AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಬ್ಬ ಮುಗ್ದನನ್ನು ಕೊಲ್ಲುವುದು ಇಡೀ ಮಾನವ ಜನಾಂಗವನ್ನೇ ಕೊಂದಂತೆ ಎಂದು ಕುರಾನ್ ಹೇಳುತ್ತೆ: ಓವೈಸಿ

ಒಬ್ಬ ಮುಗ್ದನನ್ನು ಕೊಲ್ಲುವುದು ಇಡೀ ಮಾನವ ಜನಾಂಗವನ್ನೇ ಕೊಲ್ಲುವುದಕ್ಕೆ ಸಮಾನ ಎಂದು ಕುರಾನ್ ಹೇಳುತ್ತದೆ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಹೇಳಿದ್ದಾರೆ. ಆಪರೇಷನ್ ಸಿಂಧೂರ್ ಬಳಿಕ, ಭಾರತೀಯ ಸಂಸದರ ನಿಯೋಗವು ಪ್ರಪಂಚದೆದುರು ಪಾಕಿಸ್ತಾನದ ಮುಖವಾಡ ಕಳಚುವ ಪ್ರಯತ್ನ ಮಾಡುತ್ತಿದೆ. ಬಿಜೆಪಿ ಸಂಸದ ಬೈಜಯಂತ್ ಪಾಂಡಾ ನೇತೃತ್ವದ ಭಾರತೀಯ ನಿಯೋಗ ಬಹ್ರೇನ್ ತಲುಪಿದೆ. ಈ ವೇಳೆ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಪಾಕಿಸ್ತಾನವನ್ನು ಟೀಕಿಸಿದ್ದಾರೆ.

ಒಬ್ಬ ಮುಗ್ದನನ್ನು ಕೊಲ್ಲುವುದು ಇಡೀ ಮಾನವ ಜನಾಂಗವನ್ನೇ ಕೊಂದಂತೆ ಎಂದು ಕುರಾನ್ ಹೇಳುತ್ತೆ: ಓವೈಸಿ
ಅಸಾದುದ್ದೀನ್ ಓವೈಸಿ
ನಯನಾ ರಾಜೀವ್
|

Updated on:May 25, 2025 | 10:34 AM

Share

ಬಹ್ರೈನ್, ಮೇ 25: ಒಬ್ಬ ಮುಗ್ದನನ್ನು ಕೊಲ್ಲುವುದು ಇಡೀ ಮಾನವ ಜನಾಂಗವನ್ನೇ ಕೊಲ್ಲುವುದಕ್ಕೆ ಸಮಾನ ಎಂದು ಕುರಾನ್ ಹೇಳುತ್ತದೆ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಹೇಳಿದ್ದಾರೆ. ಆಪರೇಷನ್ ಸಿಂಧೂರ್ ಬಳಿಕ, ಭಾರತೀಯ ಸಂಸದರ ನಿಯೋಗವು ಪ್ರಪಂಚದೆದುರು ಪಾಕಿಸ್ತಾನ(Pakistan)ದ ಮುಖವಾಡ ಕಳಚುವ ಪ್ರಯತ್ನ ಮಾಡುತ್ತಿದೆ. ಬಿಜೆಪಿ ಸಂಸದ ಬೈಜಯಂತ್ ಪಾಂಡಾ ನೇತೃತ್ವದ ಭಾರತೀಯ ನಿಯೋಗ ಬಹ್ರೇನ್ ತಲುಪಿದೆ. ಈ ವೇಳೆ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಪಾಕಿಸ್ತಾನವನ್ನು ಟೀಕಿಸಿದ್ದಾರೆ.

ಈ ಭಯೋತ್ಪಾದಕ ಸಂಘಟನೆಗಳು ಭಾರತದಲ್ಲಿ ಮುಗ್ಧ ಜನರ ಹತ್ಯೆಯನ್ನು ಸಮರ್ಥಿಸಿವೆ, ಜನರನ್ನು ಕೊಲ್ಲುವುದನ್ನು ಸಮರ್ಥಿಸಲು ಅವರು ಧರ್ಮವನ್ನು ಬಳಸಿಕೊಂಡಿದ್ದಾರೆ. ಇಸ್ಲಾಂ ಭಯೋತ್ಪಾದನೆಯನ್ನು ಖಂಡಿಸುತ್ತದೆ ಎಂದರು.

ಇದನ್ನೂ ಓದಿ
Image
Video: ಪಹಲ್ಗಾಮ್​ನಲ್ಲಿ ನಡೆದ ಉಗ್ರರ ದಾಳಿಯ ವಿಡಿಯೋ ಇಲ್ಲಿದೆ
Image
ಪಹಲ್ಗಾಮ್ ಉಗ್ರ ದಾಳಿ, ಎಕೆ-47 ಹಿಡಿದ ಶಂಕಿತ ಉಗ್ರನ ಫೋಟೋ ಬಹಿರಂಗ
Image
ಪ್ಯಾಂಟ್​ ಬಿಚ್ಚಿ, ಐಡಿ ಪರಿಶೀಲಿಸಿ ಹಿಂದೂಗಳನ್ನು ಗುರಿಯಾಗಿಸಿ ಉಗ್ರರ ದಾಳಿ
Image
ಪಹಲ್ಗಾಮ್ ಉಗ್ರ ದಾಳಿಯ ಮಾಸ್ಟರ್​ಮೈಂಡ್ ಸೈಫುಲ್ಲಾ ಖಾಲಿದ್ ಯಾರು?

ನಮ್ಮ ರಾಜಕೀಯ ಸಂಬಂಧ ಏನೇ ಇರಲಿ, ನಮ್ಮ ದೇಶದಲ್ಲಿ ಒಮ್ಮತವಿದೆ ಎಂದು ಅಸಾದುದ್ದೀನ್ ಓವೈಸಿ ಹೇಳಿದರು. ನಮಗೆ ರಾಜಕೀಯ ಭಿನ್ನಾಭಿಪ್ರಾಯಗಳಿವೆ, ಆದರೆ ನಮ್ಮ ದೇಶದ ಸಮಗ್ರತೆಯ ವಿಷಯಕ್ಕೆ ಬಂದಾಗ, ನಮ್ಮ ನೆರೆಯ ದೇಶವು ಇದನ್ನು ಅರ್ಥಮಾಡಿಕೊಳ್ಳಲು ಇದು ಸರಿಯಾದ ಸಮಯ. ಪಾಕಿಸ್ತಾನವನ್ನು FATF ಬೂದು ಪಟ್ಟಿಗೆ ಮರಳಿ ಸೇರಿಸುವಲ್ಲಿ ಬಹ್ರೇನ್ ಸರ್ಕಾರ ನಮಗೆ ಸಹಾಯ ಮಾಡುತ್ತದೆ ಎಂದು ನಾವು ಭಾವಿಸಿದ್ದೇವೆ ಎಂದರು.

ಮತ್ತಷ್ಟು ಓದಿ: ನಾವಿನ್ನು ಸುಮ್ಮನೆ ಕುಳಿತುಕೊಳ್ಳುವುದಿಲ್ಲ, ಅಮೆರಿಕದಲ್ಲಿ ಭಯೋತ್ಪಾದನೆ, ಪಾಕಿಸ್ತಾನದ ವಿರುದ್ಧ ಶಶಿ ತರೂರ್ ವಾಗ್ದಾಳಿ

ಪ್ರತಿಯೊಬ್ಬ ಭಾರತೀಯನ ಜೀವವನ್ನು ರಕ್ಷಿಸಲು ನಮ್ಮ ಸರ್ಕಾರ ಎಲ್ಲಾ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಎಐಎಂಐಎಂ ಸಂಸದ ಅಸಾದುದ್ದೀನ್ ಓವೈಸಿ ಹೇಳಿದರು.ಮುಂದೊಮ್ಮೆ ಈ ರೀತಿಯ ಕೃತ್ಯಗಳನ್ನು ಎಸಗಲು ಧೈರ್ಯ ಮಾಡಿದರೆ, ಅವರ ನಿರೀಕ್ಷೆಗೂ ಮೀರಿರುವ ಪರಿಣಾಮವನ್ನು ಪಾಕಿಸ್ತಾನ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ದುರದೃಷ್ಟವಶಾತ್, ನಾವು ಅನೇಕ ಮುಗ್ಧ ಜನರ ಪ್ರಾಣವನ್ನು ಕಳೆದುಕೊಂಡಿದ್ದೇವೆ. ಈ ಸಮಸ್ಯೆ ಉದ್ಭವಿಸಲು ಪಾಕಿಸ್ತಾನವೇ ಕಾರಣ. ಪಾಕಿಸ್ತಾನ ಈ ಭಯೋತ್ಪಾದಕ ಗುಂಪುಗಳನ್ನು ಉತ್ತೇಜಿಸುವುದು, ಸಹಾಯ ಮಾಡುವುದು ಮತ್ತು ಪ್ರಾಯೋಜಿಸುವುದನ್ನು ನಿಲ್ಲಿಸದ ಹೊರತು, ಈ ಸಮಸ್ಯೆ ಬಗೆಹರಿಯುವುದಿಲ್ಲ.

ಭಾರತೀಯ ನಿಯೋಗಗಳು ಪ್ರಪಂಚದಾದ್ಯಂತ 33 ದೇಶಗಳಿಗೆ ಭೇಟಿ ನೀಡುತ್ತಿವೆ ಮತ್ತು ಪಾಕಿಸ್ತಾನದ ನಿಜವಾದ ಮುಖವನ್ನು ಜಗತ್ತಿಗೆ ಬಹಿರಂಗಪಡಿಸುತ್ತಿವೆ. ಇದು ಸಂಸದರಾದ ನಿಶಿಕಾಂತ್ ದುಬೆ, ಫಾಂಗ್ನಾನ್ ಕೊನ್ಯಾಕ್, ಎನ್‌ಜೆಪಿ ಸಂಸದೆ ರೇಖಾ ಶರ್ಮಾ, ಎಐಎಂಐಎಂ ಸಂಸದ ಅಸಾದುದ್ದೀನ್ ಓವೈಸಿ, ಸಂಸದ ಸತ್ನಾಮ್ ಸಿಂಗ್ ಸಂಧು, ಗುಲಾಂ ನಬಿ ಆಜಾದ್ ಮತ್ತು ರಾಯಭಾರಿ ಹರ್ಷ್ ಶ್ರಿಂಗ್ಲಾ ಅವರನ್ನು ಒಳಗೊಂಡಿದೆ.

ಏಪ್ರಿಲ್​ 22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್​ನಲ್ಲಿ ಉಗ್ರರು ದಾಳಿ ನಡೆಸಿ 26 ಮಂದಿ ಅಮಾಯಕರನ್ನು ಬಲಿ ಪಡೆದಿದ್ದರು. ಅದಕ್ಕೆ ಪ್ರತೀಕಾರವಾಗಿ ಭಾರತ ಆಪರೇಷನ್ ಸಿಂಧೂರ್ ನಡೆಸಿ ಪಾಕಿಸ್ತಾನದ 9 ಉಗ್ರರ ನೆಲೆಗಳನ್ನು ನಾಶಪಡಿಸಿತ್ತು. ಅದಾದ ಬಳಿಕ ದಾಳಿ, ಪ್ರತಿ ದಾಳಿ ಮುಂದುವರೆದಿತ್ತು. ಈಗ ಎರಡೂ ದೇಶಗಳು ಒಪ್ಪಂದಕ್ಕೆ ಬಂದಿದ್ದು, ಕದನ ವಿರಾಮ ಘೋಷಿಸಿವೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:33 am, Sun, 25 May 25

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ