ಅರ್ಧಕ್ಕೆ ನಿಂತಿರುವ ರಸ್ತೆ ಕಾಮಗಾರಿ ಪೂರ್ಣಗೊಳಿಸಿ ಅಂತ ಜನ ಅಂದಿದ್ದಕ್ಕೆ ಭಟ್ಕಳ ಬಿಜೆಪಿ ಶಾಸಕನ ಪಿತ್ತ ನೆತ್ತಿಗೇರಿತು!

ಅರ್ಧಕ್ಕೆ ನಿಂತಿರುವ ರಸ್ತೆ ಕಾಮಗಾರಿ ಪೂರ್ಣಗೊಳಿಸಿ ಅಂತ ಜನ ಅಂದಿದ್ದಕ್ಕೆ ಭಟ್ಕಳ ಬಿಜೆಪಿ ಶಾಸಕನ ಪಿತ್ತ ನೆತ್ತಿಗೇರಿತು!

ಅರುಣ್​ ಕುಮಾರ್​ ಬೆಳ್ಳಿ
|

Updated on:Feb 14, 2023 | 8:26 PM

ಸ್ಥಳೀಯರು ಸಮಾಧಾನದಿಂದ ಮಾತಾಡುತ್ತಿದ್ದರೂ ಶಾಸಕರು ವಿನಾಕಾರಣ ತನ್ನ ಗತ್ತು ಪ್ರದರ್ಶಿಸುತ್ತಿದ್ದಾರೆ. ಯಾರೋ ಒಬ್ಬರು ಸುನೀಲ್ ನಾಯಕ್ ಒದರಾಡುವುದನ್ನು ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿದ್ದಾರೆ.  

ಉತ್ತರ ಕನ್ನಡ: ಜನಪ್ರತಿನಿಧಿಗಳೆಂದರೆ ಹೀಗಿರಬೇಕು ಮಾರಾಯ್ರೇ. ಭಟ್ಕಳದ (Bhatkal) ಬಿಜೆಪಿ ಶಾಸಕ ಸುನೀಲ್ ನಾಯಕ್ (Sunil Nayak) ತನ್ನ ಕ್ಷೇತ್ರದ ಬೈಲೂರು ಎಂಬಲ್ಲಿ ಹಾಳಾಗಿದ್ದ ಸುಮಾರು 2 ಕಿಮೀ ಉದ್ದದ ರಸ್ತೆ ದುರಸ್ತಿ ಕಾಮಗಾರಿ (road works) ಶುರು ಮಾಡಿಸಿ ಅರ್ಧಕ್ಕೆ ನಿಲ್ಲಿಸಿದ್ದಾರೆ. ಅಲ್ಲಿಯ ಜನ ಪ್ರಶ್ನಿಸಿದಕ್ಕೆ ಅವರನ್ನು ಹೆದರಿಸುವ ಧ್ವನಿಯಲ್ಲಿ ಜೋರು ಜೋರಾಗಿ ಕಿರುಚಾಡುತ್ತಿದ್ದಾರೆ. ಸ್ಥಳೀಯರು ಸಮಾಧಾನದಿಂದ ಮಾತಾಡುತ್ತಿದ್ದರೂ ಶಾಸಕರು ವಿನಾಕಾರಣ ತನ್ನ ಗತ್ತು ಪ್ರದರ್ಶಿಸುತ್ತಿದ್ದಾರೆ. ಯಾರೋ ಒಬ್ಬರು ಸುನೀಲ್ ನಾಯಕ್ ಒದರಾಡುವುದನ್ನು ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

 

Published on: Feb 14, 2023 08:26 PM