Loading video

ಕರಡಿಯನ್ನು ಬೇಟೆಯಾಡಿ ಕೊಂದು ತಿಂದ ಹುಲಿ! ಸಿಕ್ಕಾಪಟ್ಟೆ ವೈರಲ್ ಆಯ್ತು ವಿಡಿಯೋ

| Updated By: ಸಾಧು ಶ್ರೀನಾಥ್​

Updated on: Jan 25, 2024 | 3:46 PM

ಚಾಮರಾಜನಗರ: ಕಾಡಿನಲ್ಲಿ ವ್ಯಾಘ್ರವೊಂದು ಜಾಂಬುವಂತನನ್ನು ಬೇಟೆಯಾಡಿದ ವಿಡಿಯೋ ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ. ಬಂಡೀಪುರ ಸಫಾರಿಗೆ ತೆರಳಿದ ಪ್ರವಾಸಿಗರ ಮೊಬೈಲ್ ಕ್ಯಾಮರಾದಲ್ಲಿ ರೋಚಕ ದೃಶ್ಯ ಸೆರೆಯಾಗಿದೆ.

ಚಾಮರಾಜನಗರ, ಜನವರಿ 25: ಕಾಡಿನಲ್ಲಿ ವ್ಯಾಘ್ರವೊಂದು ಜಾಂಬುವಂತನನ್ನು ಬೇಟೆಯಾಡಿದ ವಿಡಿಯೋ ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ. ಬಂಡೀಪುರ ಸಫಾರಿಗೆ ತೆರಳಿದ ಪ್ರವಾಸಿಗರ ಮೊಬೈಲ್ ಕ್ಯಾಮರಾದಲ್ಲಿ ರೋಚಕ ದೃಶ್ಯ ಸೆರೆಯಾಗಿದೆ.

ನೀರು ಕುಡಿಯಲು ಬಂದ ಕರಡಿಯನ್ನ ಹುಲಿ ಬೇಟೆಯಾಡಿದೆ. ಕರಡಿ ಮೇಲೆ ದಾಳಿ ಮಾಡಿ ಕೊಂದು ತಿಂದಿದೆ ಹುಲಿ. ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸಫಾರಿಗೆ ತೆರಳಿದ ವೇಳೆ ಹುಲಿ ಬೇಟೆಯಾಡುವ ದೃಶ್ಯ ಸೆರೆ ಆಗಿದೆ. ಹುಲಿಯಿಂದ ತಪ್ಪಿಸಿಕೊಳ್ಳಲು ಎಷ್ಟೇ ಪ್ರಯತ್ನ ಪಟ್ಟರೂ ಸಾಧ್ಯವಾಗದೆ ಕರಡಿ ಒದ್ದಾಡಿದೆ. ಕೊನೆಗೂ ಹುಲಿಯ ಬಾಯಿಗೆ ಸಿಲುಕಿ ಒದ್ದಾಡಿ ಒದ್ದಾಡಿ ಜಾಂಬವಂತ ಪ್ರಾಣ ಬಿಟ್ಟ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ