AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿರ್ಲಕ್ಷ್ಯವು ತಾರತಮ್ಯ ನೀತಿಗೆ ಪರಿಹಾರವಲ್ಲ: ಎಲ್​ಜಿಬಿಟಿ ಸಮುದಾಯದ ಹಕ್ಕುಗಳ ಬಗ್ಗೆ ಮದ್ರಾಸ್​ ಹೈಕೋರ್ಟ್ ಮಹತ್ವದ​ ಅಭಿಪ್ರಾಯ

ಪೊಲೀಸರು ಹಾಗೂ ಸರ್ಕಾರಿ ಅಧಿಕಾರಿಗಳಿಗೆ ಎಲ್​ಜಿಬಿಟಿ ಸಮುದಾಯವನ್ನು ಗೌರವಿಸುವ ಬಗ್ಗೆ ಸೂಕ್ತ ತರಬೇತಿ ನೀಡಬೇಕು. ಸಲಿಂಗಿ ಸಮಸ್ಯೆಯನ್ನು ಪರಿಹರಿಸುತ್ತೇವೆ ಎಂದು ಹೇಳಿಕೊಳ್ಳುವ ವೈದ್ಯರ ಪರವಾನಗಿಯನ್ನು ರದ್ದುಪಡಿಸಬೇಕು. ಶಾಲೆ, ಕಾಲೇಜುಗಳಲ್ಲಿ ಅವರಿಗೆ ಪ್ರತ್ಯೇಕ ವಿಶ್ರಾಂತಿ ಕೊಠಡಿ ಲಭ್ಯವಿರುವಂತೆ ನೋಡಿಕೊಳ್ಳಬೇಕು,

ನಿರ್ಲಕ್ಷ್ಯವು ತಾರತಮ್ಯ ನೀತಿಗೆ ಪರಿಹಾರವಲ್ಲ: ಎಲ್​ಜಿಬಿಟಿ ಸಮುದಾಯದ ಹಕ್ಕುಗಳ ಬಗ್ಗೆ ಮದ್ರಾಸ್​ ಹೈಕೋರ್ಟ್ ಮಹತ್ವದ​ ಅಭಿಪ್ರಾಯ
ಸಾಂಕೇತಿಕ ಚಿತ್ರ
Follow us
TV9 Web
| Updated By: Skanda

Updated on:Jun 08, 2021 | 9:37 AM

ಚೆನ್ನೈ: ಎಲ್​ಜಿಬಿಟಿ ಸುಮುದಾಯದ ಹಕ್ಕುಗಳನ್ನು ಗೌರವಿಸುವುದಕ್ಕೆ ಸಾಕಷ್ಟು ಸುಧಾರಣೆಗಳು ಅವಶ್ಯಕವಾಗಿವೆ. ಈ ಬಗ್ಗೆ ಗಮನಹರಿಸುವ ಮೂಲಕ ಬದಲಾವಣೆಗಳಿಗೆ ನಾಂದಿ ಹಾಡಬೇಕು ಮತ್ತು ಸಮುದಾಯದ ಹಕ್ಕುಗಳಿಗೆ ಚ್ಯುತಿ ಬಾರದಂತೆ ವ್ಯವಸ್ಥೆಯನ್ನು ರೂಪಿಸಬೇಕು ಎಂದು ಮದ್ರಾಸ್ ಉಚ್ಛ ನ್ಯಾಯಾಲಯ ತಮಿಳುನಾಡು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ. ಪೊಲೀಸರು ನಮ್ಮ ಮೇಲೆ ದೌರ್ಜನ್ಯ ಎಸಗಿದ್ದಾರೆ ಎಂಬ ಲೆಸ್ಬಿಯನ್​ (ಸ್ತ್ರೀ ಸಲಿಂಗಿ) ಜೋಡಿ ಆರೋಪದ ಕುರಿತಾಗಿ ಸೋಮವಾರ (ಮೇ 7) ನಡೆದ ವಿಚಾರಣೆಯಲ್ಲಿ ನ್ಯಾಯಾಲಯ ತನ್ನ ಅಭಿಪ್ರಾಯ ತಿಳಿಸಿದೆ.

ನ್ಯಾಯಮೂರ್ತಿ ಆನಂದ್ ವೆಂಕಟೇಶ್ ಅವರು ಸಲಿಂಗಿ ಜೋಡಿಗಳ ಪರವಾಗಿ ತೀರ್ಪು ನೀಡಿದ್ದು, ಎಲ್​ಜಿಬಿಟಿ ಸುಮುದಾಯದ ಹಕ್ಕುಗಳನ್ನು ಗೌರವಿಸುವುದಕ್ಕೆ ಬಹಳಷ್ಟು ಸುಧಾರಣಾ ಕ್ರಮಗಳು ಜಾರಿಯಾಗಬೇಕಿದೆ ಎಂದಿದ್ದಾರೆ. ಸಲಿಂಗಿ ಜೋಡಿ ಕಾಣೆಯಾದ ಕುರಿತು ಅವರ ಪೋಷಕರು ಸಲ್ಲಿಸಿದ್ದ ದೂರನ್ನು ಆಧರಿಸಿ ತನಿಖೆ ನಡೆಸುವ ವೇಳೆ ಪೊಲೀಸರು ದೌರ್ಜನ್ಯ ಎಸಗಿದ್ದಾರೆ ಎಂದು ಇಬ್ಬರೂ ಯುವತಿಯರು ದೂಷಿಸಿದ್ದರು.

ನ್ಯಾಯಮೂರ್ತಿಗಳು ನೀಡಿರುವ ಸಲಹೆಯಲ್ಲಿ, ಪೊಲೀಸರು ಹಾಗೂ ಸರ್ಕಾರಿ ಅಧಿಕಾರಿಗಳಿಗೆ ಎಲ್​ಜಿಬಿಟಿ ಸಮುದಾಯವನ್ನು ಗೌರವಿಸುವ ಬಗ್ಗೆ ಸೂಕ್ತ ತರಬೇತಿ ನೀಡಬೇಕು. ಸಲಿಂಗಿ ಸಮಸ್ಯೆಯನ್ನು ಪರಿಹರಿಸುತ್ತೇವೆ ಎಂದು ಹೇಳಿಕೊಳ್ಳುವ ವೈದ್ಯರ ಪರವಾನಗಿಯನ್ನು ರದ್ದುಪಡಿಸಬೇಕು. ಶಾಲೆ, ಕಾಲೇಜುಗಳಲ್ಲಿ ಅವರಿಗೆ ಪ್ರತ್ಯೇಕ ವಿಶ್ರಾಂತಿ ಕೊಠಡಿ ಲಭ್ಯವಿರುವಂತೆ ನೋಡಿಕೊಳ್ಳಬೇಕು. ಜೈಲುಗಳಲ್ಲಿಯೂ ಲೈಂಗಿಕ ದೌರ್ಜನ್ಯದಿಂದ ಅವರನ್ನು ಕಾಪಾಡಲು ಬೇರೆ ಕೊಠಡಿಗಳನ್ನು ಸ್ಥಾಪಿಸಬೇಕು ಎಂದು ತಿಳಿಸಲಾಗಿದೆ.

ನಿರ್ಲಕ್ಷ್ಯ ಧೋರಣೆಯು ಯಾವುದೇ ತೆರನಾದ ತಾರತಮ್ಯವನ್ನು ಹೋಗಲಾಡಿಸುವುದಿಲ್ಲ. ಅದರಿಂದ ಬದಲಾವಣೆಗಳಾಗಲೀ, ಸುಧಾರಣೆಗಳಾಗಲೀ ಸಾಧ್ಯವಿಲ್ಲ. ಹೀಗಾಗಿ ಮುತುವರ್ಜಿ ವಹಿಸುವುದು ಅವಶ್ಯಕವಾಗಿದೆ. ಎಲ್​ಜಿಬಿಟಿ ಸಮುದಾಯಕ್ಕೆ ಸೇರಿದ ಮಕ್ಕಳ ಪೋಷಕರಿಗೂ ಈ ಬಗ್ಗೆ ಸೂಕ್ಷ್ಮತೆ ಮೂಡಿಸುವ ಕೆಲಸವಾಗಬೇಕು. ಅವರಲ್ಲಿ ಅರಿವು ಮೂಡುವಂತೆ ನೋಡಿಕೊಳ್ಳಬೇಕು ಎಂದು ತೀರ್ಪಿನಲ್ಲಿ ಹೇಳಲಾಗಿದೆ.

ಈ ತೀರ್ಪನ್ನು ಎಲ್​ಜಿಬಿಟಿ ಸಮುದಾಯದವರು ಹಾಗೂ ಅನೇಕ ಸಾಮಾಜಿಕ ಹೋರಾಟಗಾರರು ಸ್ವಾಗತಿಸಿದ್ದು, ಸಮಾನತೆಯೆಡೆಗಿನ ಮುಖ್ಯ ಹೆಜ್ಜೆ ಎಂದು ಇದನ್ನು ಬಣ್ಣಿಸಿದ್ದಾರೆ. ನ್ಯಾಯಾಲಯದ ತೀರ್ಪು ಮಾತ್ರದಿಂದಲೇ ಎಲ್ಲಾ ಬದಲಾವಣೆಗಳು ಘಟಿಸದೇ ಇರಬಹುದು. ಆದರೆ, ನ್ಯಾಯಾಲಯ ನೀಡಿದ ತೀರ್ಪನ್ನು ನಿರ್ಲಕ್ಷಿಸದೇ ಸರ್ಕಾರ ಹಾಗೂ ವ್ಯವಸ್ಥೆ ಸುಧಾರಣೆಗಳನ್ನು ರೂಪಿಸಿದರೆ ಕಾಲಕ್ರಮೇಣ ಒಂದಷ್ಟು ಬದಲಾವಣೆಗಳಿಗೆ ಸಾಕ್ಷಿಯಾಗಬಹುದು ಎಂದು ಎಲ್.ರಾಮಕೃಷ್ಣನ್ ಎಂಬುವವರು ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೇ, ಈ ವಿಚಾರವಾಗಿ ನಂತರ ಮಾತನಾಡಿರುವ ನ್ಯಾಯಮೂರ್ತಿಗಳು ತೀರ್ಪಿಗೂ ಮುನ್ನ ಸಲಿಂಗಿ ಸಂಬಂಧಗಳ ಕುರಿತು ಮಾನಸಿಕ ತಜ್ಞರೊಂದಿಗೆ ಚರ್ಚಿಸಿ ಒಂದಷ್ಟು ಮಾಹಿತಿ ಪಡೆದುಕೊಂಡಿದ್ದಾಗಿ ತಿಳಿಸಿದ್ದಾರೆ.

(Ignorance can not justify discrimination says Madras High Court on LGBT community rights)

ಇದನ್ನೂ ಓದಿ: ಈ ವ್ಯಕ್ತಿಗೆ 73 ನೇ ವಯಸ್ಸಿನಲ್ಲಿ ತಾನು ಎಲ್​ಜಿಬಿಟಿ ಸಮುದಾಯಕ್ಕೆ ಸೇರಿದವನೆಂದು ಮನವರಿಕೆಯಾಗಿದೆ! 

Frank Kameny: ಅಮೆರಿಕ ಸಲಿಂಗಕಾಮ ಹಕ್ಕುಗಳ ಕಾರ್ಯಕರ್ತ ಫ್ರಾಂಕ್ ಕಾಮೆನಿ ಅವರಿಗೆ ವಿಶೇಷ ಗೂಗಲ್​ ಡೂಡಲ್​ ಗೌರವ

Published On - 9:17 am, Tue, 8 June 21