ಮೃತ ಹರ್ಷ ಮೊಬೈಲ್ ಫೋನ್ ಪತ್ತೆಯಾಗಿಲ್ಲ, 10 ಆರೋಪಿಗಳ ಬಂಧನ; ಶಿವಮೊಗದಲ್ಲಿ ಎಸ್​ಪಿ ಮಾಹಿತಿ

ಈಗಾಗಲೇ ಪ್ರಕರಣದಲ್ಲಿ 2 ಕಾರು, ಒಂದು ಬೈಕ್ ಸೀಜ್ ಮಾಡಲಾಗಿದೆ. ಆದರೆ ಕೃತ್ಯಕ್ಕೆ ಬಳಸಿರುವುದು ಒಂದೇ ಕಾರು ಎಂಬುದು ದೃಢವಾಗಿದೆ. ಇಂದಿನ ಪರಿಸ್ಥಿತಿ ಅವಲೋಕಿಸಿ ಕರ್ಫ್ಯೂ ವಿಸ್ತರಣೆ ಬಗ್ಗೆ ನಿರ್ಧಾರ ಮಾಡಲಾಗುವುದು.

ಮೃತ ಹರ್ಷ ಮೊಬೈಲ್ ಫೋನ್ ಪತ್ತೆಯಾಗಿಲ್ಲ, 10 ಆರೋಪಿಗಳ ಬಂಧನ; ಶಿವಮೊಗದಲ್ಲಿ ಎಸ್​ಪಿ ಮಾಹಿತಿ
ಎಸ್​ಪಿ ಬಿಎಂ ಲಕ್ಷ್ಮೀಪ್ರಸಾದ್, ಮೃತ ಹರ್ಷ
Follow us
TV9 Web
| Updated By: sandhya thejappa

Updated on: Feb 25, 2022 | 2:34 PM

ಶಿವಮೊಗ್ಗ: ಜಿಲ್ಲೆಯಲ್ಲಿ ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ (Harsha Murder) ಪ್ರಕರಣಕ್ಕೆ ಸಂಬಂಧಿಸಿ ಈವರೆಗೆ ಒಟ್ಟು 10 ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿದ ಎಸ್​ಪಿ ಬಿಎಂ ಲಕ್ಷ್ಮೀಪ್ರಸಾದ್, ಹರ್ಷ ಮೊಬೈಲ್ ಫೋನ್ (Mobile Phone) ಇನ್ನೂ ಪತ್ತೆಯಾಗಿಲ್ಲ ಎಂದು ತಿಳಿಸಿದ್ದಾರೆ. ಹರ್ಷ ಮೊಬೈಲ್​ಗೆ ಯುವತಿಯರು ವಿಡಿಯೋ ಕಾಲ್ ಮಾಡಿರುವ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿರುವ ಎಸ್​ಪಿ, ಹತ್ಯೆಯಾದ ಹರ್ಷನ ಸ್ನೇಹಿತನ ಹೇಳಿಕೆಯನ್ನು ಪಡೆಯಲಾಗಿದೆ. ಯುವತಿಯರು ಯಾರು ಎನ್ನುವ ತನಿಖೆ ಮಾಡಲಾಗುತ್ತದೆ ಎಂದಿದ್ದಾರೆ.

ಕೃತ್ಯಕ್ಕೆ ಒಂದು ಕಾರು ಬಳಕೆ: ಈಗಾಗಲೇ ಪ್ರಕರಣದಲ್ಲಿ 2 ಕಾರು, ಒಂದು ಬೈಕ್ ಸೀಜ್ ಮಾಡಲಾಗಿದೆ. ಆದರೆ ಕೃತ್ಯಕ್ಕೆ ಬಳಸಿರುವುದು ಒಂದೇ ಕಾರು ಎಂಬುದು ದೃಢವಾಗಿದೆ. ಇಂದಿನ ಪರಿಸ್ಥಿತಿ ಅವಲೋಕಿಸಿ ಕರ್ಫ್ಯೂ ವಿಸ್ತರಣೆ ಬಗ್ಗೆ ನಿರ್ಧಾರ ಮಾಡಲಾಗುವುದು. ಹರ್ಷನ ಕೊಲೆಗೆ ಹಣ ವರ್ಗಾವಣೆ, ರೌಡಿಗಳ ಪಾತ್ರ ಸೇರಿದಂತೆ ಎಲ್ಲ ಆಯಾಮಗಳಲ್ಲೂ ತನಿಖೆ ಮಾಡಲಾಗುತ್ತಿದೆ ಅಂತ ಎಸ್​ಪಿ ಬಿಎಂ ಲಕ್ಷ್ಮೀಪ್ರಸಾದ್ ತಿಳಿಸಿದ್ದಾರೆ.

ನಿನ್ನೆ ಅಬ್ದುಲ್ ರೋಶನ್ ಮತ್ತು ಜಾಫರ್ ಸಾಧೀಕ್ನ ಬಂಧಿಸಲಾಗಿದೆ. ಅಬ್ದುಲ್ ರೋಶನ ಕೃತ್ಯಕ್ಕೆ ಸಹಾಯ ಮಾಡಿದ್ದಾನೆ. ಜಾಫರ್ ಸಾದೀಕ್ ಆರೋಪಿ ಫರಾಜ್ ತಂದೆ. ತಂದೆ ಮಗ ಫರಾಜ್ ತಪ್ಪಿಸಿ ಕೊಂಡು ಹೋಗಲು ಸಹಾಯ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ತಂದೆ ಜಾಫರ್ ಸಾದೀಕ್ ಬಂಧನ ಆಗಿದೆ. ನಿನ್ನೆ ಕೃತ್ಯಕ್ಕೆ ಬಳಸಿದ ಕಾರ್ ಸೀಜ್ ಆಗಿದೆ. ಕೃತ್ಯಕ್ಕೆ ಬಳಸಿದ ಕಾರು ಯಾರದ್ದು? ಅದರ ಮಾಲೀಕ ಯಾರು? ಎನ್ನುವ ಕುರಿತು ಪತ್ತೆ ಮಾಡಲಾಗುತ್ತಿದೆ. ಹೊರ ರಾಜ್ಯದಿಂದ ಬಂತಾ? ಅದನ್ನು ವ್ಯಾಪಾರ ಮಾಡಿದ್ದು ಯಾರು? ಎನ್ನುವ ಕುರಿತು ತನಿಖೆ ನಡೆಯುತ್ತಿದೆ ಅಂತ ಲಕ್ಷ್ಮೀಪ್ರಸಾದ್ ಹೇಳಿದ್ದಾರೆ

ಶಿವಮೊಗ್ಗ ಶವಯಾತ್ರೆ ವೇಳೆ 35 ಕೇಸ್ ದಾಖಲು ಆಗಿವೆ. ಎ1 ಆರೋಪಿ ಖಾಸಿಫ್ ಮೇಲೆ 5 ಕೇಸ್ ಇದೆ. ಆಸಿಫ್ ಮೇಲೆ ಐದು ಕೇಸ್ ಇದೆ. ಎ 5 ಅಫ್ನಾನ್ ಮೇಲೆ ಎರಡು ಕೇಸ್ ಇದೆ. ಮಹ್ಮದ್ ರಿಹಾನ್ ಮೇಲೆ 3 ಕೇಸ್ ಇದೆ. ಇವರ ಮೇಲೆ ಕಳ್ಳತನ ಸೇರಿದಂತೆ ಇತರೆ ಕೇಸ್ಗಳಿವೆ. 2016 – 17ರಲ್ಲಿ ಹರ್ಷ ಮೇಲೆ ಕಾನೂನು ಸುವ್ಯವಸ್ಥೆ ಮತ್ತು ಧರ್ಮ ನಿಂದನೆ ಎರಡು ಕೇಸ್ ಮಾತ್ರ ಇತ್ತು ಅಂತ ಹೇಳಿದರು.

6 ಸಾವಿರ ಮೊಬೈಲ್ ಕಾಲ್​ಗಳ ಪರಿಶೀಲನೆ: ನಿನ್ನೆ (ಫೆ.24) ಹರ್ಷಾನ ಕೊಲೆ ನಡೆದ ಜಾಗ ಮತ್ತು ಆರೋಪಿಗಳ ಸೇರಿ ಸುಮಾರು 6 ಸಾವಿರ ಮೊಬೈಲ್ ಕಾಲ್ಗಳ ಪರಿಶೀಲನೆ ನಡೆಸಿದ್ದಾರೆ. ಹಂತಕರಿಗೆ ಯಾರ ಯಾರ ಸಂಪರ್ಕ ಇದೆ ಎನ್ನುವುದರ ಕುರಿತು ಆಳವಾದ ತನಿಖೆ ನಡೆಯುತ್ತಿದೆ. ಈಗಾಗಲೇ ಗೃಹ ಸಚಿವರು ಕೊಲೆಯ ಹಿಂದೆ ಸಂಘಟನೆ ಕೈವಾಡದ ಶಂಕೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ

ಒಂದು ಬಾರಿ ಐ ಲವ್ ಯೂ ಎನ್ನುವುದು ಉದ್ದೇಶಪೂರ್ವಕವಾಗಿ ಹುಡುಗಿಯ ನಮ್ರತೆಗೆ ಮಾಡಿದ ಅವಮಾನವಲ್ಲ: ಪೋಕ್ಸೊ ಕೋರ್ಟ್

ಮೂರು ವರ್ಷ ಕಳೆದ್ರೂ ಟಾರ್ ಕಾಣದ ರಸ್ತೆಗಳಲ್ಲೇ ಕಾಲೇಜು ವಿದ್ಯಾರ್ಥಿಗಳ ಪರದಾಟ: ಕೊನೆಗೆ ಕೋರ್ಟ್​ ಮೆಟ್ಟಿಲೇರಿದ ವಿದ್ಯಾರ್ಥಿಗಳು

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್