AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Karun Nair: ಶುಭ ಸುದ್ದಿ: ಟೀಮ್ ಇಂಡಿಯಾಕ್ಕೆ ಆಯ್ಕೆಯಾದ ತಕ್ಷಣ ಫಾರ್ಮ್‌ಗೆ ಮರಳಿದ ಕರುಣ್ ನಾಯರ್

India Squad For England Test Series: 2024 ರಲ್ಲಿ, ಕರುಣ್ ನಾಯರ್ ಅವರು ದೇಶೀಯ ಕ್ರಿಕೆಟ್‌ನಲ್ಲಿ ಸಾಕಷ್ಟು ರನ್ ಗಳಿಸಿದರು, ಅದರ ಪರಿಣಾಮವಾಗಿ ಈ ವರ್ಷ ಐಪಿಎಲ್‌ನಲ್ಲಿ ಆಡಲು ಅವಕಾಶ ಸಿಕ್ಕಿತು. ಈಗ ಅವರು ಭಾರತದ ಟೆಸ್ಟ್ ತಂಡಕ್ಕೂ ಮರಳಿದ್ದಾರೆ. ನಾಯರ್ 2017 ರಲ್ಲಿ ಧರ್ಮಶಾಲಾದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ತಂಡಕ್ಕಾಗಿ ಕೊನೆಯ ಟೆಸ್ಟ್ ಪಂದ್ಯವನ್ನು ಆಡಿದ್ದರು.

Karun Nair: ಶುಭ ಸುದ್ದಿ: ಟೀಮ್ ಇಂಡಿಯಾಕ್ಕೆ ಆಯ್ಕೆಯಾದ ತಕ್ಷಣ ಫಾರ್ಮ್‌ಗೆ ಮರಳಿದ ಕರುಣ್ ನಾಯರ್
Karun Nair (1)
Vinay Bhat
|

Updated on: May 25, 2025 | 10:08 AM

Share

ಬೆಂಗಳೂರು (ಮೇ. 25): ಇಂಗ್ಲೆಂಡ್ ವಿರುದ್ಧದ ಮುಂಬರುವ ಟೆಸ್ಟ್ ಸರಣಿಗೆ ಭಾರತ ತಂಡವನ್ನು (India vs England Test) ಪ್ರಕಟಿಸಲಾಗಿದೆ. ಈ ಬಾರಿ ಕೆಲ ಅಚ್ಚರಿ ಆಯ್ಕೆ ಕೂಡ ನಡೆದಿದ್ದು, ಕೆಲ ಸಮಯದಿಂದ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯಲು ಸಾಕಷ್ಟು ಶ್ರಮವಹಿಸಿದ್ದ ಒಬ್ಬ ಆಟಗಾರನನ್ನು ಭಾರತೀಯ ತಂಡದಲ್ಲಿ ಸೇರಿಸಲಾಗಿದೆ. ಆ ಆಟಗಾರ ಬೇರೆ ಯಾರೂ ಅಲ್ಲ ಅದಯ ಕರುಣ್ ನಾಯರ್. ಒಂದು ಸುಮಾರು ಎರಡು ವರ್ಷಗಳ ಹಿಂದಿನವರೆಗೂ, ಅವರು ಟೀಮ್ ಇಂಡಿಯಾಕ್ಕೆ ಮರಳುವುದು ಅಸಾಧ್ಯವೆಂದು ಎಲ್ಲರೂ ನಂಬಿದ್ದರು. ಆದರೆ ಅವರು ಭರವಸೆ ಕಳೆದುಕೊಳ್ಳದೆ ದೇಶೀಯ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡುವುದನ್ನು ಮುಂದುವರೆಸಿದರು.

2024 ರಲ್ಲಿ, ಕರುಣ್ ನಾಯರ್ ಅವರು ದೇಶೀಯ ಕ್ರಿಕೆಟ್‌ನಲ್ಲಿ ಸಾಕಷ್ಟು ರನ್ ಗಳಿಸಿದರು, ಅದರ ಪರಿಣಾಮವಾಗಿ ಈ ವರ್ಷ ಐಪಿಎಲ್‌ನಲ್ಲಿ ಆಡಲು ಅವಕಾಶ ಸಿಕ್ಕಿತು. ಈಗ ಅವರು ಭಾರತದ ಟೆಸ್ಟ್ ತಂಡಕ್ಕೂ ಮರಳಿದ್ದಾರೆ.

ಐಪಿಎಲ್‌ನಲ್ಲಿ ಕರುಣ್ ನಾಯರ್ ಅಂಕಿಅಂಶಗಳು

ಇದನ್ನೂ ಓದಿ
Image
PBKS vs DC ನಡುವಿನ ಪಂದ್ಯದಲ್ಲಿ ನಿರ್ಮಾಣವಾದ ದಾಖಲೆಗಳ ಪಟ್ಟಿ ನೋಡಿ
Image
ಪ್ಲೇಆಫ್‌ಗೂ ಮುನ್ನ ಆರ್‌ಸಿಬಿಗೆ ಶುರುವಾಯಿತು ಹೊಸ ಟೆನ್ಶನ್
Image
ಸೋಲಿನ ನಡುವೆ ಆರ್​ಸಿಬಿಗೆ ಸಿಕ್ತು ಬಂಪರ್ ಸುದ್ದಿ: ರಜತ್ ಪಡೆಯಲ್ಲಿ ಸಂಭ್ರಮ
Image
ದಿಢೀರ್ ಕುಸಿತ: ಆರ್​ಸಿಬಿ ಸೋಲಿನ ಕಥೆ ಬರೆದ ಆ 5 ಎಸೆತ

ಮೇ 24 ರಂದು ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪಂಜಾಬ್ ಕಿಂಗ್ಸ್ ತಂಡವನ್ನು ಎದುರಿಸಿತು. ಈ ಪಂದ್ಯದಲ್ಲಿ ದೆಹಲಿ ತಂಡ 207 ರನ್‌ಗಳ ಗುರಿಯನ್ನು ಯಶಸ್ವಿಯಾಗಿ ತಲುಪಿತು. ಈ ರನ್ ಚೇಸ್‌ನಲ್ಲಿ ಕರುಣ್ ನಾಯರ್ ಪ್ರಮುಖ ಪಾತ್ರ ವಹಿಸಿದರು. ಅವರು 27 ಎಸೆತಗಳಲ್ಲಿ ಐದು ಬೌಂಡರಿ ಮತ್ತು ಎರಡು ಸಿಕ್ಸರ್‌ಗಳ ಸಹಾಯದಿಂದ 44 ರನ್ ಗಳಿಸಿದರು. ಆದರೆ, ಅವರು ಅರ್ಧಶತಕ ಗಳಿಸುವ ಅವಕಾಶವನ್ನು ಕಳೆದುಕೊಂಡರು.

ಈ ಋತುವಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಒಟ್ಟು 8 ಪಂದ್ಯಗಳನ್ನು ಆಡಿರುವ ನಾಯರ್, 24.75 ಸರಾಸರಿಯಲ್ಲಿ 198 ರನ್ ಗಳಿಸಿದ್ದಾರೆ. ಐಪಿಎಲ್ 2025ರ ತಮ್ಮ ಚೊಚ್ಚಲ ಪಂದ್ಯದಲ್ಲಿ 89 ರನ್ ಗಳಿಸುವ ಮೂಲಕ ಎಲ್ಲರನ್ನೂ ನಿಬ್ಬೆರಗಾಗಿಸಿದರು. ಆದರೆ ನಂತರದ ಕೆಲವು ಪಂದ್ಯಗಳಲ್ಲಿ ವಿಫಲರಾದರು. ಇದರಿಂದಾಗಿ ಅವರನ್ನು ಕೈಬಿಡಲಾಯಿತು. ಆದಾಗ್ಯೂ, ಋತುವಿನ ಕೊನೆಯ ಪಂದ್ಯದಲ್ಲಿ ಅವರಿಗೆ ಅವಕಾಶ ನೀಡಲಾಗಿದ್ದು, ಈಗ ಮತ್ತೆ ಫಾರ್ಮ್​ಗೆ ಮರಳಿದ್ದಾರೆ.

PBKS vs DC: ಪಂಜಾಬ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯದಲ್ಲಿ ನಿರ್ಮಾಣವಾದ ದಾಖಲೆಗಳ ಪಟ್ಟಿ ನೋಡಿ

ಕೌಂಟಿ ಕ್ರಿಕೆಟ್‌ನಲ್ಲಿ ಕರುಣ್ ನಾಯರ್ ಸಾಧನೆ

ನಾಯರ್ ಫಾರ್ಮ್‌ನಲ್ಲಿರುವುದು ಟೀಮ್ ಇಂಡಿಯಾಕ್ಕೆ ಒಳ್ಳೆಯ ಸುದ್ದಿ. ಮುಂದಿನ ತಿಂಗಳು, ತಂಡವು ಇಂಗ್ಲೆಂಡ್‌ನಲ್ಲಿ ಟೆಸ್ಟ್ ಸರಣಿಯನ್ನು ಆಡುವಾಗ, ನಾಯರ್ ಆಡುವ ಹನ್ನೊಂದರಲ್ಲಿ ಅವಕಾಶ ಪಡೆಯಬಹುದು. ನಾಯರ್ ಅವರಿಗೆ ಇಂಗ್ಲೆಂಡ್‌ನಲ್ಲಿ ದೇಶೀಯ ಕ್ರಿಕೆಟ್ ಮತ್ತು ಕೌಂಟಿ ಕ್ರಿಕೆಟ್ ಆಡಿದ ಅನುಭವವಿದೆ. ಅದನ್ನು ಪರಿಗಣಿಸಿದರೆ, ಮುಂಬರುವ ಐದು ಪಂದ್ಯಗಳ ಸರಣಿಯಲ್ಲಿ ಅವರಿಗೆ ಅವಕಾಶ ಸಿಗುವ ಸಾಧ್ಯತೆಯಿದೆ. ನಾಯರ್ 2023 ರಲ್ಲಿ ನಾರ್ಥಾಂಪ್ಟನ್‌ಶೈರ್ ಪರ ಮೂರು ಪಂದ್ಯಗಳನ್ನು ಆಡಿದರು. ಇದರಲ್ಲಿ ಅವರು 83 ರ ಸರಾಸರಿಯಲ್ಲಿ 249 ರನ್ ಗಳಿಸಿದರು ಮತ್ತು ಆ ಋತುವಿನಲ್ಲಿ ಸರ್ರೆ ವಿರುದ್ಧ ಶತಕವನ್ನೂ ಗಳಿಸಿದರು.

2018 ರಲ್ಲಿ ಇಂಗ್ಲೆಂಡ್ ಪ್ರವಾಸದಲ್ಲಿ ನಾಯರ್ ಭಾರತೀಯ ತಂಡದ ಭಾಗವಾಗಿದ್ದರು. ಆದರೆ, ಅವರಿಗೆ ಆಡಲು ಅವಕಾಶ ಸಿಗಲಿಲ್ಲ. 33 ವರ್ಷದ ಕರುಣ್ ನಾಯರ್ 2017 ರಲ್ಲಿ ಧರ್ಮಶಾಲಾದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ತಂಡಕ್ಕಾಗಿ ಕೊನೆಯ ಟೆಸ್ಟ್ ಪಂದ್ಯವನ್ನು ಆಡಿದ್ದರು. ಕರುಣ್ ನಾಯರ್ ತಮ್ಮ ವೃತ್ತಿಜೀವನದಲ್ಲಿ ಇದುವರೆಗೆ ಭಾರತೀಯ ತಂಡಕ್ಕಾಗಿ ಒಟ್ಟು 6 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ, ಇದರಲ್ಲಿ ಅವರು 7 ಇನ್ನಿಂಗ್ಸ್‌ಗಳಲ್ಲಿ 374 ರನ್‌ಗಳನ್ನು ಗಳಿಸಿದ್ದಾರೆ, ಸರಾಸರಿ 62.3 ರಂತೆ ಬ್ಯಾಟಿಂಗ್ ಮಾಡಿದ್ದಾರೆ. 2016 ರಲ್ಲಿ ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ವಿರುದ್ಧ ತ್ರಿಶತಕ ಗಳಿಸಿದ್ದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ