ಧಾರವಾಡ: ಪಂಚರತ್ನ ಯಾತ್ರೆ ಹಿನ್ನಲೆ 4 ಕ್ವಿಂಟಾಲ್ ಪೇರಲೆ ಹಣ್ಣಿನ ಹಾರ ಹಾಕಿ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿಯವರಿಗೆ ಸ್ವಾಗತ ಕೋರಿದ ಜನ
ಧಾರವಾಡದಲ್ಲಿ ಇಂದು(ಫೆ.14) ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಪಂಚರತ್ನ ರಥಯಾತ್ರೆ ಕೈಗೊಂಡಿದ್ದು, ಈ ವೇಳೆ 4 ಕ್ವಿಂಟಾಲ್ ಪೇರಲೆ ಹಣ್ಣಿನ ಹಾರ ಹಾಕಿ ಸ್ವಾಗತ ಕೋರಿದ್ದಾರೆ.
ಧಾರವಾಡ: ನಗರದಲ್ಲಿ ಇಂದು(ಫೆ.14) ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ನೇತೃತ್ವದಲ್ಲಿ ಪಂಚರತ್ನ ರಥಯಾತ್ರೆ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ 4 ಕ್ವಿಂಟಾಲ್ ಪೇರಲೆ ಹಣ್ಣಿನ ಹಾಕುವ ಮೂಲಕ ಭರ್ಜರಿ ಸ್ವಾಗತ ಕೋರಿದ್ದಾರೆ. ಇನ್ನು ಈ ಯಾತ್ರೆಯು ನವಲಗುಂದ ತಾಲೂಕಿನ ಶಿರೂರು ಗ್ರಾಮದಿಂದ ಶುರುವಾಗಿದ್ದು, ಸಾವಿರಾರು ಸಂಖ್ಯೆಯಲ್ಲಿ ಜೆಡಿಎಸ್ ಶಾಸಕರು, ಕಾರ್ಯಕರ್ತರು ಸೇರಿದ್ದರು. ಇನ್ನು 4 ಕ್ವಿಂಟಾಲ್ ಪೇರಲೆ ಹಣ್ಣಿನ ಹಾರ ಅಷ್ಟೇ ಅಲ್ಲದೆ ಬೃಹತ್ ಹೂವಿನ ಹಾರ ಕೂಡ ಹಾಕಿದ್ದಾರೆ.
ಇನ್ನಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos