ಜರ್ಮನಿಂದ ಬಂದಿದ್ದ ಯುವಕ ದುರಂತ ಸಾವು: ಆತ ಕಂಡ ಕನಸು ನುಚ್ಚು ನೂರು
ಸ್ನೇಹಿತನ ಮದುವೆಗೆಂದು ಬಂದಿದ್ದ ಯುವಕ ದುರಂತ ಸಾವು ಕಂಡಿದ್ದಾನೆ. ಗೆಳೆಯನ ಮದುವೆಗೆಂದು ತೇಜಸ್ ಗೌಡ ಜರ್ಮನಿಂದ ಮೂರು ದಿನಗಳ ಹಿಂದೆ ಹೂಟ್ಟೂರಿನ ನೆಲಮಂಗಲಕ್ಕೆ ಬಂದಿದ್ದ. ರಿಸೆಪ್ಷನ್ ಮುಗಿಸಿ ಬೈಕ್‌ನಲ್ಲಿ ತೆರಳುವ ವೇಳೆ ಈ ಘನಘೋರ ದುರಂತ ನಡೆದು ಹೋಗಿದೆ. ಹೌದು...ನೆಲಮಂಗಲದಲ್ಲಿ ಫ್ಲೆಕ್ಸ್ ಬ್ಯಾನರ್‌ಗಳ ಹಾವಳಿ ಮತ್ತೊಂದು ಜೀವ ಬಲಿ ಪಡೆದಿದೆ.
ಬೆಂಗಳೂರು, (ನವೆಂಬರ್ 21): ಸ್ನೇಹಿತನ ಮದುವೆಗೆಂದು ಬಂದಿದ್ದ ಯುವಕ ದುರಂತ ಸಾವು ಕಂಡಿದ್ದಾನೆ. ಗೆಳೆಯನ ಮದುವೆಗೆಂದು ತೇಜಸ್ ಗೌಡ ಜರ್ಮನಿಂದ ಮೂರು ದಿನಗಳ ಹಿಂದೆ ಹೂಟ್ಟೂರಿನ ನೆಲಮಂಗಲಕ್ಕೆ ಬಂದಿದ್ದ. ರಿಸೆಪ್ಷನ್ ಮುಗಿಸಿ ಬೈಕ್‌ನಲ್ಲಿ ತೆರಳುವ ವೇಳೆ ಈ ಘನಘೋರ ದುರಂತ ನಡೆದು ಹೋಗಿದೆ. ಹೌದು…ನೆಲಮಂಗಲದಲ್ಲಿ ಫ್ಲೆಕ್ಸ್ ಬ್ಯಾನರ್‌ಗಳ ಹಾವಳಿ ಮತ್ತೊಂದು ಜೀವ ಬಲಿ ಪಡೆದಿದೆ. ಬೈಕ್‌ನಲ್ಲಿ ತೆರಳುತ್ತಿದ್ದಾಗ ಏಕಾಏಕಿ ಫ್ಲೆಕ್ಸ್ ತಗುಲಿ ರಸ್ತೆಗೆ ಬಿದ್ದು ಸಾವನ್ನಪ್ಪಿದ್ದಾನೆ. ತೇಜಸ್ ಗೌಡ ವಿದೇಶದಲ್ಲಿ ಎಂಎಸ್ ಕೊನೆಯ ವರ್ಷದ ವಿದ್ಯಾಭ್ಯಾಸ ಮಾಡುತ್ತಿದ್ದು, ನೂರಾರು ಕನಸುಗಳನ್ನ ಕಟ್ಟಿಕೊಂಡಿದ್ದ. ಆದ್ರೆ, ಸ್ನೇಹಿತನ ಮದುವೆಗೆಂದು ಬಂದು ಕನಸುಗಳೆಲ್ಲ ನಚ್ಚು ನೂರಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
