ಭಾರಿ ಗಾತ್ರದ ಕಾಳಿಂಗ ಸರ್ಪವನ್ನು ಹಿಡಿಯುವುದು ಉರಗ ತಜ್ಞರಿಗೂ ಬಹಳ ಕಷ್ಟ, ವಿಡಿಯೋ ನೋಡಿ!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Nov 15, 2022 | 2:05 PM

ಉರುಗ ತಜ್ಞ ಅಶೋಕ್ ಕಾಳಿಂಗ ಸರ್ಪವನ್ನು ಹಿಡಿಯುವಾಗ 3-4 ಬಾರಿ ಕಚ್ಚುವ ಪ್ರಯತ್ನ ಮಾಡುತ್ತದೆ.

ಮಂಗಳೂರು: ಕಾಳಿಂಗ ಸರ್ಪ (black cobra) ಭಯಂಕರ ಅಪಾಯಕಾರಿ ಮತ್ತು ವಿಷಕಾರಿ. ಸುಮಾರು 10-12 ಅಡಿ ಉದ್ದವಿರಬಹುದಾದ ಭಾರಿ ಕಾಳಿಂಗ ಸರ್ಪವೊಂದು ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕು ಗುರುವಾಯನಕೆರೆಯ ಶಕ್ತಿನಗರದಲ್ಲಿರುವ ಶಶಿರಾಜ್ ಶೆಟ್ಟಿ ಎನ್ನುವವರ ಮನೆಯ ಹಿತ್ತಲನ್ನು ಪ್ರವೇಶಿಸಿ ಉಡವೊಂದನ್ನು (monitor) ಬೇಟೆಯಾಡಿದೆ. ಅದನ್ನು ನುಂಗಲಾಗದೆ ಒದ್ದಾಡುತ್ತಿದ್ದಾಗ ಮನೆ ಮಾಲೀಕ ಹಾವನ್ನು ನೋಡಿ ಉರುಗ ತಜ್ಞ (Snake Expert) ಅಶೋಕ್ (Ashok) ಅವರನ್ನು ಕರೆಸಿಕೊಂಡಿದ್ದಾರೆ. ಅಶೋಕ್ ಅದನ್ನು ಹಿಡಿಯುವಾಗ 3-4 ಬಾರಿ ಕಚ್ಚುವ ಪ್ರಯತ್ನ ಮಾಡುತ್ತದೆ. ಆದರೆ, ಅಶೋಕ್ ಜಾಣ್ಮೆಯಿಂದ ಅದನ್ನು ಪಳಗಿಸಿ ಚೀಲವೊಂದರಲ್ಲಿ ಹಾಕಿಕೊಂಡು ಸುರಕ್ಷಿತ ಸ್ಥಳಕ್ಕೆ ತೆಗೆದುಕೊಂಡು ಹೋಗುತ್ತಾರೆ.