸ್ಜೆವ್ಸ್ಕಿ ಸೋಮವಾರ ಹೇಳಿದ್ದಾರೆ. “ಪ್ರಧಾನಿ ಮೋದಿ ಅವರು ಪರಮಾಣು ಯುದ್ಧತಂತ್ರದ ಶಸ್ತ್ರಾಸ್ತ್ರಗಳನ್ನು ಬಳಸದಂತೆ ರಷ್ಯಾ ಅಧ್ಯಕ್ಷ ಪುಟಿನ್ ಅವರ ಮನವೊಲಿಸಿದರು. ನಮಗೆ ಶಾಶ್ವತ ಶಾಂತಿ ಬೇಕು. ನಮಗೆ ಉಕ್ರೇನ್‌ನಲ್ಲಿ ಸ್ಥಿರ ಮತ್ತು ಸುಸ್ಥಿರ ಶಾಂತಿ ಬೇಕು” ಎಂದಿದ್ದಾರೆ.
ಈ ಬಗ್ಗೆ ಎಎನ್ ಐ ಜೊತೆ ಮಾತನಾಡಿದ ವ್ಲಾಡಿಸ್ಲಾವ್ ಟಿಯೋಫಿಲ್ ಬಾರ್ಟೋಸ್ಜೆವ್ಸ್ಕಿ, ಪುಟಿನ್ ಉಕ್ರೇನಿಯನ್ ಭೂಪ್ರದೇಶದಲ್ಲಿ ಯುದ್ಧತಂತ್ರದ ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸುವಂತೆ ಬೆದರಿಕೆ ಹಾಕಿದ್ದರು. ಆದರೆ, ಭಾರತ ಮತ್ತು ಚೀನಾದ ಕರೆಗಳು ಅವರ ಮರುಪರಿಶೀಲನೆಯ ನಿರ್ಧಾರದ ಮೇಲೆ ಪ್ರಭಾವ ಬೀರಿವೆ ಎಂದು ಅವರು ಹೇಳಿದ್ದಾರೆ.
#WATCH | Delhi: Władysław Teofil Bartoszewski, Poland’s Deputy Foreign Minister and Secretary of State, says, “President Putin was threatening to use tactical nuclear weapons on the territory of Ukraine. The Americans sent lots of messages for him to not think about it… That… pic.twitter.com/aQORJPWif2
— ANI (@ANI) March 17, 2025
ಇದನ್ನೂ ಓದಿ: ನಾಸಾ ಗಗನಯಾತ್ರಿ ಸುನಿತಾ ವಿಲಿಯಮ್ಸ್ಗೆ ಪ್ರಧಾನಿ ಮೋದಿ ಭಾವುಕ ಪತ್ರ
“ರಷ್ಯಾ ಅಧ್ಯಕ್ಷ ಪುಟಿನ್ ಉಕ್ರೇನ್ ಭೂಪ್ರದೇಶದಲ್ಲಿ ಯುದ್ಧತಂತ್ರದ ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸುವುದಾಗಿ ಬೆದರಿಕೆ ಹಾಕುತ್ತಿದ್ದರು. ಅಮೆರಿಕನ್ನರು ಅದರ ಬಗ್ಗೆ ಯೋಚಿಸಬೇಡಿ ಎಂದು ಅವರಿಗೆ ಸಾಕಷ್ಟು ಸಂದೇಶಗಳನ್ನು ಕಳುಹಿಸಿದರು. ಆದರೂ ಅವರ ಮನವೊಲಿಸಲು ಸಾಧ್ಯವಾಗಲಿಲ್ಲ. ಆಗ ಅವರಿಗೆ ಎರಡು ಫೋನ್ ಕರೆಗಳು ಬಂದವು; ಒಂದು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರದ್ದು ಮತ್ತು ಇನ್ನೊಂದು ಪ್ರಧಾನಿ ಮೋದಿ ಅವರದ್ದು. ಚೀನಾ ಅಥವಾ ಭಾರತ ಯುದ್ಧವನ್ನು ಅನುಮೋದಿಸುವುದಿಲ್ಲ ಎಂದು ಹೇಳಿದವು. ರಷ್ಯಾ ಸ್ನೇಹಪರವೆಂದು ಪರಿಗಣಿಸುವ ಎರಡು ಪ್ರಮುಖ ರಾಷ್ಟ್ರಗಳು ಯುದ್ಧಕ್ಕೆ ಬೆಂಬಲ ನೀಡಬೇಡಿ ಎಂದು ಹೇಳಿದಾಗ ಅದು ಒಳ್ಳೆಯದಲ್ಲ ಎಂದು ಅವರು ನಿರ್ಧರಿಸಿದರು. ಆದ್ದರಿಂದ ಪ್ರಧಾನಿ ನರೇಂದ್ರ ಮೋದಿ ಈ ಮನವೊಲಿಕೆಯಲ್ಲಿ ಬಹಳ ಮುಖ್ಯ ಪಾತ್ರ ವಹಿಸಿದ್ದಾರೆ” ಎಂದು ಬಾರ್ಟೋಸ್ಜೆವ್ಸ್ಕಿ ಹೇಳಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:35 pm, Tue, 18 March 25