ಅಕ್ರಮವಾಗಿ ಸಾಗಿಸುತ್ತಿದ್ದ 6 ಲಕ್ಷ ಮೌಲ್ಯದ 280 ಕ್ವಿಂಟಲ್ ಅಕ್ಕಿ ಜಪ್ತಿ; ಲಾರಿ ಹಾಗೂ ಚಾಲಕ ಅರೆಸ್ಟ್ ಮಾಡಿದ ಗೋಗಿ ಪೊಲೀಸರು
ಗೋಗಿ ಗ್ರಾಮದಿಂದ ಗುಜರಾತ್ಗೆ ಲಾರಿಯಲ್ಲಿ ಅಕ್ಕಿ ಲೋಡ್ ಮಾಡಿಕೊಂಡು ಹೋಗಲಾಗುತ್ತಿತ್ತು. ಖಚಿತ ಮಾಹಿತಿ ಮೇರೆಗೆ ಶಹಾಪುರ ತಾಲೂಕು ಆಹಾರ ಇಲಾಖೆ ಅಧಿಕಾರಿಗಳು ಹಾಗೂ ಗೋಗಿ ಠಾಣೆಯ ಪೊಲೀಸರು ದಾಳಿ ಮಾಡಿ ಅಕ್ಕಿಯನ್ನ ಜಪ್ತಿ ಮಾಡಿದ್ದಾರೆ.
ಯಾದಗಿರಿ: ಅಕ್ರಮವಾಗಿ ಪಡಿತರ ಅಕ್ಕಿ ಸಾಗಿಸುತ್ತಿದ್ದ ಲಾರಿ ಹಾಗೂ ಚಾಲಕ ಸೇರಿ ಅಕ್ಕಿಯನ್ನ ಅಧಿಕಾರಿಗಳು ಜಪ್ತಿ ಮಾಡಿರುವ ಘಟನೆ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಗೋಗಿ ಗ್ರಾಮದಲ್ಲಿ ನಡೆದಿದೆ. ಗೋಗಿ ಗ್ರಾಮದಿಂದ ಗುಜರಾತ್ಗೆ ಲಾರಿಯಲ್ಲಿ ಅಕ್ಕಿ ಲೋಡ್ ಮಾಡಿಕೊಂಡು ಹೋಗಲಾಗುತ್ತಿತ್ತು. ಖಚಿತ ಮಾಹಿತಿ ಮೇರೆಗೆ ಶಹಾಪುರ ತಾಲೂಕು ಆಹಾರ ಇಲಾಖೆ ಅಧಿಕಾರಿಗಳು ಹಾಗೂ ಗೋಗಿ ಠಾಣೆಯ ಪೊಲೀಸರು ದಾಳಿ ಮಾಡಿ ಅಕ್ಕಿಯನ್ನ ಜಪ್ತಿ ಮಾಡಿದ್ದಾರೆ.
ಇನ್ನು ಗೋಗಿ ಗ್ರಾಮದ ಮಹ್ಮದ ಬಷೀರ್ ಎಂಬುವರ ಶಡ್ನಲ್ಲಿ ಅಕ್ಕಿಯನ್ನ ಸಂಗ್ರಹಿಸಲಾಗಿತ್ತು. ಜನ ರೇಷನ್ ಅಂಗಡಿಯಿಂದ ಅಕ್ಕಿ ಪಡೆದ ಬಳಿಕ ದಂದೆಕೋರರು ಊರು ಊರು ಸುತ್ತಿ ಕಡಿಮೆ ಬೆಲೆಗೆ ಅಕ್ಕಿಯನ್ನ ಜನರಿಂದ ಖರೀದಿ ಮಾಡಿದ್ದಾರೆ. ಸುಮಾರು 6 ಲಕ್ಷ ಮೌಲ್ಯದ 280 ಕ್ವಿಂಟಲ್ ಅಕ್ಕಿಯನ್ನ ಕಡಿಮೆ ಬೆಲೆಗೆ ಖರೀದಿ ಮಾಡಿ ಗುಜರಾತ್ಗೆ ಸಾಗಿಸಲಾಗುತ್ತಿತ್ತು. ಇನ್ನು ಇಂಹತ ಘಟನೆ ಇದೆ ಮೊದಲ ಬಾರಿ ನಡೆದಿಲ್ಲ ಬದಲಿಗೆ ಕಳೆದ ವಾರವಷ್ಟೇ ಸುಮಾರು 250 ಕ್ವಿಟಂಲ್ ಅಕ್ಕಿಯನ್ನ ಇದೆ ಗೋಗಿ ಠಾಣೆಯ ಪೊಲೀಸರು ಜಪ್ತಿ ಮಾಡಿದ್ರು. ಜಿಲ್ಲೆಯ ಗುರುಮಠಕಲ್ ನಿಂದ ಗುಜರಾತ್ಗೆ ಲಾರಿಯಲ್ಲಿ ಸಾಗಿಸುವಾಗ ಗೋಗಿ ಪೊಲೀಸರು ಜಪ್ತಿ ಮಾಡಿದ್ರು. ಆದ್ರೆ ನಿರಂತರವಾಗಿ ಪಡಿತರ ಅಕ್ಕಿ ಸಾಗಾಟದ ಪ್ರಕರಣಗಳು ಬೆಳಕಿಗೆ ಬರ್ತಾಯಿದ್ರು ಅಧಿಕಾರಿಗಳು ಕಠಿಣ ಕ್ರಮಕ್ಕೆ ಮುಂದಾಗುತ್ತಿಲ್ಲ. ಇನ್ನು ಈ ಅಕ್ರಮವಾಗಿ ಅಕ್ಕಿ ಸಾಗಿಸುವ ದಂದೆಕೋರರ ಜೊತೆ ಅಧಿಕಾರಿಗಳು ಸಹ ಶಾಮಿಲಾಗಿದ್ದಾರೆ ಎನ್ನುವ ಮಾತುಗಳು ಕೇಳಿ ಬರ್ತಾಯಿವೆ.
ಇದನ್ನೂ ಓದಿ: ರಾಯನ್ ಸರ್ಜಾಗೆ ಮಾತು ಕಲಿಸಿದ ಮೇಘನಾ ರಾಜ್; ಇಲ್ಲಿದೆ ವಿಡಿಯೋ
ಮೃತ ಹರ್ಷ ಮೊಬೈಲ್ ಫೋನ್ ಪತ್ತೆಯಾಗಿಲ್ಲ, 10 ಆರೋಪಿಗಳ ಬಂಧನ; ಶಿವಮೊಗದಲ್ಲಿ ಎಸ್ಪಿ ಮಾಹಿತಿ