Actor Rajesh: ರವೀಂದ್ರ ಕಲಾಕ್ಷೇತ್ರದಲ್ಲಿ ಹಿರಿಯ ನಟ ರಾಜೇಶ್ ಅಂತಿಮ ದರ್ಶನಕ್ಕೆ ಅವಕಾಶ: ಅರ್ಜುನ್ ಸರ್ಜಾ ಮಾಹಿತಿ

TV9 Digital Desk

| Edited By: shivaprasad.hs

Updated on: Feb 19, 2022 | 9:43 AM

Kalatapasvi Rajesh | Arjun Sarja: ಕನ್ನಡ ಚಿತ್ರರಂಗದ ಹಿರಿಯ ನಟ ರಾಜೇಶ್ ನಿಧನರಾಗಿದ್ದಾರೆ. ಅವರ ಅಂತ್ಯಕ್ರಿಯೆಯ ಕುರಿತು ರಾಜೇಶ್ ಅಳಿಯ, ನಟ ಅರ್ಜುನ್ ಸರ್ಜಾ ಮಾಹಿತಿ ನೀಡಿದ್ದಾರೆ.

ಬೆಂಗಳೂರು: ಹಿರಿಯ ರಾಜೇಶ್ (Actor Rajesh) ಇಂದು (ಶನಿವಾರ, ಫೆ.19) ಮುಂಜಾನೆ ನಿಧನರಾಗಿದ್ದಾರೆ. ಅವರ ಕುರಿತು ಹಾಗೂ ಅಂತ್ಯಕ್ರಿಯೆಯ ಕುರಿತು ರಾಜೇಶ್ ಅಳಿಯ, ನಟ ಅರ್ಜುನ್ ಸರ್ಜಾ ಮಾಹಿತಿ ನೀಡಿದ್ದಾರೆ. ಈ ದಿನ ದುಃಖಕರವಾದ ದಿನ ಎಂದಿರುವ ಅರ್ಜುನ್ ಸರ್ಜಾ, ‘‘ಕನ್ನಡ ಚಿತ್ರರಂಗದಲ್ಲಿ 50 ವರ್ಷಕ್ಕೂ ಹೆಚ್ಚು ಇದ್ದವರು ರಾಜೇಶ್. ಡಾ.ರಾಜ್‌ಕುಮಾರ್​ರವರ ಪಂಕ್ತಿಯವರು. ಮನಸ್ಸಿಗೆ ಕಷ್ಟವಾಗುತ್ತಿದೆ’’ ಎಂದು ಹೇಳಿದ್ದಾರೆ. ರಾಜೇಶ್ ಅವರ ಕೊನೆಯ ದಿನಗಳ ಕುರಿತು ಮಾಹಿತಿ ನೀಡಿದ ಅರ್ಜುನ್ ಸರ್ಜಾ, ‘‘10 ದಿನಗಳಿಂದ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿದ್ದರು. ಮೊದಲಿಗೆ ಪ್ರೋ ಕೋವಿಡ್ ಆಮೇಲೆ ಸಿಕೆಡಿ ಸಮಸ್ಯೆ ಆಗಿತ್ತು. ತುಂಬಾ ಸುಸ್ತು ಎಂದು ಅಡ್ಮಿಟ್ ಆಗಿದ್ದರು. ಬಹಳ ಪ್ರಯತ್ನ ಪಟ್ಟೆವು. ಆದರೆ ಫಲಿತಾಂಶ ಸಿಗಲಿಲ್ಲ. ಮುಂಜಾನೆ 2.20ಕ್ಕೆ ಅವರು ಇಹಲೋಕ ತ್ಯಜಿಸಿದ್ದಾರೆ’’ ಎಂದಿದ್ದಾರೆ.

ವಿದ್ಯಾರಣ್ಯಪುರ ಸ್ವನಿವಾಸದಲ್ಲಿ ಪೂಜೆ ನಡೆಯಲಿದೆ. 11 ಗಂಟೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಸಾರ್ವಜನಿಕ ದರ್ಶನಕ್ಕೆ ಏರ್ಪಾಟು ಮಾಡಲಾಗಿದೆ. ಮಧ್ಯಾಹ್ನ 3.30ಕ್ಕೆ ಮೇಡಿ ಅಗ್ರಹಾರ ಲಕ್ಷ್ಮೀಪುರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಸಾರ್ವಜನಿಕರು ರವೀಂದ್ರ ಕಲಾಕ್ಷೇತ್ರಕ್ಕೆ ಆಗಮಿಸಿ ದರ್ಶನ ಪಡೆಯಬಹುದು ಎಂದು ಅರ್ಜುನ್ ಸರ್ಜಾ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:

Actor Rajesh: 150ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದ ರಾಜೇಶ್; ಅಪರೂಪದ ಫೋಟೋಗಳು ಇಲ್ಲಿವೆ

Dhanveer: ಅಭಿಮಾನಿ ಮೇಲೆ ಹಲ್ಲೆ ಆರೋಪ; ನಟ ಧನ್ವೀರ್ ವಿರುದ್ಧ ಎಫ್​ಐಆರ್​ ದಾಖಲು

Follow us on

Click on your DTH Provider to Add TV9 Kannada