ವೇದಿಕೆ ಮೇಲೆಯೇ ಧನ್ವೀರ್​ಗೆ ಪ್ರಪೋಸ್​; ‘ಇವರೇ ನನ್ನ ಫಸ್ಟ್​ ಕ್ರಶ್​’ ಎಂದ ಯುವತಿ

TV9 Digital Desk

| Edited By: ಮದನ್​ ಕುಮಾರ್​

Updated on: Feb 14, 2022 | 2:20 PM

‘ಬೈ ಟೂ ಲವ್​’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈ ಚಿತ್ರದ ಹೀರೋ ಧನ್ವೀರ್​ ಅವರು ತಮ್ಮದೇ ಆದಂತಹ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.

ನಟ ಧನ್ವೀರ್​ (Dhanveer) ಅವರು ಸ್ಯಾಂಡಲ್​ವುಡ್​ನಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. ಅವರು ಅಭಿನಯಿಸಿರುವ ‘ಬೈ ಟೂ ಲವ್​’ (Bytwo Love Movie) ಸಿನಿಮಾ ಫೆ.18ರಂದು ಬಿಡುಗಡೆ ಆಗಲಿದೆ. ಈ ಚಿತ್ರದಲ್ಲಿ ಅವರಿಗೆ ಜೋಡಿಯಾಗಿ ಶ್ರೀಲೀಲಾ ಅಭಿನಯಿಸಿದ್ದಾರೆ. ಸಿನಿಮಾದ ಪ್ರಚಾರಕ್ಕಾಗಿ ಚಿತ್ರತಂಡ ಹಗಲಿರುಳು ಶ್ರಮಿಸುತ್ತಿದೆ. ಅಭಿಮಾನಿಗಳ ಸಮ್ಮುಖದಲ್ಲಿಯೂ ಕಾರ್ಯಕ್ರಮ ಮಾಡಲಾಗಿದೆ. ಈ ವೇಳೆ ಯುವತಿಯೊಬ್ಬರು ಧನ್ವೀರ್​ಗೆ ಪ್ರಪೋಸ್​ ಮಾಡಿದ್ದಾರೆ. ಸಿನಿಮಾ ಬಗ್ಗೆ ವೇದಿಕೆ ಮೇಲೆ ಮಾತನಾಡುತ್ತಿದ್ದ ಅವರು, ಧನ್ವೀರ್​ ಮೇಲೆ ತಮಗಿರುವ ಭಾವನೆ ಎಂಥದ್ದು ಎಂಬುದನ್ನು ವ್ಯಕ್ತಪಡಿಸಿದರು. ಹಾಸ್ಯ ನಟರಾದ ಶಿವರಾಜ್​ ಕೆ.ಆರ್​. ಪೇಟೆ ಮತ್ತು ಧರ್ಮಣ್ಣ ಕೂಡ ಅದೇ ವೇದಿಕೆಯಲ್ಲಿದ್ದರು. ‘ಧನ್ವೀರ್​ ರೀತಿ ಹುಡುಗ ಸಿಕ್ಕರೆ ಖಂಡಿತ ಲವ್​ ಮಾಡ್ತೀನಿ’ ಎಂದು ಆ ಯುವತಿ ಹೇಳಿದರು. ‘ಇಷ್ಟೆಲ್ಲ ಹೇಳಿದ ಮೇಲೆ ಇನ್ನೇನು ಬಾಕಿ? ಧನ್ವೀರ್​ ಇಲ್ಲೇ ಇದ್ದಾರೆ ಹೇಳಿಬಿಡಿ’ ಎಂದು ಆಕೆಗೆ ಧರ್ಮಣ್ಣ ಪ್ರೋತ್ಸಾಹ ನೀಡಿದರು. ಕೂಡಲೇ ಮೈಕ್​ ಹಿಡಿದುಕೊಂಡ ಯುವತಿ ‘ಐ ಲವ್​ ಯೂ ಧನ್ವೀರ್​’ ಎಂದು ಪ್ರಪೋಸ್ (Love Propose)​ ಮಾಡಿದರು. ‘ನನ್ನ ಫಸ್ಟ್​ ಕ್ರಶ್​ ಅವರೇ’ ಎಂದು ಕೂಡ ಹೇಳಿಕೊಂಡರು. ‘ಬೈ ಟೂ ಲವ್​’ ಚಿತ್ರಕ್ಕೆ ಹರಿ ಸಂತೋಷ್​ ನಿರ್ದೇಶನ ಮಾಡಿದ್ದಾರೆ.

ಇದನ್ನೂ ಓದಿ:

ಧನ್ವೀರ್​-ಶ್ರೀಲೀಲಾ ಚಿತ್ರಕ್ಕೆ ‘ಬೈ ಟೂ ಲವ್​’ ಅಂತ ಟೈಟಲ್​ ಇಟ್ಟಿದ್ದು ಯಾಕೆ? ಡೈರೆಕ್ಟರ್​ ನೀಡಿದ ಉತ್ತರ ಇಲ್ಲಿದೆ..

ಮಾನ್ವಿತಾ-ಧೀರೇನ್​ ಲಿಪ್​ ಲಾಕ್​; ಪ್ರೇಮಿಗಳ ದಿನಕ್ಕೆ ರೊಮ್ಯಾಂಟಿಕ್​ ಆಗಿ ಕಾಣಿಸಿಕೊಂಡ ಜೋಡಿ

Follow us on

Click on your DTH Provider to Add TV9 Kannada