Karnataka budget session: ಗೋಹತ್ಯೆ ನಿಷೇಧ ಕಾಯ್ದೆ ಮೇಲೆ ಆವೇಶದಲ್ಲಿ ಮಾತಾಡುತ್ತಿದ್ದ ಸಿದ್ದರಾಮಯ್ಯನವರನ್ನು ಚೀಟಿಯಲ್ಲಿ ಬಂದ ಸಂದೇಶ ಬ್ರೇಕ್ ಹಾಕಿತು!

|

Updated on: Feb 14, 2023 | 5:09 PM

ಅದನ್ನು ಓದಿದ ಬಳಿಕ ಸಿದ್ದರಾಮಯ್ಯ, ಊಟದ ಬಳಿಕ ಚರ್ಚೆಯನ್ನು ಮುಂದುವರಿಸೋಣ ಅಂತ ಸಭಾಧ್ಯಕ್ಷರಿಗೆ ಮನವಿ ಮಾಡಿ ವಿಷಯದ ಮೇಲೆ ಚರ್ಚೆ ಮಾಡಲು ತಮಗೆ ಅವಾಕಾಶ ನೀಡಬೇಕೆಂದು ಹೇಳುತ್ತಾರೆ.

ಬೆಂಗಳೂರು: ವಿಧಾನ ಮಂಡಲದಲ್ಲಿ ನಡೆಯುತ್ತಿರುವ ಬಜೆಟ್ ಅಧಿವೇಶನದಲ್ಲಿ ಹುನುಗುಂದ ಬಿಜೆಪಿ ಶಾಸಕ ದೊಡ್ಡನಗೌಡ ಪಾಟೀಲ್ (Doddangouda Patil) ಮತ್ತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ (Siddaramaiah) ನಡುವೆ ಜುಗಲ್ ಬಂದಿ ಶುರುವಾದ ಕೊಂಚ ಹೊತ್ತಿನಲ್ಲೇ ಹಠಾತ್ತಾಗಿ ನಿಂತು ಹೋಯಿತು. ರಾಸುಗಳ (cattle) ಬಗ್ಗೆ ದೊಡ್ಡನಗೌಡರು ಅಡುತ್ತಿದ್ದ ಮಾತನ್ನು ಆರ್ಧದಲ್ಲೇ ತುಂಡರಿಸಿ ಮಾತಾಡಲು ಶುರುಮಾಡಿದ ಸಿದ್ದರಾಮಯ್ಯ ಎಲ್ಲ ಸಮಸ್ಯೆಗಳಿಗೆ ಮೂಲ ಕಾರಣ ಗೋಹತ್ಯೆ ನಿಷೇಧ ಕಾಯ್ದೆ, ಅದನ್ನು ತೆಗೆದುಹಾಕಿ ಅಂತ ಹೇಳಿದರು. ಸಮಸ್ಯೆ ಉದ್ಭವಿಸಿರೋದು ಬಿಜೆಪಿಯ ಕೋಮುವಾದಿ ಅಜೆಂಡಾದಿಂದ ಅವರು ಹೇಳುತ್ತಿರುವಾಗಲೇ ಒಂದು ಪೇಪರ್ ನಲ್ಲಿ ಅವರಿಗೊಂದು ಸಂದೇಶ ಬರುತ್ತದೆ. ಅದನ್ನು ಓದಿದ ಬಳಿಕ ಸಿದ್ದರಾಮಯ್ಯ, ಊಟದ ಬಳಿಕ ಚರ್ಚೆಯನ್ನು ಮುಂದುವರಿಸೋಣ ಅಂತ ಸಭಾಧ್ಯಕ್ಷರಿಗೆ ಮನವಿ ಮಾಡಿ ವಿಷಯದ ಮೇಲೆ ಚರ್ಚೆ ಮಾಡಲು ತಮಗೆ ಅವಾಕಾಶ ನೀಡಬೇಕೆಂದು ಹೇಳುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ