ರೂಮಿಗೆ ಹೋಗುವಾಗ ಇಬ್ಬರು, ಬರುವಾಗ ಸಿಂಗಲ್: ಇನ್ಸ್ಟಾಗ್ರಾಂ ಗೆಳೆಯನೇ ಪ್ರೇಯಸಿಯ ಉಸಿರು ನಿಲ್ಲಿಸಿಬಿಟ್ನಾ?

Updated on: Nov 24, 2025 | 7:09 PM

ಆಕೆ ನೂರಾರು ಕನಸನ್ನ ಹೊತ್ತು ಆಂಧ್ರ ಪ್ರದೇಶದಿಂದ ಬೆಂಗಳೂರಿಗೆ ವಿದ್ಯಾಭ್ಯಾಸಕ್ಕೆ ಅಂತ ಬಂದಿದ್ಳು. ಹೀಗೆ ಬಂದಾಕೆಗೆ ಇನ್ಸ್ಟಾಗ್ರಾಂ ಮೂಲಕ ಯುವಕ ಪರಿಚಯ ಆಗಿದ್ದ. ಆ ಪರಿಚಯ ಪ್ರೀತಿಗೆ ತಿರುಗಿತ್ತು. ಹೀಗೆ ತಿರುಗಿದ ಪ್ರೀತಿ ಆಕೆಯ ಜೀವವನ್ನೇ ತೆಗೆಯುತ್ತೆ ಅಂತ ಯಾರೂ ಊಹೆ ಮಾಡಿರಲಿಲ್ಲ. ಗೆಳೆಯನ ಜೊತೆ ಗೆಳತಿ ಮನೆಗೆ ಹೋದವಳು ಶವವಾಗಿ ಪತ್ತೆಯಾಗಿದ್ದಾಳೆ. ಹೌದು...ಹುಡುಗಿಯ ಹೆಸರು ದೇವಿಶ್ರೀ. 21 ವರ್ಷದ ದೇವಿಶ್ರೀ ಮೂಲತಃ ಆಂಧ್ರ ಪ್ರದೇಶದ ಅನ್ನಮಯ್ಯ ಜಿಲ್ಲೆಯ ಬಿಕ್ಕಿಂವರೀಪಲ್ಲಿ ಗ್ರಾಮದವಳು

ಬೆಂಗಳೂರು, (ನವೆಂಬರ್ 24): ಆಕೆ ನೂರಾರು ಕನಸನ್ನ ಹೊತ್ತು ಆಂಧ್ರ ಪ್ರದೇಶದಿಂದ ಬೆಂಗಳೂರಿಗೆ ವಿದ್ಯಾಭ್ಯಾಸಕ್ಕೆ ಅಂತ ಬಂದಿದ್ಳು. ಹೀಗೆ ಬಂದಾಕೆಗೆ ಇನ್ಸ್ಟಾಗ್ರಾಂ ಮೂಲಕ ಯುವಕ ಪರಿಚಯ ಆಗಿದ್ದ. ಆ ಪರಿಚಯ ಪ್ರೀತಿಗೆ ತಿರುಗಿತ್ತು. ಹೀಗೆ ತಿರುಗಿದ ಪ್ರೀತಿ ಆಕೆಯ ಜೀವವನ್ನೇ ತೆಗೆಯುತ್ತೆ ಅಂತ ಯಾರೂ ಊಹೆ ಮಾಡಿರಲಿಲ್ಲ. ಗೆಳೆಯನ ಜೊತೆ ಗೆಳತಿ ಮನೆಗೆ ಹೋದವಳು ಶವವಾಗಿ ಪತ್ತೆಯಾಗಿದ್ದಾಳೆ. ಹೌದು…ಹುಡುಗಿಯ ಹೆಸರು ದೇವಿಶ್ರೀ. 21 ವರ್ಷದ ದೇವಿಶ್ರೀ ಮೂಲತಃ ಆಂಧ್ರ ಪ್ರದೇಶದ ಅನ್ನಮಯ್ಯ ಜಿಲ್ಲೆಯ ಬಿಕ್ಕಿಂವರೀಪಲ್ಲಿ ಗ್ರಾಮದವಳು. ರೆಡ್ಡಪ್ಪ ಜಗದಂಭ ದಂಪತಿಯ ಕೊನೆಯ ಮಗಳಾಗಿರುವ ದೇವಿಶ್ರೀ ನೂರಾರು ಕನಸನ್ನ ಹೊತ್ತು ಬೆಂಗಳೂರಿಗೆ ಓದಲು ಬಂದಿದ್ದಳು. ಮಾದನಾಯಕನ ಪೊಲೀಸ್ ಠಾಣಾ ವ್ಯಾಪ್ತಿಯ ತಮ್ಮೇನಹಳ್ಳಿಯಲ್ಲಿ ಪಿಜಿಯಲ್ಲಿ ವಾಸವಾಗಿದ್ದಳು.. ಈಕೆ ಪ್ರತಿಷ್ಟಿತ ಖಾಸಗಿ ಕಾಲೇಜಿನಲ್ಲಿ ಬಿಬಿಎಂ ಓದುತ್ತಿದ್ದು. ನಿನ್ನೆ ಸ್ನೇಹಿತೆ ರೂಂ ಗೆಳೆಯನನ್ನ ಕರೆದೊಯ್ದ ದೇವಿಶ್ರೀ ಬಂದಿದ್ದು ಮಾತ್ರ ಹೆಣವಾಗಿ.

ನಿನ್ನೆ ದೇವಿಶ್ರೀ ತನ್ನ ಸ್ನೇಹಿತ ಪ್ರೇಮ್ವರ್ಧನ್ ಜೊತೆ ತಮ್ಮೇನಹಳ್ಳಿಯಲ್ಲಿರುವ ಗೆಳತಿಯೊಬ್ಬಳ ರೂಂಗೆ ಹೋಗಿದ್ಳು. ಬೆಳಿಗ್ಗೆ 10 ಗಂಟೆಗೆ ಹೋದವರು ರಾತ್ರಿ 8ಗಂಟೆಯ ವರೆಗೂ ರೂಂನಲ್ಲಿದ್ರು.. ಆದರೆ ಅಲ್ಲಿ ಅದೇನಾಯ್ತೋ ಏನೋ ಗೊತ್ತಿಲ್ಲ ಪ್ರೇಮ್ ವರ್ಧನ್ ಮಾತ್ರ 8:30 ಕ್ಕೆ ರೂಂನಿಂದ ಒಬ್ಬನೇ ಹೊರ ಬರುತ್ತಾನೆ. ಇತ್ತ‌ ಮಗಳಿಗೆ ಎಷ್ಟೇ ಕಾಲ್ ಮಾಡಿದ್ರು ಪಿಕ್ ಮಾಡಿರಲಿಲ್ಲ. ಇದರಿಂದ ಗಾಬರಿಗೊಂಡ ಪೋಷಕರು ದೇವಿಶ್ರೀ ಸಹೋದರನಿಗೂ ಹೇಳ್ತಾರೆ. ಕೂಡಲೇ ಆಕೆಯ ಸಹೋದರ ಪಿಜಿ ಬಳಿ ಬಂದು ವಿಚಾರಿಸಿದಾಗ ದೇವಿಶ್ರೀ ಸ್ನೇಹಿತೆಯ ರೂಂಗೆ ಹೋಗಿದ್ದು ತಿಳಿಯುತ್ತೆ. ಬಳಿಕ ಸ್ನೇಹಿತೆಯ ರೂಂಗೆ ಹೋಗಿ ನೋಡಿದಾಗ ದೇವಿಶ್ರೀ ಹೆಣವಾಗಿ ಬಿದ್ದಿದ್ಲು.