ಲೋಕಾಯುಕ್ತ ಕಾರ್ಯಚರಣೆ ವೇಳೆ ಪ್ರಶಾಂತ್ ನೌಟಂಕಿ, ನುಂಗಿದ್ದ ಮಹತ್ವದ ಚೀಟಿಯನ್ನು ಕಕ್ಕಿಸಿದ ಅಧಿಕಾರಿಗಳು

ಲೋಕಾಯುಕ್ತ ಕಾರ್ಯಚರಣೆ ವೇಳೆ ಪ್ರಶಾಂತ್ ನೌಟಂಕಿ, ನುಂಗಿದ್ದ ಮಹತ್ವದ ಚೀಟಿಯನ್ನು ಕಕ್ಕಿಸಿದ ಅಧಿಕಾರಿಗಳು

TV9 Web
| Updated By: ರಮೇಶ್ ಬಿ. ಜವಳಗೇರಾ

Updated on:Mar 03, 2023 | 1:01 PM

ಪ್ರಶಾಂತ್ ಕೆಲ ಬಹುಮುಖ್ಯ ದಾಖಲೆಗಳನ್ನು ನುಂಗಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ. ಬಳಿಕ ಲೋಕಾಯುಕ್ತ ಅಧಿಕಾರಿಗಳು ವಾಂತಿ ಮಾಡಿಸುವ ಮೂಲಕ ಮಹತ್ವದ ದಾಖಲೆಗಳನ್ನು ಕಕ್ಕಿಸಿದ್ದಾರೆ.

ಬೆಂಗಳೂರು: ಚೆನ್ನಗಿರಿ ಬಿಜೆಪಿ ಶಾಸಕ ಮಾಡಾಳ್ ವಿರುಪಾಕ್ಷಪ್ಪ ಪುತ್ರ ಪ್ರಶಾಂತ್​ ನಿವಾಸ ಹಾಗೂ ಕಚೇರಿ ಮೇಲೆ ಲೋಕಾಯುಕ್ತ ದಾಳಿ ಮಾಡಿದ್ದು,7.62 ಕೋಟಿ ರೂ ನಗದು ಹಣ ಹಾಗೂ ಕೆಲ ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಬೆಂಗಳೂರಿನ ಸಂಜಯ್​ ನಗರದ ಕೆಎಂವಿ ಮ್ಯಾನ್ಷನ್ ಅಪಾರ್ಟ್ ಮೆಂಟ್ ನಲ್ಲಿರುವ ನಿವಾಸದಲ್ಲಿ ನಿನ್ನೆ ಸಂಜೆಯಿಂದಲೇ ಲೋಕಾಯುಕ್ತ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ ಕ್ರಸೆಂಟ್ ರಸ್ತೆಯಲ್ಲಿ ಕಚೇರಿ ಮೇಲೂ ದಾಳಿ ಮಾಡಿದ್ದು, ಈ ವೇಳೆ ಪ್ರಶಾಂತ್ ಕೆಲ ಬಹುಮುಖ್ಯ ದಾಖಲೆಗಳನ್ನು ನುಂಗಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ. ಬಳಿಕ ಲೋಕಾಯುಕ್ತ ಅಧಿಕಾರಿಗಳು ವಾಂತಿ ಮಾಡಿಸುವ ಮೂಲಕ ಮಹತ್ವದ ದಾಖಲೆಗಳನ್ನು ಕಕ್ಕಿಸಿದ್ದಾರೆ.

Published on: Mar 03, 2023 01:01 PM