Shivamogga: ಹರ್ಷ ಹತ್ಯೆ ಪ್ರಕರಣ: ಕೊಲೆಗೆ ಬಳಸಿದ್ದ ಕಾರು ಜಪ್ತಿ ಮಾಡಿದ ಪೊಲೀಸರು
ಹರ್ಷ ಹತ್ಯೆಗೆ ಬಳಸಿದ್ದ ಕಾರ್ ಬಗ್ಗೆ ಹರ್ಷ ಕೊಲೆಯಾದ ಮರುದಿನವೇ ಟಿವಿ9ನಲ್ಲಿ ಸುದ್ದಿ ಪ್ರಸಾರ ಮಾಡಲಾಗಿತ್ತು. ಕಾರಿನ ನಂಬರ್ ಸಮೇತ ಟಿವಿ9 ಸುದ್ದಿ ಬ್ರೇಕ್ ಮಾಡಿತ್ತು. ಇದೀಗ ಅದೇ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಶಿವಮೊಗ್ಗ: ನಗರದಲ್ಲಿ ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಹೊಸ ಬೆಳವಣಿಗೆಯೊಂದು ನಡೆದಿದೆ. ಫೆಬ್ರವರಿ 20 ರಂದು ಹರ್ಷನ ಹತ್ಯೆಗೆ ಬಳಸಿದ್ದ ಕಾರು ಪತ್ತೆ ಆಗಿದೆ. ಪೊಲೀಸರಿಂದ CG 13, C 4496 ನೋಂದಣಿ ಕಾರು ಜಪ್ತಿ ಮಾಡಲಾಗಿದೆ. ಹರ್ಷ ಹತ್ಯೆಗೆ ಬಳಸಿದ್ದ ಕಾರ್ ಬಗ್ಗೆ ಹರ್ಷ ಕೊಲೆಯಾದ ಮರುದಿನವೇ ಟಿವಿ9ನಲ್ಲಿ ಸುದ್ದಿ ಪ್ರಸಾರ ಮಾಡಲಾಗಿತ್ತು. ಕಾರಿನ ನಂಬರ್ ಸಮೇತ ಟಿವಿ9 ಸುದ್ದಿ ಬ್ರೇಕ್ ಮಾಡಿತ್ತು. ಇದೀಗ ಅದೇ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಹರ್ಷ ಹಂತಕರಿಗೆ ಗಲ್ಲು ಶಿಕ್ಷೆಯಾಗುವಂತೆ ಸರ್ಕಾರ ನೋಡಿಕೊಳ್ಳಬೇಕು: ಪ್ರಮೋದ್ ಮುತಾಲಿಕ್ ಆಗ್ರಹ
ಈ ಹಿಂದೆ ನಡೆದ ಹಿಂದೂ ಕಾರ್ಯಕರ್ತರ ಹತ್ಯೆ ಪ್ರಕರಣದ ಆರೋಪಿಗಳಿಗೆ ಜಾಮೀನು ಸಿಕ್ಕಿದ್ದು ಹೊರಬಂದಿದ್ದಾರೆ. ಹರ್ಷ ಕೊಲೆ ಕೇಸ್ನಲ್ಲಿ ಆ ರೀತಿ ಆಗದಂತೆ ಸರ್ಕಾರ ಎಚ್ಚರಿಕೆ ವಹಿಸಬೇಕು. ಹಂತಕರಿಗೆ ಗಲ್ಲು ಶಿಕ್ಷೆಯಾಗುವಂತೆ ಸರ್ಕಾರ ನೋಡಿಕೊಳ್ಳಬೇಕು ಎಂದು ಪ್ರಮೋದ್ ಮುತಾಲಿಕ್ ಶಿವಮೊಗ್ಗದಲ್ಲಿ ಶುಕ್ರವಾರ ಆಗ್ರಹಿಸಿದ್ದಾರೆ. ಸ್ಮಗ್ಲರ್, ದರೋಡೆಕೋರ, ರೌಡಿಗಳನ್ನು ಎನ್ಕೌಂಟರ್ ಮಾಡಲಾಗುತ್ತೆ. ಆದರೆ ಬಜರಂಗದಳ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣದ ಆರೋಪಿಗಳನ್ನು ಏಕೆ ಎನ್ಕೌಂಟರ್ ಮಾಡಬಾರದು. ಗುಂಡಿಟ್ಟು ಹತ್ಯೆಗೈಯ್ಯಿರಿ ಅಥವಾ ಕೋಕಾ ಕಾಯ್ದೆಯಡಿ ಕೇಸ್ ದಾಖಲಿಸಿ ಎಂದು ಹೇಳಿದ್ದಾರೆ. ಅಲ್ಲದೆ, ವಿಚಾರಣೆಗೆ ಪ್ರತ್ಯೇಕ ಕೋರ್ಟ್ ಆರಂಭಿಸುವಂತೆ ಸರ್ಕಾರಕ್ಕೆ ಮುತಾಲಿಕ್ ಒತ್ತಾಯ ಮಾಡಿದ್ದಾರೆ.
ಇದನ್ನೂ ಓದಿ: ಶಿವಮೊಗ್ಗ ಎಸ್ಪಿ ಟ್ರಾನ್ಸ್ಫರ್ ಇಲ್ಲ, ಕಾನೂನು ಸುವ್ಯವಸ್ತೆಗೆ ಕಠಿಣ ಕ್ರಮ: ಗೃಹ ಸಚಿವ ಆರಗ ಜ್ಞಾನೇಂದ್ರ
ಇದನ್ನೂ ಓದಿ: ಶಿವಮೊಗ್ಗ: ಮನೆಗೆ ಭೇಟಿ ನೀಡಿದ ರೇಣುಕಾಚಾರ್ಯ ಎದುರು ದುಃಖ ತೋಡಿಕೊಂಡ ಮೃತ ಹರ್ಷನ ತಾಯಿ