ಕಾರವಾರ: ಭಾರತಕ್ಕೆ ಸ್ವಾತಂತ್ರ್ಯ ಸಿಗುವ 5 ತಿಂಗಳು ಮೊದಲು ಹುಟ್ಟಿದ ಮಾಜಿ ಸಚಿವ ಮತ್ತು ಹಿರಿಯ ಕಾಂಗ್ರೆಸ್ ನಾಯಕ ಅರ್ ವಿ ದೇಶಪಾಂಡೆ (RV Deshpande) ಅವರು ಜನ್ಮದಿನದ ಅಮೃತ ಮಹೋತ್ಸವ ಅಚರಿಕೊಳ್ಳುತ್ತಿದ್ದಾರೆ. ಆದರೆ, ಅವರಲ್ಲಿರುವ ಉತ್ಸಾಹ, (enthusiasm) ಚೈತನ್ಯ (spirit) ಮತ್ತು ಹುಮ್ಮಸ್ಸನ್ನು ನೋಡಿ ಮಾರಾಯ್ರೇ. 25ರ ತರುಣರೂ ನಾಚಬೇಕು. ವಿಷಯವೇನೆಂದರೆ, ತಮ್ಮ ಕ್ಷೇತ್ರ ಹಳಿಯಾಳದ ಕೆಕೆ ಹಳ್ಳಿ ಮಠದ ರಥೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಅವರು ದಣಿವರಿಯದೆ ಅರ್ಧಗಂಟೆ ಕಾಲ ಡೊಳ್ಳು ಬಾರಿಸಿದ್ದಾರೆ. ಅವರು ಬಾರಿಸುವಾಗ ಸುತ್ತ ನೆರೆದ ಜನ ಮತ್ತು ಅಭಿಮಾನಿಗಳು ಶಿಳ್ಳೆ, ಕೇಕೆ ಹಾಕುತ್ತಾ ಕುಣಿದಿದ್ದಾರೆ
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ