AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಿವರಾತ್ರಿಗೆ ಗುಡ್​ನ್ಯೂಸ್ ಕೊಡಲಿದ್ದಾರೆ ನರ್ತನ್​; ಯಶ್ ಜತೆಗಿನ ಸಿನಿಮಾ ಯಾವಾಗ?

ನರ್ತನ್ ಮುಂದಿನ ಸಿನಿಮಾ ಕುರಿತು ಹೊಸ ಮಾಹಿತಿ ಹೊರಬಿದ್ದಿದೆ. ಶಿವರಾತ್ರಿಗೆ (ಫೆಬ್ರವರಿ 18) ನರ್ತನ್ ಕಡೆಯಿಂದ ಈ ಬಗ್ಗೆ ಅಪ್​ಡೇಟ್ ಸಿಗಲಿದೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

ಶಿವರಾತ್ರಿಗೆ ಗುಡ್​ನ್ಯೂಸ್ ಕೊಡಲಿದ್ದಾರೆ ನರ್ತನ್​; ಯಶ್ ಜತೆಗಿನ ಸಿನಿಮಾ ಯಾವಾಗ?
ಯಶ್-ನರ್ತನ್
ರಾಜೇಶ್ ದುಗ್ಗುಮನೆ
|

Updated on: Feb 10, 2023 | 12:30 PM

Share

ನರ್ತನ್ (Narthan) ಅವರ ನಿರ್ದೇಶನದ ‘ಮಫ್ತಿ’ ಸಿನಿಮಾ (Mufti Movie) ಸೂಪರ್ ಹಿಟ್ ಆಯಿತು. ಈ ಚಿತ್ರದ ಬಳಿಕ ಅವರು ಯಾವ ಸಿನಿಮಾ ನಿರ್ದೇಶನ ಮಾಡಲಿದ್ದಾರೆ ಅನ್ನೋ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ. ಆದರೆ, ಅವರ ಕಡೆಯಿಂದ ಯಾವುದೇ ಅಧಿಕೃತ ಘೋಷಣೆ ಆಗಿಲ್ಲ. ಈಗ ಅವರ ಮುಂದಿನ ಸಿನಿಮಾ ಕುರಿತು ಹೊಸ ಮಾಹಿತಿ ಹೊರಬಿದ್ದಿದೆ. ಶಿವರಾತ್ರಿಗೆ (ಫೆಬ್ರವರಿ 18) ನರ್ತನ್ ಕಡೆಯಿಂದ ಈ ಬಗ್ಗೆ ಅಪ್​ಡೇಟ್ ಸಿಗಲಿದೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

ನರ್ತನ್ ಮುಂದಿನ ಸಿನಿಮಾ ಯಾವುದು?

‘ಮಫ್ತಿ’ ಸಿನಿಮಾದಲ್ಲಿ ಭೈರತಿ ರಣಗಲ್ ಆಗಿ ಶಿವರಾಜ್​ಕುಮಾರ್ ಕಾಣಿಸಿಕೊಂಡಿದ್ದರು. ಶಿವರಾಜ್​ಕುಮಾರ್ ಹಾಗೂ ನರ್ತನ್ ಮುಂದಿನ ಚಿತ್ರಕ್ಕೆ ‘ಭೈರತಿ ರಣಗಲ್’ ಎಂದೇ ಶೀರ್ಷಿಕೆ ಇಡಲಾಗಿತ್ತು. ಕಾರಣಾಂತರಗಳಿಂದ ಸಿನಿಮಾ ಕೆಲಸ ವಿಳಂಬ ಆದವು. ಸದ್ಯ ಶಿವರಾಜ್​ಕುಮಾರ್ ಜತೆ ಈ ಕುರಿತು ಮಾತುಕತೆ ನಡೆದಿದೆ. ಚಿತ್ರದ ಸ್ಕ್ರಿಪ್ಟ್ ಕೂಡ ಅಂತಿಮವಾಗಿದೆ. ಸದ್ಯ ಶಿವಣ್ಣ ನಟಿಸುತ್ತಿರುವ ಸಿನಿಮಾಗಳ ಕೆಲಸಗಳು ಮುಗಿದ ಬಳಿಕ ‘ಭೈರತಿ ರಣಗಲ್’ ಸಿನಿಮಾ ಸೆಟ್ಟೇರಲಿದೆ. ಮೂಲಗಳ ಪ್ರಕಾರ ಶಿವರಾತ್ರಿಗೆ ನರ್ತನ್ ಕಡೆಯಿಂದ ಗುಡ್​ನ್ಯೂಸ್ ಸಿಗಲಿದೆ.

ಕೆವಿಎನ್ ಜತೆ ನರ್ತನ್​ ಸಿನಿಮಾ?

ಕೆವಿಎನ್ ಪ್ರೊಡಕ್ಷನ್ ಜತೆ ನರ್ತನ್ ಸಿನಿಮಾ ಮಾಡಲಿದ್ದಾರೆ ಎಂಬ ಸುದ್ದಿ ಕಳೆದ ವರ್ಷಾಂತ್ಯಕ್ಕೆ ಹುಟ್ಟಿಕೊಂಡಿತ್ತು. ಇದಕ್ಕೆ ಕಾರಣವೂ ಇದೆ. ನರ್ತನ್​ ಬರ್ತ್​ಡೇ ಪ್ರಯುಕ್ತ ಡಿಸೆಂಬರ್ 30ರಂದು ಕೆವಿಎನ್ ಪ್ರೊಡಕ್ಷನ್ ಟ್ವೀಟ್ ಒಂದನ್ನು ಮಾಡಿತ್ತು. ‘ನಮ್ಮ ನಿರ್ದೇಶಕ’ ಎಂದು ಕೆವಿಎನ್​ ಅವರು ಹೇಳಿದ್ದರು. ಹೀಗಾಗಿ, ನರ್ತನ್ ಮುಂದಿನ ಚಿತ್ರಕ್ಕೆ ಕೆವಿಎನ್ ಬಂಡವಾಳ ಹೂಡಲಿದೆ ಎನ್ನಲಾಗುತ್ತಿದೆ.

ಯಶ್ ಸಿನಿಮಾ ಯಾವಾಗ?

ಯಶ್ ಅವರ 19ನೇ ಚಿತ್ರಕ್ಕೆ ನಿರ್ದೇಶನ ಮಾಡೋದು ಯಾರು ಎನ್ನುವುದು ಯಕ್ಷ ಪ್ರಶ್ನೆ ಆಗಿದೆ. ಈ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ಯಶ್ 19ನೇ ಚಿತ್ರಕ್ಕೆ ನರ್ತನ್ ನಿರ್ದೇಶನ ಮಾಡಲಿದ್ದಾರೆ ಎನ್ನಲಾಗಿತ್ತು. ಆದರೆ, ಅದು ಸಾಧ್ಯವಾಗುತ್ತಿಲ್ಲ. ಮೂಲಗಳ ಪ್ರಕಾರ ಯಶ್ ಅವರ 20ನೇ ಸಿನಿಮಾಗೆ ನರ್ತನ್ ಆ್ಯಕ್ಷನ್ ಕಟ್ ಹೇಳಲಿದ್ದಾರಂತೆ.

ರಾಮ್ ಚರಣ್ ಜತೆ ಸಿನಿಮಾ ಯಾವಾಗ?

ರಾಮ್ ಚರಣ್ ಅವರ ಚಿತ್ರಕ್ಕೆ ನರ್ತನ್ ನಿರ್ದೇಶಕನಾಗಿ ಕೆಲಸ ಮಾಡುತ್ತಾರೆ ಎನ್ನುವ ಸುದ್ದಿ ಕೆಲ ತಿಂಗಳಿಂದ ಇದೆ. ಇಬ್ಬರ ಮಧ್ಯೆ ಮಾತುಕತೆ ನಡೆದಿರೋದು ಹೌದು ಎನ್ನುತ್ತಿವೆ ಮೂಲಗಳು. ಆದರೆ, ಈ ಚಿತ್ರ ಸೆಟ್ಟೇರೋಕೆ ಸಾಕಷ್ಟು ಸಮಯ ಹಿಡಿಯಬಹುದು ಎನ್ನಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Follow Us
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ
ತೀವ್ರ ವಿರೋಧದ ನಡುವೆಯೂ ಮೈಸೂರಿನಲ್ಲಿ ಕಂಬಳಕ್ಕೆ ಟ್ರ್ಯಾಕ್ ನಿರ್ಮಾಣ ಶುರು
ತೀವ್ರ ವಿರೋಧದ ನಡುವೆಯೂ ಮೈಸೂರಿನಲ್ಲಿ ಕಂಬಳಕ್ಕೆ ಟ್ರ್ಯಾಕ್ ನಿರ್ಮಾಣ ಶುರು