AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎರಡೂ ಏರಿಯಾ ಮಧ್ಯೆ ಗೋಡೆ ನಿರ್ಮಿಸಿ: ಅನ್ಯಕೋಮಿನವರ ಕಿರುಕುಳಕ್ಕೆ ರೋಸಿ ಹೋದ ಹಿಂದೂಗಳು

ಎರಡೂ ಏರಿಯಾ ಮಧ್ಯೆ ಗೋಡೆ ನಿರ್ಮಿಸಿ: ಅನ್ಯಕೋಮಿನವರ ಕಿರುಕುಳಕ್ಕೆ ರೋಸಿ ಹೋದ ಹಿಂದೂಗಳು

ರಮೇಶ್ ಬಿ. ಜವಳಗೇರಾ
|

Updated on: Jan 04, 2026 | 11:33 PM

Share

ಹಿಂದೂ ದೇವರ ಮೆರವಣಿಗೆ ವೇಳೆ ಕಲ್ಲು ತೂರಾಟ ನಡದ ಘಟನೆ ಬೆಂಗಳೂರಿನ ಜೆ ಜೆ ಆರ್ ನಗರದ ವಿಎಸ್ ಗಾರ್ಡನ್ ನ ಓಂ ಶಕ್ತಿ ದೇವಸ್ಥಾನದ ಬಳಿ ನಡೆದಿದೆ. ಓಂ ಶಕ್ತಿ ಮಾಲಾಧಾರಿಗಳು ದೇವಿಯ ತೇರು ಎಳೆಯತ್ತಿರುವ ವೇಳೆ ಕಲ್ಲೆಸತ ನಡೆದಿದೆ. ತೇರಿಗೆ ಅನ್ಯಕೋಮಿನವರು ಕಲ್ಲು ಎಸೆದಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಕಲ್ಲೇಟಿಗೆ ಓಂ ಶಕ್ತಿ ಮಾಲಾಧಾರಿ ಮಗು ಗಾಯಗೊಂಡಿದ್ದಾರೆ. ಹಿಂದೂ ದೇವರ ಉತ್ಸವ ವೇಳೆ ಕಲ್ಲೆಸೆತಕ್ಕೆ ಹಿಂದೂ ಸಂಘಟನೆಗಳು ಕೆರಳಿದ್ದು, ಘಟನೆ ಖಂಡಿಸಿ ಪ್ರತಿಭಟನೆ ನಡೆಸುತ್ತಿವೆ. ಈ ಸಂಬಂಧ ಸ್ಥಳೀಯರು ಪ್ರತಿಕ್ರಿಯಿಸಿದ್ದು, ಸ್ಥಳೀಯ ಅನ್ಯಕೋಮಿನ ಜನರ ಕಾಟಕ್ಕೆ ಅಸಮಾಧಾನ ಹೊರಹಾಕಿದ್ದಾರೆ.

ಬೆಂಗಳೂರು, (ಜನವರಿ 04): ಹಿಂದೂ ದೇವರ ಮೆರವಣಿಗೆ ವೇಳೆ ಕಲ್ಲು ತೂರಾಟ ನಡದ ಘಟನೆ ಬೆಂಗಳೂರಿನ ಜೆ ಜೆ ಆರ್ ನಗರದ ವಿಎಸ್ ಗಾರ್ಡನ್ ನ ಓಂ ಶಕ್ತಿ ದೇವಸ್ಥಾನದ ಬಳಿ ನಡೆದಿದೆ. ಓಂ ಶಕ್ತಿ ಮಾಲಾಧಾರಿಗಳು ದೇವಿಯ ತೇರು ಎಳೆಯತ್ತಿರುವ ವೇಳೆ ಕಲ್ಲೆಸತ ನಡೆದಿದೆ. ತೇರಿಗೆ ಅನ್ಯಕೋಮಿನವರು ಕಲ್ಲು ಎಸೆದಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಕಲ್ಲೇಟಿಗೆ ಓಂ ಶಕ್ತಿ ಮಾಲಾಧಾರಿ ಮಗು ಗಾಯಗೊಂಡಿದ್ದಾರೆ. ಹಿಂದೂ ದೇವರ ಉತ್ಸವ ವೇಳೆ ಕಲ್ಲೆಸೆತಕ್ಕೆ ಹಿಂದೂ ಸಂಘಟನೆಗಳು ಕೆರಳಿದ್ದು, ಘಟನೆ ಖಂಡಿಸಿ ಪ್ರತಿಭಟನೆ ನಡೆಸುತ್ತಿವೆ. ಈ ಸಂಬಂಧ ಸ್ಥಳೀಯರು ಪ್ರತಿಕ್ರಿಯಿಸಿದ್ದು, ಸ್ಥಳೀಯ ಅನ್ಯಕೋಮಿನ ಜನರ ಕಾಟಕ್ಕೆ ಅಸಮಾಧಾನ ಹೊರಹಾಕಿದ್ದಾರೆ.

ಇದನ್ನೂ ಓದಿ: ಬಳ್ಳಾರಿ ಬೆನ್ನಲ್ಲೇ ಬೆಂಗಳೂರಿನಲ್ಲೂ ಗಲಭೆ: ಓಂ ಶಕ್ತಿ ಮಾಲಾಧಾರಿಗಳ ಮೇಲೆ ಕಲ್ಲು ತೂರಾಟ

ನಮ್ಮ ಏರಿಯಾದಲ್ಲಿ ಪ್ರತಿದಿನವೂ ಇಂತಹ ಸಮಸ್ಯೆ ಎದುರಿಸ್ತಿದ್ದೇವೆ. ಪ್ರತಿ ದಿನ ಭಯದಲ್ಲೇ ಜೀವನ ನಡೆಸುತ್ತಿದ್ದೇವೆ. ನಮ್ಮ ಏರಿಯಾಗೂ ಅವರ ಏರಿಯಾ ನಡುವೆ ಗೋಡೆ ನಿರ್ಮಿಸಬೇಕು. ನಮ್ಮ ಹೆಣ್ಣುಮಕ್ಕಳು ರಸ್ತೆಯಲ್ಲಿ ಓಡಾಡುವುದೇ ಕಷ್ಟಕರವಾಗಿದ್ದು, ರಸ್ತೆಯಲ್ಲಿ ಮಹಿಳೆಯರು, ಮಕ್ಕಳ ಮೈಮೇಲೆಯೇ ಬೀಳುತ್ತಾರೆ. ಪ್ರತಿರೋಧ ವ್ಯಕ್ತಪಡಿಸಿದವರನ್ನು ಗುರಿಯಾಗಿಸಿ ತೊಂದರೆ ಕೊಡುತ್ತಾರೆ. ನಾವು ಇಲ್ಲಿ ನೆಮ್ಮದಿಯಾಗಿ ಇರಲು ಸರ್ಕಾರ ರಕ್ಷಣೆ ನೀಡಲಿ ಎಂದು ಜೆ.ಜೆ.ನಗರ ಪೊಲೀಸ್ ಠಾಣೆ ಎದುರು ಸ್ಥಳೀಯ ನಿವಾಸಿಗಳ ಆಗ್ರಹವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ