ಹಿಜಾಬ್ ಧರಿಸಿ ಕಾಲೇಜಿಗೆ ಬರುವ ಅನುಮತಿ ಕೊಡಿ ಇಲ್ಲವೇ ಟಿಸಿಗಳನ್ನು ಕೊಟ್ಟುಬಿಡಿ ಅಂದರು ಅರಸೀಕೆರೆ ಪಿಯು ವಿದ್ಯಾರ್ಥಿನಿಯರು

ಹಿಜಾಬ್ ಧರಿಸಿ ಕಾಲೇಜಿಗೆ ಬರುವ ಅನುಮತಿ ಕೊಡಿ ಇಲ್ಲವೇ ಟಿಸಿಗಳನ್ನು ಕೊಟ್ಟುಬಿಡಿ ಅಂದರು ಅರಸೀಕೆರೆ ಪಿಯು ವಿದ್ಯಾರ್ಥಿನಿಯರು

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Feb 19, 2022 | 5:23 PM

ಹಿಜಾಬ್ ಧರಿಸಲು ಅವಕಾಶ ನೀಡುವುದಿಲ್ಲ ಅಂತಾದ್ರೆ ನಮ್ಮ ಟಿಸಿ (ಟ್ರಾನ್ಸ ಫರ್ ಸರ್ಟಿಫಿಕೇಟ್) ಕೊಟ್ಟುಬಿಡಿ ಅಂತ ಒಂದಿಬ್ಬರು ವಿದ್ಯಾರ್ಥಿನಿಯರು ಆವೇಶದಲ್ಲಿ ಹೇಳುತ್ತಾರೆ.

ಇವತ್ತು ಶನಿವಾರ, ಹಿಜಾಬ್-ವಿವಾದದ (hijab row) ಮತ್ತೊಂದು ವಾರ ಕಳೆಯಿತು ಅದರೆ, ವಿವಾದದ ರಗಳೆ ಮಾತ್ರ ಕಳೆದೆರಡು ವಾರಗಳಗಿಂತ ಹೆಚ್ಚಾಗಿದೆಯೇ ಹೊರತು ಕಡಿಮೆಯಾಗುತ್ತಿಲ್ಲ. ಹೈಕೋರ್ಟ್ ಮಧ್ಯಂತರ ಆದೇಶ (interim order) ನೀಡಿದ ಬಳಿಕ ಅಂತಿಮ ತೀರ್ಪು ಹೊರಬೀಳುವವರೆಗೆ ವಿವಾದ ತಣ್ಣಗಾಗಿರುತ್ತದೆ ಅಂತ ಅಂದುಕೊಂಡಿದ್ದು ಹುಸಿಹೋಗಿದೆ. ಬದಲಿಗೆ ಅದು ಜಾಸ್ತಿಯಾಗಿದೆ. ಹಾಸನ ಜಿಲ್ಲೆಯ ಅರಸೀಕೆರೆಯ (Arasikere) ಬಾಲಕಿಯರ ಪದವಿ-ಪೂರ್ವ ಕಾಲೇಜಿನಲ್ಲಿ ಶನಿವಾರ ಬುರ್ಖಾ ಮತ್ತು ಹಿಜಾಬ್ ಧರಿಸಿದ ಹಲವು ವಿದ್ಯಾರ್ಥಿನಿಯರು ಕಾಲೇಜು ಆವರಣದಲ್ಲಿ ಕೂತು ಪ್ರತಿಭಟನೆ ನಡೆಸಿದರು. ನಮಗೆ ಬುರ್ಖಾ ಮತ್ತು ಹಿಜಾಬ್ ಧರಿಸಿ ಕಾಲೇಜಿಗೆ ಬರಲು ಅವಕಾಶ ನೀಡಬೇಕೆಂದು ಅವರು ಹೇಳಿದರು.

ಮಾಧ್ಯಮದವರು ಅಲ್ಲಿಗೆ ಹೋದಾಗ ವಿದ್ಯಾರ್ಥಿನಿಯರು, ಹಿಜಾಬ್ ಮತ್ತು ಬುರ್ಖಾ ತಮ್ಮ ಮರ್ಯಾದೆ-ಗೌರವದ ಸಂಕೇತ, ಅವಿಲ್ಲದೆ ನಾವು ಕಾಲೇಜಿಗೆ ಬರುವುದು ಸಾಧ್ಯವಿಲ್ಲ. ಹಿಜಾಬ್ ಧರಿಸಲು ಅವಕಾಶ ನೀಡುವುದಿಲ್ಲ ಅಂತಾದ್ರೆ ನಮ್ಮ ಟಿಸಿ (ಟ್ರಾನ್ಸ ಫರ್ ಸರ್ಟಿಫಿಕೇಟ್) ಕೊಟ್ಟುಬಿಡಿ ಅಂತ ಒಂದಿಬ್ಬರು ವಿದ್ಯಾರ್ಥಿನಿಯರು ಆವೇಶದಲ್ಲಿ ಹೇಳುತ್ತಾರೆ.

ಟಿಸಿ ತೆಗೆದುಕೊಂಡು ಹೋಗಲು ನೀವು ರೆಡಿಯಾಗಿದ್ದೀರಾ ಅಂತ ಮಾಧ್ಯಮದವರು ಕೇಳಿದಾಗ ಬೇರೆ ವಿದ್ಯಾರ್ಥಿನಿ, ಅದರರ್ಥ ಹಾಗಲ್ಲ, ನಾವೆಲ್ಲ ಓದಿ ಬದುಕಿನಲ್ಲಿ ಏನಾದರೂ ಸಾಧಿಸಬೇಕೆಂಬ ಉದ್ದೇಶದಿಂದ ಇಲ್ಲಿಗೆ ಬರುತ್ತೇವೆ. ನಮ್ಮ ಓದಿಗೆ ಪೂರಕವಾದ ವಾತಾವಾರಣ ಕಲ್ಪಿಸದಿದ್ದರೆ ಹೇಗೆ ಎಂದು ಹೇಳುತ್ತಾಳೆ.

ಇದನ್ನೂ ಓದಿ: ಹಿಜಾಬ್ ಧರಿಸಿ ಕಾಲೇಜಿಗೆ ಬರಲು ಅವಕಾಶ ನೀಡಿ ಇಲ್ಲವೇ ವಿಷ ಕೊಡಿ ಅನ್ನುತ್ತಾರೆ ಹಾಸನದ ಕಾಲೇಜೊಂದರ ವಿದ್ಯಾರ್ಥಿನಿಯರು