Aadhaar Update Date: ಆಧಾರ್ ಕಾರ್ಡ್ ಅಪ್ಡೇಟ್ ಮಾಡಲು ಮತ್ತೊಂದು ಅವಕಾಶ
ಸೆಪ್ಟಂಬರ್ 14ರ ಬಳಿಕವೂ ಆನ್ಲೈನ್ನಲ್ಲಿ ಆಧಾರ್ ಅಪ್ಡೇಟ್ ಮಾಡಬಹುದಾದರೂ ₹50 ಶುಲ್ಕ ನೀಡಬೇಕಾಗುತ್ತದೆ. ಅಲ್ಲಿಯವರೆಗೆ ಉಚಿತ ಅಪ್ಡೇಟ್ಗೆ ಅವಕಾಶವಿದೆ.
ಆಧಾರ್ ಕಾರ್ಡ್ ಉಚಿತ ಅಪ್ಡೇಟ್ಗೆ ಇನ್ನೊಂದು ಛಾನ್ಸ್ ಸಿಕ್ಕಿದೆ. ಆನ್ಲೈನ್ನಲ್ಲಿ ಉಚಿತವಾಗಿ ಆಧಾರ್ ಕಾರ್ಡ್ ಅಪ್ಡೇಟ್ ಮಾಡುವ ಅವಕಾಶವನ್ನು ಇನ್ನಷ್ಟು ಕಾಲ ವಿಸ್ತರಿಸಲಾಗಿದೆ. ಜೂನ್ 14ರವರೆಗೂ ಇದ್ದ ಕಾಲಾವಕಾಶ ಈಗ ಸೆಪ್ಟಂಬರ್ 14ರವರೆಗೂ ಮುಂದುವರಿದಿದೆ. ಯುಐಡಿಎಐ ಈ ವಿಚಾರವನ್ನು ಪ್ರಕಟಿಸಿದೆ. ಆಧಾರ್ ಕಾರ್ಡ್ ಹೊಂದಿರುವವರು ಶುಲ್ಕ ಇಲ್ಲದೇ ಸೆಪ್ಟಂಬರ್ 14ರವರೆಗೂ ಆನ್ಲೈನ್ನಲ್ಲಿ ಮಾಹಿತಿ ಅಪ್ಡೇಟ್ ಮಾಡಬಹುದಾಗಿದೆ. ಆಧಾರ್ ಕೇಂದ್ರಕ್ಕೆ ಹೋಗಿ ಮಾಡಿಸುವುದಾದರೆ ₹50 ಶುಲ್ಕ ಪಾವತಿಸಬೇಕಾಗುತ್ತದೆ. ಸೆಪ್ಟಂಬರ್ 14ರ ಬಳಿಕವೂ ಆನ್ಲೈನ್ನಲ್ಲಿ ಆಧಾರ್ ಅಪ್ಡೇಟ್ ಮಾಡಬಹುದಾದರೂ ₹50 ಶುಲ್ಕ ನೀಡಬೇಕಾಗುತ್ತದೆ. ಅಲ್ಲಿಯವರೆಗೆ ಉಚಿತ ಅಪ್ಡೇಟ್ಗೆ ಅವಕಾಶವಿದೆ.