ಬೆಂಗಳೂರು: ಗುರುವಾರ ಸಾಯಂಕಾಲ ರೂ. 40 ಲಕ್ಷ ಸ್ವೀಕರಿಸುವಾಗ ಸಿಕ್ಕುಬಿದ್ದ ಚನ್ನಗಿರಿ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪನವರ (Madal Virupakshappa) ಪುತ್ರ ಪ್ರಶಾಂತ್ ಮಾಡಾಳ್ (Prashant Madal) ಮತ್ತು ಅವರ ಕಚೇರಿಯ ಸಿಬ್ಬಂದಿ ಅದೆಂಥ ಕಿರಾತಕರೆಂದರೆ ಲೋಕಯುಕ್ತ ದಾಳಿ (Lokayukta Raid) ನಡೆಸಿದ ಸಮಯದಲ್ಲಿ ಕೆಲ ದಾಖಲೆಪತ್ರಗಳನ್ನು ನುಂಗಿಬಿಟ್ಟರಂತೆ! ಲೋಕಾಯುಕ್ತ ಅಧಿಕಾರಿಗಳು ಅವುಗಳನ್ನು ಕಕ್ಕಿಸುವ ಪ್ರಯತ್ನ ಮಾಡಿರುವರಾದರೂ ಅದು ಸಾಧ್ಯವಾಗಿಲ್ಲ. ಅದು ಬಿಡಿ, ಆಧಿಕಾರಿಗಳು ಕಾಗದ ಮತ್ತು ಅದರಲ್ಲಿದ್ದ ವಿವರಗಳನ್ನು ಬೇರೊಂದು ರೀತಿಯಲ್ಲಿ ಕಕ್ಕಿಸುತ್ತಾರೆ. ಪ್ರಶಾಂತ್ ಮನೆ ಮತ್ತು ಕಚೇರಿಯಿಂದ ರೂ. 8 ಕೋಟಿಗಿಂತ ಜಾಸ್ತಿ ಹಣವನ್ನು ವಶಪಡಿಸಿಕೊಳ್ಳಲಾಗಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ