Karnataka budget Session: ಒಕ್ಕಲಿಗ ಮೀಸಲಾತಿ ಬಗ್ಗೆ ನಾನು ಹೇಳಿರೋದು ತಪ್ಪಾಗಿದ್ದರೆ ರಾಜೀನಾಮೆ ಸಲ್ಲಿಸುತ್ತೇನೆ: ಸಿದ್ದರಾಮಯ್ಯ
ಸಿದ್ದರಾಮಯ್ಯ, ನೀವು ತಪ್ಪು ಕಲ್ಪನೆಯಲ್ಲಿದ್ದೀರಿ, ನಾನು ಹೇಳಿದ್ದು ಏನಾದರೂ ತಪ್ಪಾಗಿದ್ದರೆ ರಾಜೀನಾಮೆ ಸಲ್ಲಿಸುತ್ತೇನೆ ಅಂತ ಆಶೋಕ್ಗೆ ಹೇಳುತ್ತಾರೆ.
ಬೆಂಗಳೂರು: ವಿರೋಧ ಪಕ್ಷದ ಸಿದ್ದರಾಮಯ್ಯ (Siddaramaiah) ನಿಸ್ಸಂದೇಹವಾಗಿ ಅತ್ಯುತ್ತಮ ಸಂಸದೀಯ ಪಟು. ಇವತ್ತು ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕಲ್ಪಿಸುವ ಬಗ್ಗೆ ಮಾತಾಡಿದ ಅವರು ಒಕ್ಕಲಿಗ ಮತ್ತು ಲಿಂಗಾಯತರು ಸಹ ಹಿಂದುಳಿದ ವರ್ಗಕ್ಕೆ ಸೇರಿದವಾಗಿದ್ದಾರೆ ಎಂದು ಹೇಳಿದರು. ಮಂಡಲ್ ಆಯೋಗದ ಶಿಫಾರಸ್ಸುಗಳನ್ನು ಸಹ ಉಲ್ಲೇಖಿಸಿದ ಅವರು ವಿಷಯದ ಮೇಲೆ ವಿಶದವಾಗಿ ಮಾತಾಡುತ್ತಿದ್ದಾಗ ಕಂದಾಯ ಸಚಿವ ಆರ್ ಅಶೋಕ (R Ashoka) ಅವರು ಒಕ್ಕಲಿಗ ಗ್ರಾಮೀಣ ಮತ್ತು ನಗರಗಳಲ್ಲಿ ವಾಸಿ ಒಕ್ಕಲಿಗರ ಬೇರೆ ಬೇರೆ ನಗರವಾಸಿ ಒಕ್ಕಲಿಗರರಿಗೆ 3ಎ ಮೀಸಲಾತಿ (3A reservation) ಅನ್ವಯವಾಗುವುದಿಲ್ಲ ಅಂತ ಹೇಳಿದಾಗ ಸಿದ್ದರಾಮಯ್ಯ, ನೀವು ತಪ್ಪು ಕಲ್ಪನೆಯಲ್ಲಿದ್ದೀರಿ, ನಾನು ಹೇಳಿದ್ದು ಏನಾದರೂ ತಪ್ಪಾಗಿದ್ದರೆ ರಾಜೀನಾಮೆ ಸಲ್ಲಿಸುತ್ತೇನೆ ಎನ್ನುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ