Video: ರೋಬೋಟಿಕ್ ಶಸ್ತ್ರಚಿಕಿತ್ಸೆಯ ಮೂಲಕ 5000 ಕಿ.ಮೀ ದೂರದಿಂದ ಶ್ವಾಸಕೋಶದ ಗಡ್ಡೆ ತೆಗೆದ ವೈದ್ಯರು
ಸರ್ಜಿಕಲ್ ರೋಬೋಟಿಕ್ ಇಂಜಿನಿಯರಿಂಗ್ ಮೂಲಕ ನಡೆಸಲಾದ ಈ ಕಾರ್ಯಾಚರಣೆ ಯಶಸ್ವಿಯಾಗಿದ್ದು, ಇನ್ನು ಮುಂದೆ ರೋಗಿಗಳು ತಮ್ಮ ಊರುಗಳಿಂದ ದೊಡ್ಡ ನಗರಗಳಿಗೆ ಪ್ರಯಾಣಿಸುವ ಅಗತ್ಯವಿಲ್ಲ, ಚಿಕ್ಕ ಚಿಕ್ಕ ನಗರಗಳಲ್ಲಿಯೂ ಉನ್ನತ ಮಟ್ಟದ ವೈದ್ಯಕೀಯ ಸೇವೆಗಳನ್ನು ಪಡೆಯಬಹುದು ಎಂದು ಡಾ.ಲುವೋ ಕ್ವಿಂಗ್‌ಕ್ವಾನ್ ಹೇಳಿದ್ದಾರೆ.
ಚೀನಾದ ಶಾಂಘೈನಲ್ಲಿ 5000 ಕಿಮೀ ದೂರದಲ್ಲಿರುವ ವ್ಯಕ್ತಿಗೆ ವೈದ್ಯರು ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಚೀನಾದ ಶಾಂಘೈ ಚೆಸ್ಟ್ ಆಸ್ಪತ್ರೆಯ ವೈದ್ಯರು ತಮ್ಮ ಸಹೋದ್ಯೋಗಿಗಳೊಂದಿಗೆ ಸ್ವದೇಶಿ ನಿರ್ಮಿತ 5ಜಿ ಸರ್ಜಿಕಲ್ ರೋಬೋಟ್ ಬಳಸಿ ರಿಮೋಟ್ ಕಂಟ್ರೋಲ್ ಆಪರೇಷನ್ ಮಾಡಿದ್ದಾರೆ. ಜುಲೈ 13 ರಂದು ಈ ಶಸ್ತ್ರಚಿಕಿತ್ಸೆ ನಡೆದಿದ್ದು, ರೋಗಿ ಆರೋಗ್ಯವಾಗಿದ್ದಾನೆ ಎಂದು ತಿಳಿದುಬಂದಿದೆ.
ಈ ಶಸ್ತ್ರಚಿಕಿತ್ಸೆಗೆ ವೈದ್ಯರು ಕೇವಲ 1 ಗಂಟೆ ತೆಗೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಸರ್ಜಿಕಲ್ ರೋಬೋಟಿಕ್ ಇಂಜಿನಿಯರಿಂಗ್ ಮೂಲಕ ನಡೆಸಲಾದ ಈ ಕಾರ್ಯಾಚರಣೆ ಯಶಸ್ವಿಯಾಗಿರುವುದರಿಂದ ಇನ್ನು ಮುಂದೆ ರೋಗಿಗಳು ತಮ್ಮ ಊರುಗಳಿಂದ ದೊಡ್ಡ ನಗರಗಳಿಗೆ ಪ್ರಯಾಣಿಸುವ ಅಗತ್ಯವಿಲ್ಲ, ಉನ್ನತ ಮಟ್ಟದ ವೈದ್ಯಕೀಯ ಸೇವೆಗಳನ್ನು ಪಡೆಯಬಹುದು ಎಂದು ಕಾರ್ಯಾಚರಣೆಯ ಮುಖ್ಯಸ್ಥ ಡಾ.ಲುವೋ ಕ್ವಿಂಗ್‌ಕ್ವಾನ್ ಹೇಳಿದ್ದಾರೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: Video Viral : ವೃದ್ದೆಯನ್ನು ಅಲ್ಯೂಮಿನಿಯಂ ಪಾತ್ರೆಯಲ್ಲಿ ಕೂರಿಸಿ ಹೊಳೆ ದಾಟಿ ಆಸ್ಪತ್ರೆಗೆ ಕರೆದುಕೊಂಡು ಬಂದ ವ್ಯಕ್ತಿ