Dream Girl 2: ಲೆಹಂಗಾ ತೊಟ್ಟು ಪಠಾಣ್ ಜತೆ ಫ್ಲರ್ಟ್ ಮಾಡಿದ ಆಯುಷ್ಮಾನ್ ಖುರಾನ; ವಿಡಿಯೋ ವೈರಲ್
ಆಯುಷ್ಮಾನ್ ಅವರು ಹಲವು ಹಿಟ್ ಚಿತ್ರಗಳನ್ನು ನಿಡಿದ್ದಾರೆ. ಈ ಕಾರಣಕ್ಕೆ ಅವರಿಗೆ ಬೇಡಿಕೆ ಹೆಚ್ಚಿದೆ. 28 ಕೋಟಿ ರೂಪಾಯಿ ಬಜೆಟ್ನಲ್ಲಿ ಸಿದ್ಧವಾದ ‘ಡ್ರೀಮ್ ಗರ್ಲ್’ ಸಿನಿಮಾ 200 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿತ್ತು.
ಆಯುಷ್ಮಾನ್ ಖುರಾನ (Ayushmann Khuranna) ಅವರು ಬೇಡಿಕೆಯ ಹೀರೋ ಆಗಿ ಹೊರಹೊಮ್ಮಿದ್ದಾರೆ. ವಿವಿಧ ಪಾತ್ರಗಳ ಮೂಲಕ ಅವರು ಎಲ್ಲರ ಗಮನ ಸೆಳೆಯುವ ಕೆಲಸ ಮಾಡಿದ್ದಾರೆ. ಅವರ ನಟನೆಯ ‘ಡ್ರೀಮ್ ಗರ್ಲ್’ (Dream Girl) ಸಿನಿಮಾ ಹಿಟ್ ಆಯಿತು. ಈಗ ಇದಕ್ಕೆ ಸೀಕ್ವೆಲ್ ಬರುತ್ತಿದೆ. ಆಯುಷ್ಮಾನ್ ಅವರ ಈ ಸಿನಿಮಾದ ಟೀಸರ್ ರಿಲೀಸ್ ಆಗಿದ್ದು, ನಿರೀಕ್ಷೆ ಸೃಷ್ಟಿ ಮಾಡಿದೆ. ಈ ಟೀಸರ್ನಲ್ಲಿ ಆಯುಷ್ಮಾನ್ ಅವರು ಲೆಹಂಗಾ ತೊಟ್ಟು ಪಠಾಣ್ ಜತೆ ಫ್ಲರ್ಟ್ ಮಾಡಿದ್ದಾರೆ.
ಆಯುಷ್ಮಾನ್ ಅವರು ಹಲವು ಹಿಟ್ ಚಿತ್ರಗಳನ್ನು ನಿಡಿದ್ದಾರೆ. ಈ ಕಾರಣಕ್ಕೆ ಅವರಿಗೆ ಬೇಡಿಕೆ ಹೆಚ್ಚಿದೆ. 28 ಕೋಟಿ ರೂಪಾಯಿ ಬಜೆಟ್ನಲ್ಲಿ ಸಿದ್ಧವಾದ ‘ಡ್ರೀಮ್ ಗರ್ಲ್’ ಸಿನಿಮಾ 200 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿತ್ತು. 2019ರಲ್ಲಿ ಈ ಸಿನಿಮಾ ತೆರೆಗೆ ಬಂತು. ಈಗ ನಾಲ್ಕು ವರ್ಷಗಳ ಬಳಿಕ ಈ ಚಿತ್ರಕ್ಕೆ ಸೀಕ್ವೆಲ್ ಸಿದ್ಧವಾಗಿದೆ. ಜುಲೈ 7ಕ್ಕೆ ತೆರೆಗೆ ಬರುತ್ತಿದೆ.
ಲೆಹಂಗಾ ತೊಟ್ಟು, ಗುಲಾಬಿ ಹೂ ಹಿಡಿದು ಆಯುಷ್ಮಾನ್ ನಿಂತಿರುತ್ತಾರೆ. ಅವರಿಗೆ ಒಂದು ಫೋನ್ ಕಾಲ್ ಬರುತ್ತದೆ. ಈ ಕರೆ ಸ್ವೀಕರಿಸಿ, ‘ಪೂಜಾ ಮಾತನಾಡುತ್ತಾ ಇದೀನಿ’ ಎಂದು ಹೇಳುತ್ತಿದ್ದಂತೆ ಎದುರಿದ್ದವರು, ‘ನಾನು ಪಠಾಣ್ ಮಾತನಾಡುತ್ತಾ ಇದೀನಿ’ ಎಂದು ಶಾರುಖ್ ಖಾನ್ ಧ್ವನಿ ಹೋಲುವ ವಾಯ್ಸ್ ಬರುತ್ತದೆ. ‘ಯಾವಾಗ ಬರ್ತೀಯಾ ಪೂಜಾ’ ಎಂದು ಕೇಳಲಾಗುತ್ತದೆ. ಇದಕ್ಕೆ ಉತ್ತರಿಸುವ ಆಯುಷ್ಮಾನ್, ‘ಜುಲೈ 7’ ಎನ್ನುತ್ತಾರೆ. ಈ ಮೂಲಕ ಚಿತ್ರದ ರಿಲೀಸ್ ದಿನಾಂಕ ರಿವೀಲ್ ಮಾಡಲಾಗಿದೆ.
BREAKING NEWS: @Pooja_DreamGirl is back!#7KoSaathMein dekhenge! ?#DreamGirl2 releasing in cinemas on 7th July, 2023.@writerraj @ananyapandayy @EktaaRKapoor @balajimotionpic pic.twitter.com/hW9xSwHrlq
— Ayushmann Khurrana (@ayushmannk) February 13, 2023
ಇದನ್ನೂ ಓದಿ: 900 ಕೋಟಿ ರೂ. ತಲುಪಿದ ‘ಪಠಾಣ್’ ಕಲೆಕ್ಷನ್; ‘ಕೆಜಿಎಫ್ 2’ನ ಒಟ್ಟೂ ಕಲೆಕ್ಷನ್ ಮುರಿಯೋದು ಅಸಾಧ್ಯ?
ಆಯುಷ್ಮಾನ್ ಖುರಾನ ಅವರು 2012ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟರು. ‘ವಿಕ್ಕಿ ಡೋನರ್’ ಅವರ ಮೊದಲ ಸಿನಿಮಾ. ನಂತರ ಹಲವು ಹಿಟ್ ಚಿತ್ರಗಳನ್ನು ಅವರು ನೀಡಿದರು. ‘ಡಾಕ್ಟರ್ ಜಿ’ ಮೊದಲಾದ ಸಿನಿಮಾಗಳು 2022ರಲ್ಲಿ ರಿಲೀಸ್ ಆದವು. ಈಗ ‘ಡ್ರೀಮ್ ಗರ್ಲ್ 2’ ಚಿತ್ರದ ರಿಲೀಸ್ಗಾಗಿ ಅವರು ಕಾದಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ