900 ಕೋಟಿ ರೂ. ತಲುಪಿದ ‘ಪಠಾಣ್’ ಕಲೆಕ್ಷನ್; ‘ಕೆಜಿಎಫ್ 2’ನ ಒಟ್ಟೂ ಕಲೆಕ್ಷನ್ ಮುರಿಯೋದು ಅಸಾಧ್ಯ?
‘ಪಠಾಣ್’ ಚಿತ್ರ ತೆರೆಗೆ ಬಂದಿದ್ದು ಜನವರಿ 25ರಂದು. ಈ ಸಿನಿಮಾ ಇಲ್ಲಿವರೆಗೆ ಭಾರತದ ಬಾಕ್ಸ್ ಆಫೀಸ್ನಲ್ಲಿ 464 ಕೋಟಿ ರೂಪಾಯಿ ಹಾಗೂ ವಿಶ್ವ ಬಾಕ್ಸ್ ಆಫೀಸ್ನಲ್ಲಿ 900 ಕೋಟಿ ರೂಪಾಯಿ ಬಾಚಿಕೊಂಡಿದೆ.
‘ಪಠಾಣ್’ ಸಿನಿಮಾ (Pathaan Movie) ತೆರೆಗೆ ಬಂದು ಹಲವು ವಾರಗಳು ಪೂರ್ಣಗೊಳ್ಳುತ್ತಾ ಬಂದಿದೆ. ಆದಾಗ್ಯೂ ಸಿನಿಮಾದ ಗಳಿಕೆ ನಿಂತಿಲ್ಲ. ಈ ಚಿತ್ರ ಒಳ್ಳೆಯ ಕಲೆಕ್ಷನ್ ಮಾಡುತ್ತಿದೆ. ಶುಕ್ರವಾರದ (ಫೆಬ್ರವರಿ 10) ಗಳಿಕೆಯೂ ಸೇರಿದರೆ ಈ ಸಿನಿಮಾದ ವಿಶ್ವ ಬಾಕ್ಸ್ ಆಫೀಸ್ ಕಲೆಕ್ಷನ್ 900 ಕೋಟಿ ರೂಪಾಯಿ ಆಗಿದೆ. ‘ಕೆಜಿಎಫ್ 2’ (KGF Chapter 2) ಚಿತ್ರದ ಒಟ್ಟಾರೆ ಗಳಿಕೆಯನ್ನು ಹಿಂದಿಕ್ಕಲು ‘ಪಠಾಣ್’ಗೆ ಸಾಧ್ಯವಿಲ್ಲ ಎಂದು ಬಾಕ್ಸ್ ಆಫೀಸ್ ಪಂಡಿತರು ಅಭಿಪ್ರಾಯಪಟ್ಟಿದ್ದಾರೆ.
‘ಪಠಾಣ್’ ಚಿತ್ರ ತೆರೆಗೆ ಬಂದಿದ್ದು ಜನವರಿ 25ರಂದು. ಈ ಸಿನಿಮಾ ಇಲ್ಲಿವರೆಗೆ ಭಾರತದ ಬಾಕ್ಸ್ ಆಫೀಸ್ನಲ್ಲಿ 464 ಕೋಟಿ ರೂಪಾಯಿ ಹಾಗೂ ವಿಶ್ವ ಬಾಕ್ಸ್ ಆಫೀಸ್ನಲ್ಲಿ 900 ಕೋಟಿ ರೂಪಾಯಿ ಬಾಚಿಕೊಂಡಿದೆ. ಶುಕ್ರವಾರ ಈ ಸಿನಿಮಾ ಭಾರತದಲ್ಲಿ 5 ಕೋಟಿ ರೂಪಾಯಿ ಅಷ್ಟೇ ಗಳಿಕೆ ಮಾಡಿದೆ. ಇಂದು (ಫೆಬ್ರವರಿ 11) ಹಾಗೂ ನಾಳೆ (ಫೆ.12) ಈ ಸಿನಿಮಾ ಒಳ್ಳೆಯ ಗಳಿಕೆ ಮಾಡಬಹುದು. ಸಿನಿಮಾ ರಿಲೀಸ್ ಆಗಿ ಬಹಳ ಸಮಯ ಕಳೆದಿರುವುದರಿಂದ ಮುಂದಿನ ವಾರದಿಂದ ಚಿತ್ರದ ಕಲೆಕ್ಷನ್ ತಗ್ಗಲಿದೆ.
ಸಿನಿಮಾ ಸದ್ಯ 900 ಕೋಟಿ ರೂಪಾಯಿ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ. ಯಶ್ ನಟನೆಯ ‘ಕೆಜಿಎಫ್ 2’ ಸಿನಿಮಾ ವಿಶ್ವ ಬಾಕ್ಸ್ ಆಫೀಸ್ನಲ್ಲಿ 1300 ಕೋಟಿ ರೂಪಾಯಿ ಬಾಚಿಕೊಂಡಿತ್ತು. ಇದನ್ನು ಹಿಂದಿಕ್ಕಲು ‘ಪಠಾಣ್’ ಚಿತ್ರಕ್ಕೆ 400 ಕೋಟಿ ರೂಪಾಯಿ ಅವಶ್ಯಕತೆ ಇದೆ. ಇಷ್ಟೊಂದು ಗಳಿಕೆ ಮಾಡಲು ‘ಪಠಾಣ್’ ಬಳಿ ಅಸಾಧ್ಯ ಎನ್ನುತ್ತಾರೆ ಬಾಕ್ಸ್ ಆಫೀಸ್ ಪಂಡಿತರು.
ಇದನ್ನೂ ಓದಿ:ಶಿವರಾತ್ರಿಗೆ ಗುಡ್ನ್ಯೂಸ್ ಕೊಡಲಿದ್ದಾರೆ ನರ್ತನ್; ಯಶ್ ಜತೆಗಿನ ಸಿನಿಮಾ ಯಾವಾಗ?
ಭಾರತೀಯ ಬಾಕ್ಸ್ ಆಫೀಸ್ನ ಹಿಂದಿ ವರ್ಷನ್ನಲ್ಲಿ ‘ಕೆಜಿಎಫ್ 2’ ದಾಖಲೆಯನ್ನು ‘ಪಠಾಣ್’ ಮುರಿದಿದೆ. ‘ಕೆಜಿಎಫ್ 2’ ಹಿಂದಿ ಚಿತ್ರರಂಗದಿಂದ 433 ಕೋಟಿ ರೂಪಾಯಿ ಬಾಚಿಕೊಂಡಿತ್ತು. ಈ ಚಿತ್ರವನ್ನು ಹಿಂದಿಕ್ಕಿ ‘ಪಠಾಣ್’ ಎರಡನೇ ಸ್ಥಾನಕ್ಕೆ ಏರಿದೆ. ಮೊದಲ ಸ್ಥಾನದಲ್ಲಿ ‘ಬಾಹುಬಲಿ 2’ ಸಿನಿಮಾ ಇದೆ. ಈ ಚಿತ್ರ 510 ಕೋಟಿ ರೂಪಾಯಿ ಬಾಚಿಕೊಂಡಿತ್ತು. ಈ ಚಿತ್ರದ ದಾಖಲೆ ಮುರಿಯೋಕೆ ‘ಪಠಾಣ್’ಗೆ ಅಸಾಧ್ಯ ಎನ್ನಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ