ಮೂರು ವರ್ಷ ಕಳೆದ್ರೂ ಟಾರ್ ಕಾಣದ ರಸ್ತೆಗಳಲ್ಲೇ ಕಾಲೇಜು ವಿದ್ಯಾರ್ಥಿಗಳ ಪರದಾಟ: ಕೊನೆಗೆ ಕೋರ್ಟ್​ ಮೆಟ್ಟಿಲೇರಿದ ವಿದ್ಯಾರ್ಥಿಗಳು

ವಾರವಲ್ಲ.. ತಿಂಗಳಲ್ಲ.. ಮೂರು ವರ್ಷದಿಂದಲೂ ಇದೇ ರಸ್ತೆಯಲ್ಲಿ ವಿದ್ಯಾರ್ಥಿಗಳು ಕಲ್ಲು ಸವೆಸುತ್ತಿದ್ದಾರೆ. ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ ಹೋಗೋದಕ್ಕೆ ಸರಿಯಾದ ರಸ್ತೆಯಿಲ್ಲ. ರಸ್ತೆ ನಿರ್ಮಾಣಕ್ಕಾಗಿ ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಎಷ್ಟೇ ಮನವಿ ಮಾಡಿದ್ರೂ ಪ್ರಯೋಜನವಾಗಿಲ್ಲ.

ಮೂರು ವರ್ಷ ಕಳೆದ್ರೂ ಟಾರ್ ಕಾಣದ ರಸ್ತೆಗಳಲ್ಲೇ ಕಾಲೇಜು ವಿದ್ಯಾರ್ಥಿಗಳ ಪರದಾಟ: ಕೊನೆಗೆ ಕೋರ್ಟ್​ ಮೆಟ್ಟಿಲೇರಿದ  ವಿದ್ಯಾರ್ಥಿಗಳು
ಮೂರು ವರ್ಷ ಕಳೆದ್ರೂ ಟಾರ್ ಕಾಣದ ರಸ್ತೆಗಳಲ್ಲೇ ಕಾಲೇಜು ವಿದ್ಯಾರ್ಥಿಗಳ ಪರದಾಟ
Follow us
TV9 Web
| Updated By: ಆಯೇಷಾ ಬಾನು

Updated on:Feb 25, 2022 | 12:56 PM

ಬೀದರ್: ಮೂರು ವರ್ಷಗಳ ಹಿಂದೆ ಜಿಲ್ಲೆಯ ಔರಾದ್ ತಾಲೂಕಿನ ಸರಕಾರಿ ಪ್ರಥಮ ದರ್ಜೆ ಕಾಲೇಜನ್ನು ಹಳೆ ಕಟ್ಟಡದಿಂದ ಹೊಸ ಕಟ್ಟಡಕ್ಕೆ ಸ್ಥಳಾಂತರ ಮಾಡಲಾಗಿದೆ. ಆದರೆ ಆ ಕಾಲೇಜಿಗೆ ಹೋಗಲು ಸರಿಯಾದ ರಸ್ತೆ ಇಲ್ಲ. ಹತ್ತಾರು ಸಲ ಸಂಕಷ್ಟ ಹೇಳಿಕೊಂಡ್ರೂ ಪ್ರಯೋಜನವಾಗಿಲ್ಲ. ಹೀಗಾಗಿ, ಅವ್ರೆಲ್ಲ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಈ ದಾರಿಯಲ್ಲಿ ಆಟೋ ಬರಲ್ಲ, ಬಸ್ ಓಡಾಡಲ್ಲ, ಬೈಕ್ನಲ್ಲಿ ಬರೋದು ಕಷ್ಟ, ಹೆಜ್ಜೆ ಇಡೋದಕ್ಕೂ ಕಷ್ಟ. ಕಲ್ಲುಗಳ ನಡುವೆ ಹೆಜ್ಜೆ ಹಾಕುತ್ತಾ, ಕಾಲೇಜಿಗೆ ಹೋಗಲು ವಿದ್ಯಾರ್ಥಿಗಳು ಪರದಾಡ್ತಿದ್ದಾರೆ. ಮಳೆ, ಬಿಸಿಲು ಏನೇ ಇದ್ರೂ, ಹಾಳಾದ ರಸ್ತೆಯಲ್ಲೇ ನಡೆಯುವಂತಾಗಿದೆ.

ವಾರವಲ್ಲ.. ತಿಂಗಳಲ್ಲ.. ಮೂರು ವರ್ಷದಿಂದಲೂ ಇದೇ ರಸ್ತೆಯಲ್ಲಿ ವಿದ್ಯಾರ್ಥಿಗಳು ಕಲ್ಲು ಸವೆಸುತ್ತಿದ್ದಾರೆ. ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ ಹೋಗೋದಕ್ಕೆ ಸರಿಯಾದ ರಸ್ತೆಯಿಲ್ಲ. ರಸ್ತೆ ನಿರ್ಮಾಣಕ್ಕಾಗಿ ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಎಷ್ಟೇ ಮನವಿ ಮಾಡಿದ್ರೂ ಪ್ರಯೋಜನವಾಗಿಲ್ಲ. ಹೀಗಾಗಿ, ರಸ್ತೆ ಭಾಗ್ಯಕ್ಕಾಗಿ ವಿದ್ಯಾರ್ಥಿಗಳೆಲ್ಲ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಔರಾದ್ ಪಟ್ಟಣದಿಂದ ಮೂರು ಕಿಲೋ ಮೀಟರ್ ದೂರದಲ್ಲಿ ಕಾಲೇಜಿದೆ. ಹಳೇ ಕಟ್ಟಡದಿಂದ ಹೊಸ ಕಟ್ಟಡಕ್ಕೆ ಕಾಲೇಜು ಸ್ಥಳಾಂತರವಾಗಿ ಮೂರು ವರ್ಷವಾಗಿದ್ದು, ಅಂದಿನಿಂದಲೂ ಇದೇ ರಸ್ತೆಯಲ್ಲಿ ಮಕ್ಕಳು ಹೆಜ್ಜೆ ಹಾಕ್ತಿದ್ದಾರೆ. ಹಳ್ಳ-ದಿಣ್ಣೆ, ಕಲ್ಲು, ಮುಳ್ಳಿನಿಂದ ರಸ್ತೆ ಕೂಡಿದ್ದು, ಆಟೋ, ಬಸ್ ಸೌಲಭ್ಯವಿಲ್ಲ. ಕಾಲೇಜಿನಲ್ಲಿ ಸುಮಾರು 750 ಸ್ಟೂಡೆಂಟ್ಸ್ಗಳಿದ್ದು ಕೆಲ ಯುವಕರು ಬೈಕ್ನಲ್ಲಿ ಬರೋದು ಬಿಟ್ರೆ, ಉಳಿದವ್ರೆಲ್ಲ ನಡೆದುಕೊಂಡೇ ಬರಬೇಕಾಗಿದೆ. ಹೆಣ್ಣು ಮಕ್ಕಳಿಗಂತೂ ಕಾಲೇಜಿಗೆ ಬಂದು ಹೋಗೋದೆ ಸವಾಲಾಗಿದೆ. ಇನ್ನು, ರಸ್ತೆ ಜತೆಗೆ ಲೈಬ್ರರಿ, ಕ್ಲಾಸ್ ರೂಂ, ಆಟದ ಮೈದಾನ ಸೇರಿದಂತೆ ಹತ್ತಾರು ಸಮಸ್ಯೆಗಳನ್ನ ಕಾಲೇಜು ಎದುರಿಸ್ತಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳೇ ಕಾಲೇಜಿಗೆ ಹೆಚ್ಚು ಬರುತ್ತಿದ್ದು, ಬಸ್ ವ್ಯವಸ್ಥೆಗಾಗಿ ಜನಪ್ರತಿನಿಧಿಗಳ ಬಳಿ ಶಿಕ್ಷಕರು ಮೊರೆ ಇಡುತ್ತಿದ್ದಾರೆ.

ಒಟ್ನಲ್ಲಿ, ಕಾಲೇಜಿಗೆ ಹೋಗೋದು ಅಂದ್ರೆ ಗುಡ್ಡ ಹತ್ತಿ ಇಳಿದಂತಹ ಅನುಭವ ಆಗ್ತಿದೆ. ಅಧಿಕಾರಿಗಳು, ಜನಪ್ರತಿನಿಧಿಗಳು ಯಾರಿಗೇ ಕಷ್ಟ ಹೇಳ್ಕೊಂಡ್ರೂ ಏನೂ ಪ್ರಯೋಜನವಾಗ್ತಿಲ್ಲ. ಹೀಗಾಗಿ, ವಿದ್ಯಾರ್ಥಿಗಳೆಲ್ಲ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ನ್ಯಾಯಾಲಯ ಏನ್ ಹೇಳುತ್ತೆ ನೋಡ್ಬೇಕು.

ವರದಿ: ಸುರೇಶ ನಾಯಕ್, ಟಿವಿ9 ಬೀದರ್

bidar college issue

ಮೂರು ವರ್ಷ ಕಳೆದ್ರೂ ಟಾರ್ ಕಾಣದ ರಸ್ತೆಗಳಲ್ಲೇ ಕಾಲೇಜು ವಿದ್ಯಾರ್ಥಿಗಳ ಪರದಾಟ

bidar college issue 2

ಮೂರು ವರ್ಷ ಕಳೆದ್ರೂ ಟಾರ್ ಕಾಣದ ರಸ್ತೆಗಳಲ್ಲೇ ಕಾಲೇಜು ವಿದ್ಯಾರ್ಥಿಗಳ ಪರದಾಟ

ಇದನ್ನೂ ಓದಿ: Literature : ನೆರೆನಾಡ ನುಡಿಯೊಳಗಾಡಿ: ಹರುಕಿ ಮುರಾಕಾಮಿ ಬರೆದ ಕಥೆ

ಉಕ್ರೇನ್​ನಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣೆಗೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ ಸಿದ್ದರಾಮಯ್ಯ

Published On - 12:53 pm, Fri, 25 February 22

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ