Dhanveer: ಅಭಿಮಾನಿ ಮೇಲೆ ಹಲ್ಲೆ ಆರೋಪ; ನಟ ಧನ್ವೀರ್ ವಿರುದ್ಧ ಎಫ್​ಐಆರ್​ ದಾಖಲು

ಸ್ಯಾಂಡಲ್​ವುಡ್ ನಟ ಧನ್ವೀರ್​ಗೆ ಸಂಕಷ್ಟ ಎದುರಾಗಿದೆ. ಅಭಿಮಾನಿ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಅವರ ಮೇಲೆ ಎಫ್​ಐಆರ್ ದಾಖಲಾಗಿದೆ.

Dhanveer: ಅಭಿಮಾನಿ ಮೇಲೆ ಹಲ್ಲೆ ಆರೋಪ; ನಟ ಧನ್ವೀರ್ ವಿರುದ್ಧ ಎಫ್​ಐಆರ್​ ದಾಖಲು
ಧನ್ವೀರ್​-ಚಂದ್ರಶೇಖರ್
Follow us
TV9 Web
| Updated By: shivaprasad.hs

Updated on:Feb 19, 2022 | 9:19 AM

ಬೆಂಗಳೂರು: ಸೆಲ್ಫಿ ವಿಚಾರಕ್ಕೆ ಅಭಿಮಾನಿಯನ್ನು ಹೊಡೆದ ಆರೋಪದ ಮೇಲೆ ನಟ ಧನ್ವೀರ್ (Dhanveer) ಹಾಗೂ ಸ್ನೇಹಿತರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಅಭಿಮಾನಿ ಚಂದ್ರಶೇಖರ್‌ಗೆ ನಿಂದಿಸಿ ಹಲ್ಲೆ ಮಾಡಿದ ಆರೋಪದ ಮೇಲೆ ದೂರು ದಾಖಲಾಗಿತ್ತು. ಇದರ ಆಧಾರದಲ್ಲಿ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದೆ. ಫೆಬ್ರವರಿ 18ರ ಶುಕ್ರವಾರ ಧನ್ವೀರ್ ಅವರ ‘ಬೈ ಟೂ ಲವ್’ (By Two Love) ಚಿತ್ರ ತೆರೆಗೆ ಬಂದಿತ್ತು. ಇದರ ಸಂತಸದಲ್ಲಿದ್ದ ನಟನ ವಿರುದ್ಧ ಈಗ ಎಫ್​ಐಆರ್ ದಾಖಲಾಗಿದೆ. ಪ್ರಕರಣದ ಕುರಿತು ಧನ್ವೀರ್ ಇನ್ನಷ್ಟೇ ಪ್ರತಿಕ್ರಿಯಿಸಬೇಕಿದೆ. ಮೊನ್ನೆ ರಾತ್ರಿ (ಫೆಬ್ರವರಿ 17) ಅನುಪಮ ಠಾಕಿಸ್ ಬಳಿ‌ ಘಟನೆ ನಡೆದಿತ್ತು. ಅನುಪಮ ಚಿತ್ರಮಂದಿರದ ಬಳಿ ಚಂದ್ರಶೇಖರ್ ಮತ್ತು ಸ್ನೇಹಿತರು ತೆರಳಿದ್ದರು. ಧನ್ವೀರ್ ಅವರನ್ನು ನೋಡುತ್ತಿದ್ದಂತೆ ಚಂದ್ರಶೇಖರ್ ಸ್ನೇಹಿತ ಸೆಲ್ಫಿ ಕೇಳಲು ಹೋಗಿದ್ದರು. ಸ್ನೇಹಿತನಿಗೆ ಚಂದ್ರಶೇಖರ್, ‘ಊರಿಗೆ ಹೋಗಲು ತಡವಾಗುತ್ತದೆ, ಬೆಳಗ್ಗೆ ಫೋಟೊ ತೆಗೆಸಿಕೊಳ್ಳುವಂತೆ ಬಾ’ ಎಂದು ಹೇಳಿದ್ದರು. ಆಗ ಧನ್ವೀರ್ ಚಂದ್ರಶೇಖರ್​ಗೆ ‘ನೀವು ಕನ್ನಡ ಬೆಳೆಸುವುದಿಲ್ಲ’ ಎಂದು ಹೇಳಿ, ಅವಾಚ್ಯ ಶಬ್ದಗಳಿಂದ ಬೈದು, ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಸದ್ಯ ಕೆಸಿ ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚಂದ್ರಶೇಖರ್ ತೆರಳಿದ್ದಾರೆ.

ಈ ವಾರ ತೆರೆಕಂಡಿದ್ದ ‘ಬೈ ಟೂ ಲವ್’:

ನಟ ಧನ್ವೀರ್ ಮತ್ತು ಶ್ರೀಲೀಲಾ ‘ಬೈ ಟೂ ಲವ್​’ ಸಿನಿಮಾದಲ್ಲಿ ಒಟ್ಟಾಗಿ ನಟಿಸಿದ್ದಾರೆ. ಪ್ರೀತಿ-ಪ್ರೇಮದ ಕಥೆ ಸಿನಿಮಾದ ಹೈಲೈಟ್​ ಎಂಬುದಕ್ಕೆ ಟ್ರೇಲರ್​ ಸಾಕ್ಷಿ ಒದಗಿಸಿದೆ. ‘ಬಜಾರ್​’ ಚಿತ್ರದ ಮೂಲಕ ಸ್ಯಾಂಡಲ್​ವುಡ್​ಗೆ ಕಾಲಿಟ್ಟವರು ಧನ್ವೀರ್. ‘ಕಿಸ್​’ ಚಿತ್ರದ ಮೂಲಕ ಶ್ರೀಲೀಲಾ ಬೇಡಿಕೆ ಹೆಚ್ಚಿಸಿಕೊಂಡರು. ಇಬ್ಬರೂ ‘ಬೈ ಟೂ ಲವ್​’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರಕ್ಕೆ ಹರಿ ಸಂತೋಷ್​ ನಿರ್ದೇಶನವಿದೆ. ಸಾಧು ಕೋಕಿಲ, ರಂಗಾಯಣ ರಘು, ಅಚ್ಯುತ್​ ಕುಮಾರ್ ಮೊದಲಾದವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ:

ಅಭಿಮಾನಿ ಮೇಲೆ ಹಲ್ಲೆ ಆರೋಪ; ನಟ ಧನ್ವೀರ್ ವಿರುದ್ಧ ದೂರು ದಾಖಲು  

Actor Rajesh: 150ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದ ರಾಜೇಶ್; ಅಪರೂಪದ ಫೋಟೋಗಳು ಇಲ್ಲಿವೆ

Published On - 9:09 am, Sat, 19 February 22

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್