AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹುಬ್ಬಳ್ಳಿಯಲ್ಲಿ ಹಿಜಾಬ್ ಧರಿಸಿ ಶಾಲೆಗೆ ಬಂದ ವಿದ್ಯಾರ್ಥಿನಿ ಮುಖದ ಮೇಲೆ ‘ಅಪ್ನಾ ಟೈಮ್ ಆಯೇಗಾ’ ಅಂತ ಬರೆಯಲಾದ ಮಾಸ್ಕ್!

ಹುಬ್ಬಳ್ಳಿಯಲ್ಲಿ ಹಿಜಾಬ್ ಧರಿಸಿ ಶಾಲೆಗೆ ಬಂದ ವಿದ್ಯಾರ್ಥಿನಿ ಮುಖದ ಮೇಲೆ ‘ಅಪ್ನಾ ಟೈಮ್ ಆಯೇಗಾ’ ಅಂತ ಬರೆಯಲಾದ ಮಾಸ್ಕ್!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ|

Updated on: Feb 14, 2022 | 4:03 PM

Share

ಇದು ಪ್ರಾಥಮಿಕ ಶಾಲೆಯಲ್ಲಿ ಓದುವ ಚಿಕ್ಕ ಮಕ್ಕಳ ಮನಸ್ಸಿನಲ್ಲಿ ಹುಟ್ಟುವ ಭಾವನೆ ಅಲ್ಲ. ತಮ್ಮ ಸುತ್ತ ಏನು ನಡೆಯುತ್ತಿದೆ ಅಂತ ಅರ್ಥ ಮಾಡಿಕೊಳ್ಳದ ವಯಸ್ಸು ಅವರದ್ದು. ಆದರೆ, ಅವರನ್ನು ಮನಸ್ಸನ್ನು ಕೆಡಿಸುವ ಕೆಲಸ ಕೆಲವರು ಮಾಡುತ್ತಿದ್ದಾರೆ.

ಇಂಥದೆಲ್ಲ ಬೇಕಿರಲಿಲ್ಲ. ಮಕ್ಕಳ ಮೂಲಕ ಯಾಕೆ ಸಲ್ಲದ ಕೆಲಸಗಳನ್ನು ಮಾಡಿಸುತ್ತಾರೋ ಅಂತ ಅರ್ಥವಾಗಲ್ಲ ಮಾರಾಯ್ರೇ. ಹುಬ್ಬಳ್ಳಿಯ (Hubballi) ಶಾಲೆಯೊಂದರ ದೃಶ್ಯವನ್ನು ನಿಮಗಿಲ್ಲಿ ತೋರಿಸುತ್ತಿದ್ದೇವೆ. ಇದು ನಗರದ ಕೌಲ್ ಪೇಟೆಯಲ್ಲಿರುವ ಸರ್ಕಾರೀ ಉರ್ದು ಹಿರಿಯ ಪ್ರಾಥಮಿಕ ಶಾಲೆ (Urdu Higher Primary School). ಶಾಲೆ ಯಾವ ಮಾಧ್ಯಮದ್ದೇ ಆಗಿರಲಿ. ನಮ್ಮ ನ್ಯಾಯಾಂಗ ವ್ಯವಸ್ಥೆ (judiciary) ನೀಡಿರುವ ಆದೇಶವನ್ನು ಪಾಲಿಸಲೇ ಬೇಕು. ಹಿಜಾಬ್-ಕೇಸರಿ ಶಾಲು ವಿವಾದಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸುತ್ತಿರುವ ಕರ್ನಾಟಕ ಉಚ್ಚ ನ್ಯಾಯಾಲಯ ತಾನು ಅಂತಿಮ ತೀರ್ಪು ನೀಡುವವರೆಗೆ ವಿದ್ಯಾರ್ಥಿಗಳು ಧಾರ್ಮಿಕತೆಯನ್ನು ಪ್ರತಿಬಿಂಬಿಸುವ ಯಾವುದೇ ಬಗೆಯ ಉಡುಪು, ವಸ್ತ್ರ ಧರಿಸಿ ಶಾಲೆಗೆ ಹೋಗಕೂಡದು ಅಂತ ಮಧ್ಯಂತರ ಆದೇಶವನ್ನು ಕಳೆದ ಶುಕ್ರವಾರ ನೀಡಿದೆ. ರಾಜ್ಯದ ಎಲ್ಲ ಭಾಗಗಳಲ್ಲಿ ಈ ಆದೇಶದ ಪಾಲನೆ ಆಗುತ್ತಿದೆ. ಆದರೆ, ಹುಬ್ಬಳ್ಳಿಯ ಈ ಉರ್ದು ಮಾಧ್ಯಮ ಶಾಲೆ ಸೇರಿದಂತೆ ಕೆಲವೇ ಕೆಲವು ಶಾಲೆಗಳಲ್ಲಿ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಶಾಲೆಗಳಿಗೆ ಬಂದಿದ್ದಾರೆ. ಆಯಾ ಶಾಲೆಯ ಮುಖ್ಯೋಪಾಧ್ಯಾಯ ಮತ್ತು ಶಿಕ್ಷಕರ ಸಿಬ್ಬಂದಿ ಅವುಗಳನ್ನು ತೆಗೆಸಿದ್ದಾರೆ, ಅದು ಬೇರೆ ವಿಷಯ.

ಆದರೆ, ಹುಬ್ಬಳ್ಳಿ ಶಾಲೆಯ ಮಕ್ಕಳಲ್ಲಿ ಒಬ್ಬ ವಿದ್ಯಾರ್ಥಿನಿ ಮತ್ತೊಂದು ಹೆಜ್ಜೆ ಮುಂದೆ ಹೋಗಿದ್ದಾಳೆ. ಈ ತರಗತಿಯ ಮುಂದಿನ ಸಾಲನಲ್ಲಿ ಕುಳಿತಿರುವ ಈ ವಿದ್ಯಾರ್ಥಿನಿಯ ಮಾಸ್ಕ್ ಗಮನಿಸಿ. ಅದರ ಮೇಲೆ ‘ಅಪ್ನಾ ಟೈಮ್ ಆಯೇಗಾ’ ಅಂತ ಬರೆಯಲಾಗಿದೆ. ನಮ್ಮ ಸಮಯ ಬಂದೇ ಬರುತ್ತೆ, ಅಂತ ಎಚ್ಚರ ನೀಡುವಂತಿದೆ ಮಾಸ್ಕ್ ಮೇಲಿನ ಬರಹ.

ಇದು ಪ್ರಾಥಮಿಕ ಶಾಲೆಯಲ್ಲಿ ಓದುವ ಚಿಕ್ಕ ಮಕ್ಕಳ ಮನಸ್ಸಿನಲ್ಲಿ ಹುಟ್ಟುವ ಭಾವನೆ ಅಲ್ಲ. ತಮ್ಮ ಸುತ್ತ ಏನು ನಡೆಯುತ್ತಿದೆ ಅಂತ ಅರ್ಥ ಮಾಡಿಕೊಳ್ಳದ ವಯಸ್ಸು ಅವರದ್ದು. ಆದರೆ, ಅವರನ್ನು ಮನಸ್ಸನ್ನು ಕೆಡಿಸುವ ಕೆಲಸ ಕೆಲವರು ಮಾಡುತ್ತಿದ್ದಾರೆ.

ಅವರನ್ನು ಪತ್ತೆ ಹಚ್ಚಿ ಸರಿದಾರಿಗೆ ಕೆಲಸವನ್ನು ಸಂಬಂಧಪಟ್ಟ ಇಲಾಖೆಗಳು ಮಾಡಬೇಕು. ಕೋರ್ಟಿನ ಆದೇಶವನ್ನು ಉಲ್ಲಂಘಿಸುವುದು ಖಂಡಿತ ಸಲ್ಲದು.

ಇದನ್ನೂ ಓದಿ:   Hijab Row: ಹಿಜಾಬ್ ಪರವಾಗಿ ವಾದಿಸುತ್ತಿರುವ ವಕೀಲ ದೇವದತ್ ಕಾಮತ್‌ಗೆ ಬೆಂಬಲ ಸೂಚಿಸಿದ ರಾಮಕೃಷ್ಣ ಆಶ್ರಮದ ಸ್ವಾಮೀಜಿ