AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮದುವೆ ಆದ ಖುಷಿಯಲ್ಲಿ ಕಿಯಾರಾ ಅಡ್ವಾಣಿ ತುಟಿಗೆ ಮುತ್ತಿಟ್ಟ ಸಿದ್ದಾರ್ಥ್​; ಇಲ್ಲಿದೆ ವಿಡಿಯೋ

ಈ ವಿವಾಹ ಎಷ್ಟು ಅದ್ದೂರಿಯಾಗಿತ್ತು ಎಂಬುದಕ್ಕೆ ಈಗ ಹಂಚಿಕೊಂಡಿರುವ ವಿಡಿಯೋನೇ ಸಾಕ್ಷಿ. ಈ ವಿಡಿಯೋದಲ್ಲಿ ಕಿಯಾರಾ ಹಾಗೂ ಸಿದ್ದಾರ್ಥ್ ಸಖತ್ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ.

ಮದುವೆ ಆದ ಖುಷಿಯಲ್ಲಿ ಕಿಯಾರಾ ಅಡ್ವಾಣಿ ತುಟಿಗೆ ಮುತ್ತಿಟ್ಟ ಸಿದ್ದಾರ್ಥ್​; ಇಲ್ಲಿದೆ ವಿಡಿಯೋ
ಕಿಯಾರಾ ಅಡ್ವಾನಿ-ಸಿದ್ದಾರ್ಥ್
ರಾಜೇಶ್ ದುಗ್ಗುಮನೆ
|

Updated on: Feb 10, 2023 | 2:18 PM

Share

ಕಿಯಾರಾ ಅಡ್ವಾಣಿ (Kiara Advani) ಹಾಗೂ ಸಿದ್ದಾರ್ಥ್ ಮಲ್ಹೋತ್ರ ಪ್ರೀತಿಸಿ ಮದುವೆ ಆಗಿದ್ದಾರೆ. ಫೆ.7ರಂದು ಅದ್ದೂರಿಯಾಗಿ ಇವರ ವಿವಾಹ ನೆರವೇರಿದೆ. ಈ ಮದುವೆ ಹೇಗಿತ್ತು ಎಂಬುದಕ್ಕೆ ಕಿಯಾರಾ ಹಾಗೂ ಸಿದ್ಧಾರ್ಥ್ ವಿಡಿಯೋ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಕಿಯಾರಾ ತುಟಿಗೆ ಸಿದ್ದಾರ್ಥ್ (Sidharth Malhotra) ಮುತ್ತಿಟ್ಟಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಪೋಸ್ಟ್ ಮಾಡಿದ ಒಂದು ಗಂಟೆಗೆ ಈ ರೀಲ್​ 23 ಲಕ್ಷ ಲೈಕ್ಸ್ ಪಡೆದುಕೊಂಡಿದೆ. 68 ಲಕ್ಷ ಬಾರಿ ವೀಕ್ಷಣೆ ಕಂಡಿದೆ.

ಕಿಯಾರಾ ಅಡ್ವಾಣಿ ಹಾಗೂ ಸಿದ್ದಾರ್ಥ್​ ಮಲ್ಹೋತ್ರ ರಾಜಸ್ಥಾನದ ಜೈಸಲ್ಮೇರ್​ನ ಸೂರ್ಯಗಢ ಹೋಟೆಲ್​ನಲ್ಲಿ ಮದುವೆ ಆದರು. ಇವರ ಮದುವೆಗೆ ಆರು ಕೋಟಿ ರೂಪಾಯಿ ಖರ್ಚಾಗಿದೆ ಎನ್ನಲಾಗಿದೆ. ಈ ವಿವಾಹ ಎಷ್ಟು ಅದ್ದೂರಿಯಾಗಿತ್ತು ಎಂಬುದಕ್ಕೆ ಈಗ ಹಂಚಿಕೊಂಡಿರುವ ವಿಡಿಯೋನೇ ಸಾಕ್ಷಿ. ಈ ವಿಡಿಯೋದಲ್ಲಿ ಕಿಯಾರಾ ಹಾಗೂ ಸಿದ್ದಾರ್ಥ್ ಸಖತ್ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ.

ಕಿಯಾರಾ ಅವರು ಮುತ್ತಿನ ಚಪ್ಪರದ ಅಡಿಯಲ್ಲಿ ನಡೆದು ಬರುತ್ತಾರೆ. ಅಲ್ಲಿಯೇ ಡ್ಯಾನ್ಸ್ ಮಾಡುತ್ತಾರೆ. ಮತ್ತೊಂದು ಕಡೆ ನಿಂತ ಸಿದ್ದಾರ್ಥ್ ಅವರು ಮದುವೆಗೆ ತಡವಾಯಿತು ಎಂದು ಟೆನ್ಷನ್ ಮಾಡಿಕೊಳ್ಳುತ್ತಾರೆ. ಮಂಟಪಕ್ಕೆ ಬರುವ ಇಬ್ಬರೂ ಹಾರ ಬದಲಾಯಿಸಿಕೊಳ್ಳುತ್ತಾರೆ. ಇಬ್ಬರ ಮೇಲೆ ಹೂವಿನ ಮಳೆ ಸುರಿಯುತ್ತದೆ. ಕಿಯಾರಾ-ಸಿದ್ದಾರ್ಥ್ ಪರಸ್ಪರ ತುಟಿಗೆ ಮುತ್ತಿಟ್ಟುಕೊಳ್ಳುತ್ತಾರೆ.

View this post on Instagram

A post shared by KIARA (@kiaraaliaadvani)

ಈ ವಿಡಿಯೋಗೆ ಸೆಲೆಬ್ರಿಟಿಗಳು, ಅಭಿಮಾನಿಗಳು ಪ್ರೀತಿಯ ಮಳೆ ಸುರಿಸಿದ್ದಾರೆ. ‘ನನ್ನ ಕಣ್ಣಲ್ಲಿ ನೀರು ಬಂತು. ದೇವರು ಒಳ್ಳೆಯದು ಮಾಡಲಿ’ ಎಂದು ನಟಿ ರಾಕುಲ್ ಪ್ರೀತ್ ಸಿಂಗ್ ಹೇಳಿದ್ದಾರೆ. ಅನನ್ಯಾ ಪಾಂಡೆ ಸೇರಿ ಅನೇಕರು ಈ ವಿಡಿಯೋಗೆ ಕಮೆಂಟ್ ಮಾಡಿ ಶುಭಾಶಯ ತಿಳಿಸಿದ್ದಾರೆ.

ಇದನ್ನೂ ಓದಿ: ‘ಕಿಯಾರಾ-ಸಿದ್ದಾರ್ಥ್ ರೀತಿ ನೀವೂ ಒಂದಾಗಿ’; ಒಟ್ಟಾಗಿ ಕಾಣಿಸಿಕೊಂಡ ಕಾರ್ತಿಕ್-ಸಾರಾಗೆ ಫ್ಯಾನ್ಸ್ ಕೋರಿಕೆ

ಕಿಯಾರಾ ಹಾಗೂ ಸಿದ್ದಾರ್ಥ್ ‘ಶೇರ್ಷಾ’ ಸಿನಿಮಾದಲ್ಲಿ ಒಟ್ಟಾಗಿ ನಟಿಸಿದ್ದರು. ಇಬ್ಬರ ಮಧ್ಯೆ ಆಪ್ತತೆ ಬೆಳೆದಿದ್ದು ಇದೇ ಸಿನಿಮಾದ ಸೆಟ್​ನಲ್ಲಿ ಎನ್ನಲಾಗುತ್ತಿದೆ. ಈ ಚಿತ್ರದ ‘ರಾಂಜಾ..’ ಹಾಡು ಹಿಟ್ ಆಗಿದೆ. ಇದೇ ಹಾಡನ್ನು ಕಿಯಾರಾ ವಿಡಿಯೋಗೆ ಬಳಕೆ ಮಾಡಿಕೊಂಡಿದ್ದಾರೆ. ಇವರ ಮದುವೆಯ ಇನ್ನಷ್ಟು ಫೋಟೋ ಹಾಗೂ ವಿಡಿಯೋಗಳು ಬರಲಿ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

VIDEO: 6 ಎಸೆತಗಳಲ್ಲಿ 7 ರನ್​: ಡೆಲ್ಲಿ ಕ್ಯಾಪಿಟಲ್ಸ್​ಗೆ ಇದೆಂಥ ಸೋಲು..!
VIDEO: 6 ಎಸೆತಗಳಲ್ಲಿ 7 ರನ್​: ಡೆಲ್ಲಿ ಕ್ಯಾಪಿಟಲ್ಸ್​ಗೆ ಇದೆಂಥ ಸೋಲು..!
ನಂದಿ ಹಿಲ್ಸ್ ರಸ್ತೆ ಬಳಿ ಚಿರತೆ ಪ್ರತ್ಯಕ್ಷ: ಪ್ರವಾಸಿಗರೇ ಎಚ್ಚರ
ನಂದಿ ಹಿಲ್ಸ್ ರಸ್ತೆ ಬಳಿ ಚಿರತೆ ಪ್ರತ್ಯಕ್ಷ: ಪ್ರವಾಸಿಗರೇ ಎಚ್ಚರ
ಜಮ್ಮು-ಕಾಶ್ಮೀರದ ಗಡಿಯಲ್ಲಿ 5 ಪಾಕಿಸ್ತಾನಿ ಡ್ರೋನ್​ಗಳು ಪತ್ತೆ, ಹೈ ಅಲರ್ಟ್​
ಜಮ್ಮು-ಕಾಶ್ಮೀರದ ಗಡಿಯಲ್ಲಿ 5 ಪಾಕಿಸ್ತಾನಿ ಡ್ರೋನ್​ಗಳು ಪತ್ತೆ, ಹೈ ಅಲರ್ಟ್​
ಪತಿಯ ಅಂತ್ಯಕ್ರಿಯೆಗೆ ಕಂದನ ಜತೆ ಸ್ಟ್ರೆಚರ್​ನಲ್ಲಿ ಬಂದ ಸೈನಿಕನ ಪತ್ನಿ
ಪತಿಯ ಅಂತ್ಯಕ್ರಿಯೆಗೆ ಕಂದನ ಜತೆ ಸ್ಟ್ರೆಚರ್​ನಲ್ಲಿ ಬಂದ ಸೈನಿಕನ ಪತ್ನಿ
ಶುಕ್ರವಾರದಂದು ಹುಳಿ ಪದಾರ್ಥ ತಿನ್ನಲೇಬಾರದು ಯಾಕೆ ಗೊತ್ತಾ?
ಶುಕ್ರವಾರದಂದು ಹುಳಿ ಪದಾರ್ಥ ತಿನ್ನಲೇಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಅದೃಷ್ಟ!
ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಅದೃಷ್ಟ!
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಬಂಧನ
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಬಂಧನ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್