Woman left ignored: ಮಹಿಳೆಯ ಗೋಳು ಕೇಳುವುದಕ್ಕಿಂತ ಮಾಧ್ಯಮಗಳೊಂದಿಗೆ ಮಾತಾಡುವುದು ಮುಖ್ಯಮಂತ್ರಿಗಳಿಗೆ ಜಾಸ್ತಿ ಮುಖ್ಯವಾಗಿತ್ತು!

|

Updated on: Mar 03, 2023 | 12:30 PM

ಮುಖ್ಯಮಂತ್ರಿಗಳ ಭದ್ರತಾ ಸಿಬ್ಬಂದಿ ಮತ್ತು ಅಧಿಕಾರಿಗಳು ಆಕೆಯನ್ನು ಹಿಂದೆ ತಳ್ಳುತ್ತಾರೆ, ಬೊಮ್ಮಾಯಿ ಅವರು ಎದೆ ಸೆಟೆಸಿಕೊಂಡು ಮಾಧ್ಯಮದ ಕೆಮೆರಾಗಳ ಮುಂದೆ ಬಂದು ನಿಲ್ಲುತ್ತಾರೆ!

ಬೆಂಗಳೂರು: ದೊಡ್ಡವರ ಮಾತೇ ಹಾಗೆ ಸ್ವಾಮಿ, ಜನರ ಕಷ್ಟ ಕೇಳುವಷ್ಟು ವ್ಯವಧಾನ ಅವರಲ್ಲಿ ಇರಲಾರದು. ವ್ಯವಧಾನ ಇತ್ತು ಅಂದುಕೊಳ್ಳಿ, ಮಾಧ್ಯಮದ ಕೆಮೆರಾಗಳಿಗೆ ಪೋಸು ನೀಡಲು ಹುಸಿ ಕಳಕಳಿ ತೋರುತ್ತಾರೆ. ಇದನ್ನು ಯಾಕೆ ಹೇಳಬೇಕಾಗಿದೆಯೆಂದರೆ, ಮುಖ್ಯಮಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರ ಮನೆಯೆದುರು (residence) ಎಂದಿನಂತೆ ಇಂದು ಸಹ ಅನೇಕ ಜನ ತಮ್ಮ ದೂರುದುಮ್ಮಾನ ಹೇಳಿಕೊಳ್ಳಲು ನೆರೆದಿದ್ದರು. ಅವರಲ್ಲೊಬ್ಬ ಮಹಿಳೆ, ಪಾಪ ಅಕೆಗೆ ಅದ್ಯಾವ ಸಮಸ್ಯೆಯಿತ್ತೋ, ಯಾವ ಕಷ್ಟ ರಾಜ್ಯದ ದೊರೆಗೆ ಹೇಳಬೇಕಿಕೊಂಡಿದ್ದಳೋ? ಅಳುತ್ತಾ, ರೋದಿಸುತ್ತಾ (wailing) ಅಕೆ ಬೊಮ್ಮಾಯಿ ಅವರಿಗೆ ತನ್ನ ವೇದನೆ ಹೇಳಿಕೊಳ್ಳಲಾರಂಭಿಸುತ್ತಾಳೆ. ಅದರೆ ಆಕೆಯ ಮಾತುಗಳಿಂದ ಒಂದರೆಡೇ ಕ್ಷಣಗಳಲ್ಲಿ ಮುಖ್ಯಮಂತ್ರಿಗಳಿಗೆ ಬೇಸರ ಹುಟ್ಟಿ ಮುಂದೆ ಸಾಗುತ್ತಾರೆ. ಆ ತಾಯಿ ಸಾರ್ ಸಾರ್… ಅಂತ ಗೋಗರೆಯುತ್ತಾಳೆ. ಮುಖ್ಯಮಂತ್ರಿಗಳ ಭದ್ರತಾ ಸಿಬ್ಬಂದಿ ಮತ್ತು ಅಧಿಕಾರಿಗಳು ಆಕೆಯನ್ನು ಹಿಂದೆ ತಳ್ಳುತ್ತಾರೆ, ಬೊಮ್ಮಾಯಿ ಅವರು ಎದೆ ಸೆಟೆಸಿಕೊಂಡು ಮಾಧ್ಯಮದ ಕೆಮೆರಾಗಳ ಮುಂದೆ ಬಂದು ನಿಲ್ಲುತ್ತಾರೆ!

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ